ಸಿಂದಗಿ : ಉತ್ತರಕರ್ನಾಟಕದ ಜಾನಪದ ಕಲಾವಿದರು ಯಾವುದೇ ಪ್ರಶಸ್ತಿ, ದಾಖಲೆಗೆ, ಫಲಾಪೇಕ್ಷೆಗೆ ಬೆನ್ನುಬಿಳದೇ ತಮ್ಮ ಆತ್ಮ ತೃಪ್ತಿಗಾಗಿ ಕಲಾಪ್ರದರ್ಶನ ಮಾಡಿದ ಪುಣ್ಯಾತ್ಮರು ಎಂದು ಕರ್ನಾಟಕ ಜಾನಪದ ಅಕಾಡೆಮಿ ರಾಜ್ಯ ಸದಸ್ಯ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು.

ಶನಿವಾರ ತಾಲೂಕಿನ ರಾಂಪೂರ ಪಿ.ಎ. ಗ್ರಾಮದ ರಾಂಪೂರ ಪಿ.ಎ. ಗ್ರಾಮದ ಶ್ರೀ ಸಮರ್ಥ ಸದ್ಗುರು ಶ್ರೀ ಸಂಗನಬಸವೇಶ್ವರ ಶಿವಯೋಗಿಗಳ ಆರೂಢಮಠದಲ್ಲಿ ಕರ್ನಾಟಕ ಜಾನಪದ ಪರಿಷತ್ ಸಿಂದಗಿ ತಾಲೂಕಾ ನೂತನ ಘಟಕದ ಕಾರ್ಯಚಟುವಟಿಕೆಗಳ ಉದ್ಘಾಟನೆ ಹಾಗೂ ಜಿಲ್ಲಾ ಮಟ್ಟದ ಜಾನಪದ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು.

IMG 20180310 WA0022

ಎಚ್.ಎಲ್.ನಾಗೇಗೌಡರು ಕಟ್ಟಿದ ಕರ್ನಾಟಕ ಜಾನಪದ ಪರಿಷತ್ತು ಇಂದು ಟಿ. ತಿಮ್ಮೇಗೌಡರ ನೇತೃತ್ವದಲ್ಲಿ ನಾಡಿನ ಉದ್ದಗಲಕ್ಕೂ ಜಾನಪದ ಕಲಾವಿದರನ್ನು ಗುರುತಿಸುವ ಮೂಲಕ ತನ್ನದೆಯಾದ ಛಾಪು ಮೂಡಿಸಿದೆ. ಅವರಿಬ್ಬರ ಸದಾಶೆಯಂತೆ ವಿಜಯಪುರ ಜಿಲ್ಲಾ ಘಟಕ ಜಾನಪದ ಕಲಾವಿದರನ್ನು ಗುರುತಿಸೂವದರ ಮೂಲಕ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಶಂಸಿಸಿದರು.
ನೇತೃತ್ವ ವಹಿಸಿದ ಕಜಾಪ ತಾಲೂಕಾ ಅಧ್ಯಕ್ಷ ರಮೇಶ ಪೂಜಾರ ಮಾತನಾಡಿ, ರಾಜ್ಯದಲ್ಲಿ ಜಾನಪದ ಕಲಾವಿದರ ಸರ್ವೆಕಾರ್ಯ ನಡೆದಿಲ್ಲ. ಸರಕಾರ ಜಾನಪದ ಕಲಾವಿದರ ಸರ್ವೆ ಕಾರ್ಯ ಮಾಡಲು ಮುಂದಾಗಬೇಕು. ತಾಲೂಕಿನಲ್ಲಿ ಅತಿ ಹೆಚ್ಚಿನ ಜಾನದಪ ಕಲಾವಿದರಿದ್ದಾರೆ. ತಾಲೂಕಾ ಘಟಕದ ವತಿಯಿಂದ ಸರ್ವೆಕಾರ್ಯ ಪ್ರಾರಂಭಿಸಲಾಗುವುದು. ಜಾನಪದ ಕಲಾವಿದರನ್ನು ಗುರುತಿಸಿ ಅವರನ್ನು ಪೆÇ್ರೀತ್ಸಾಹಿಸುವ ಕಾರ್ಯ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದರು.

RELATED ARTICLES  ಒಮ್ಮೆ ಹಳೆಯ ನೆನಪು ಮಾಡಿತ್ತೇ ಇಂದಿನ ಬರ್ಗಿ ಟ್ಯಾಂಕರ್ ಪಲ್ಟಿ?

ಕಜಾಪ ಜಿಲ್ಲಾಧ್ಯಕ್ಷ ಬಿ.ಎನ್.ಪಾಟೀಲ ಇಬ್ರಾಹಿಂಪೂರ, ಮಹಿಳಾ ಜಾಗರಣಾ ವೇದಿಕೆ ಅಧ್ಯಕ್ಷೆ ಶೈಲಜಾ ಸ್ಥಾವರಮಠ, ಬಂಡಾಯ ಸಾಹಿತಿ ಸಿದ್ದರಾಮ ಉಪ್ಪಿನ, ಗ್ರಾಮದ ಶ್ರೀ ಸಮರ್ಥ ಸದ್ಗುರು ಶ್ರೀ ಸಂಗನಬಸವೇಶ್ವರ ಶಿವಯೋಗಿಗಳ ಆರೂಢಮಠದ ಕಜಾಪ ಗೌರವಾಧ್ಯಕ್ಷರು ಶ್ರೀ ಸಮರ್ಥ ಸದ್ಗುರು ಶ್ರೀ ವಿರೇಶ್ವರ ಶಿವಯೋಗಿಗಳು, ನೇತೃತ್ವ ವಹಿಸಿದ ಶ್ರೀ ನಿತ್ಯಾನಂದ ಮಹಾರಾಜರು, ಸಮ್ಮುಖ ವಹಿಸಿದ ಜೇವೂರಿನ ಶ್ರೀ ಪಾಂಡುರಂಗ ಮಹಾರಾಜರು, ಆಸಂಗಿಹಾಳದ ಆರೂಢ ಮಠದ ಶ್ರೀ ಶಂಕರಾನಂದ ಮಹಾರಾಜರು, ಶ್ರೀ ಪ್ರಶಾಂತ ಜೋಶಿ, ಧರ್ಮದರ್ಶಿ ಶ್ರೀ ತಿಪ್ಪಣ್ಣ ಮುಜಾವರ, ಡಾ|ಮಹಾಂತೇಶ ಹಿರೇಮಠ, ಡಾ|ಸಂಗಮೇಶ ಪಾಟೀಲ, ದೇವರಹಿಪ್ಪರಗಿ ತಾಲೂಕಾ ಕಜಾಪ ಅಧ್ಯಕ್ಷ ಪ್ರದೀಪ ವಿಶ್ವಕರ್ಮ, ಕೆಂಭಾವಿಯ ಪತ್ರಕರ್ತ ವೀರಣ್ಣ ಕಲಕೇರಿ, ಕೆಂಭಾವಿಯ ಸಾಹಿತಿ ಮಡಿವಳಪ್ಪಗೌಡ ಹೆಗ್ಗನದೊಡ್ಡಿ, ಮಹಾಂತೇಶ ನಾಗೋಜಿ, ಶಂಕರ ಕಟ್ಟಿಮನಿ, ಈರಣ್ಣಗೌಡ ಬಿರಾದಾರ ಹಂದಿಗನೂರ, ಬಸನಗೌಡ ಪಾಟೀಲ ಯಂಕಂಚಿ, ಮಹೇಶ ತಗ್ಗೇಳ್ಳಿ, ಶ್ರೀಕಾಂತ ಕುಂಬಾರ ಚಂದ್ರಕಾಂತ ಮಾವೂರ, ಜಿಲ್ಲೆಯ ವಿವಿಧ ಭಾಗವಗಳಿಂದ 50ಕ್ಕು ಹೆಚ್ಚು ಜಾನಪದ ತಂಡಗಳ ಕಲಾವಿದರು ಆಗಮಿಸಿ ಜಾನಪದ ಕಲೆಗಳಾದ ಪುರವಂತಿಕೆ, ಗೀಗೀ ಪದ, ಹಂತಿಪದ, ಪಾರಿಜಾತದ ಹಾಡು, ಡೊಳ್ಳು, ಕೌಸಾಳಿ, ಹಲಗೆವಾದನ, ಸಂಬಾಳ, ಕೊರವಂಜಿ, ಕೋಲಾಟ ಮುಂತಾದ ಕಲೆಗಳನ್ನು ಪ್ರದರ್ಶನ ಮಾಡಿದರು.
ಪ್ರದರ್ಶನ : ಜಾನಪದ ಕಲಾವಿದರು ತಮ್ಮ ಕಲಾ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬಿದಿಗಳಲ್ಲಿ ಕಲಾಪ್ರದರ್ಶನ ಮಾಡಿದರು. ಕುಂಬ ಹೊತ್ತ ಮಹಿಳೆಯರು ಕಲಾಪ್ರದರ್ಶನದಲ್ಲಿ ಭಾಗವಹಿಸಿದ್ದರು.

RELATED ARTICLES  ಮಾಜಿ ನಟಿ ರಮ್ಯಾ ಕಾರ್ಯಕರ್ತರಿಗೆ ಹೇಳಿದ್ದೇನು ಗೊತ್ತಾ?