ನವದೆಹಲಿ: ಜೀವನದಲ್ಲಿ ನೀವು ಮಾಡಿದ ತಪ್ಪುಗಳಿಂದ ನಿಮ್ಮಲ್ಲಿ ಅಪರಾಧ ಪ್ರಜ್ಞೆ ಕಾಡುತ್ತಿದ್ದೆಯೇ? ನಿಮ್ಮ ಪ್ರೀತಿಪಾತ್ರರ ಅಗಲಿಗೆ ನೋವುಂಟುಮಾಡಿ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದ್ದೆಯೇ?
ಪದೇ ಪದೇ ಹದಗೆಡುತ್ತಿರುವ ಆರೋಗ್ಯ, ಕಷ್ಟಪಟ್ಟು ಸಂಪಾದಿಸಿದ ಹಣ ಷೇರು ಮಾರುಕಟ್ಟೆಯಲ್ಲಿ ನಷ್ಟವಾಗಿ ಹೋಗಿರುವುದು, ವಂಚಿತವಾಗಿರುವುದು, ಹೊಸ ನಗರಕ್ಕೆ ವಲಸೆ ಹೋಗುವುದು, ನಿವೃತ್ತಿ ಜೀವನ ಹೀಗೆ ಜೀವನದಲ್ಲಿ ಹಲವು ಒತ್ತಡದ ಜೀವನಗಳು ವ್ಯಕ್ತಿಯನ್ನು ಖಿನ್ನತೆಗೆ ಒಡ್ಡಬಹುದು.
ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ಭಾರತದಲ್ಲಿ ಸುಮಾರು 5 ಕೋಟಿ ಜನ ಖಿನ್ನತೆಯಿಂದ ಬಳಲುತ್ತಿದ್ದಾರೆ. ವಿಶ್ವದಲ್ಲಿ ಇದರ ಸಂಖ್ಯೆ ಸುಮಾರು 30 ಕೋಟಿಗೂ ಅಧಿಕ. ಕಳೆದ ದಶಕಕ್ಕೆ ಹೋಲಿಸಿದರೆ ಖಿನ್ನತೆಯಿಂದ ಬಳಲುತ್ತಿರುವವರ ಸಂಖ್ಯೆ ಶೇಕಡಾ 18ರಷ್ಟು ಹೆಚ್ಚಾಗಿದೆ. ವಿಶ್ವ ಮಟ್ಟದಲ್ಲಿ ಕೆಳ ಮತ್ತು ಮಧ್ಯಮ ಆದಾಯ ಹೊಂದಿರುವ ಭಾರತದಂತಹ ದೇಶಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಆರೋಗ್ಯ ಸೇವೆಯನ್ನು ಒದಗಿಸುವ ವೇದಿಕೆಯಾದ ಸೆಪಾಲಿಕಾ.ಕಾಂನ ಸಹ ಸ್ಥಾಪಕ ಮಹೇಶ್ ಜಯರಾಮನ್.
ಖಿನ್ನತೆಯಿಂದ ಹೊರಬರಲು ಮಾರ್ಗಗಳೇನು ಎಂಬ ಕುರಿತು ವಿಶ್ವ ಮಾನಸಿಕ ಆರೋಗ್ಯ ದಿನ ಸಂದರ್ಭದಲ್ಲಿ ಕೆಲವು ಅಂಶಗಳನ್ನು ನೀಡಲಾಗಿದೆ.
ಸಮತೋಲಿತ ಆಹಾರವನ್ನು ಸೇವಿಸಿ, ಉತ್ತಮ ಗುಣಮಟ್ಟದ ಕೊಬ್ಬುಗಳು ಸಮೃದ್ಧವಾಗಿರಲಿ: ನಾವು ಸೇವಿಸುವ ಆಹಾರಗಳು ಸಮತೋಲಿತವಾಗಿದ್ದು ಅದರಲ್ಲಿ ಸಾಕಷ್ಟು ಪೋಷಕಾಂಶಗಳಿರಬೇಕು. ಆಹಾರದಲ್ಲಿ ಕಾರ್ಬೊಹೈರ್ಡೇಟ್ ಗಳು, ಕೊಬ್ಬುಗಳಿರುವ ಆಸಿಡ್ ಗಳು, ಒಮೆಗಾ 3 ಮತ್ತು ಒಮೆಗಾ 6, ವಿಟಮಿನ್ ಗಳು ಮತ್ತು ನೀರಿನಂಶ ಹೇರಳವಾಗಿರಬೇಕು. ಸೇವಿಸುವ ಆಹಾರಗಳು ಮೆದುಳಿನ ಆರೋಗ್ಯಕ್ಕೆ ಕಾರಣವಾಗುತ್ತದೆ.
ಪೌಷ್ಟಿಕ-ದಟ್ಟವಾದ ಪ್ರಾಣಿ ಕೊಬ್ಬುಗಳು ಸೇವಿಸುವ ಆಹಾರಗಳಲ್ಲಿ ಸಮತೋಲಿತವಾಗಿದ್ದರೆ ಅವು ಶರೀರಕ್ಕೆ ವಿಟಮಿನ್ ಎ, ಅರಾಚಿಡೊನಿಕ್ ಆಸಿಡ್, ಒಮೆಗಾ 3 ಕೊಬ್ಬಿನಾಮ್ಲಗಳು, ವಿಟಮಿನ್ ಡಿ ಮತ್ತು ವಿಟಮಿನ್ ಕೆ ಒದಗಿಸುತ್ತವೆ. ಈ ಪೌಷ್ಟಿಕಾಂಶಗಳು ಖಿನ್ನತೆ, ಕಾತರತೆಯನ್ನು ತಡೆಯುವುದಲ್ಲದೆ ಏಕಾಗ್ರತೆ ಶಕ್ತಿಯನ್ನು ಹೆಚ್ಚಿಸುತ್ತದೆ, ಮನುಷ್ಯನ ಮಾನಸ್ಥಿಕ ಸ್ಥಿತಿ ಸ್ಥಿಮಿತದಲ್ಲಿರುವಂತೆ ನೋಡಿಕೊಳ್ಳುತ್ತದೆ.
ಅಸಹಜ ಥೈರಾಯ್ಡ್ ಹಾರ್ಮೋನ್ ಮಟ್ಟ ನಮ್ಮ ಮನಸ್ಸಿನ ಭಾವನೆಗಳಲ್ಲಿ ಏರಿಳಿತ, ಆಯಾಸ, ಗೊಂದಲ, ಖಿನ್ನತೆಯನ್ನುಂಟುಮಾಡುತ್ತದೆ. ಹಲವು ಬಾರಿ ಹೈಪೋಥೈರಾಯ್ಡಿಸಮ್ ಹೊಂದಿರುವ ರೋಗಿಗಳು ಈ ರೋಗಲಕ್ಷಣಗಳನ್ನು ಹೊಂದಿರುತ್ತಾರೆ,
ಸಾಕಷ್ಟು ಬಿ ವಿಟಮಿನ್ ಗಳನ್ನು ಸೇವಿಸಿ: ಕಡಿಮೆ ಮಟ್ಟದ ವಿಟಮಿನ್ ಬಿ 12 ಮತ್ತು ಇತರ ಬಿ ಜೀವಸತ್ವಗಳು ಮತ್ತು ಫೋಲೇಟ್ಗಳು ಖಿನ್ನತೆಯನ್ನು ಪ್ರಚೋದಿಸಬಹುದು.ಮನಸ್ಥಿತಿ ಮತ್ತು ಇತರ ಮೆದುಳಿನ ಕ್ರಿಯೆಗಳ ಮೇಲೆ ಪರಿಣಾಮ ಬೀರುವ ಮೆದುಳಿನ ರಾಸಾಯನಿಕಗಳನ್ನು ಉತ್ಪಾದಿಸುವಲ್ಲಿ ಈ ಜೀವಸತ್ವಗಳು ಪ್ರಮುಖ ಪಾತ್ರವಹಿಸುತ್ತವೆ.
ವಿಟಮಿನ್ ಬಿ12 ಪ್ರಾಣಿಗಳ ಉತ್ಪನ್ನಗಳು ಮೀನು, ಮಾಂಸ, ಕೋಳಿ ಮಾಂಸ, ಮೊಟ್ಟೆಗಳು, ಹಾಲು ಮತ್ತು ಚೀಸ್ ಮುಂತಾದ ಹುಲ್ಲನ್ನು ಸೇವಿಸುವ ಪ್ರಾಣಿಗಳ ಆಹಾರದ ಉತ್ಪನ್ನಗಳು, ಧಾನ್ಯಗಳಲ್ಲಿ ಹೇರಳವಾಗಿರುತ್ತವೆ.
ಯೋಗ, ಧ್ಯಾನ ಅಭ್ಯಾಸ ಮಾಡಿ: ಖಿನ್ನತೆ ಮತ್ತು ಇತರ ಮಾನಸಿಕ ಸಮಸ್ಯೆಗಳನ್ನು ನಿವಾರಿಸಲು ಯೋಗ ಮತ್ತು ಧ್ಯಾನ ಅಭ್ಯಾಸಗಳು ಬಹಳ ಉತ್ತಮ ಪರಿಣಾಮ ಬೀರುತ್ತದೆ. ನಿತ್ಯ ಯೋಗಭ್ಯಾಸ ಒಳ್ಳೆಯದು.

RELATED ARTICLES  ಸವತೇಕಾಯಿ ಬಳಸಿ ಸನ್ ಬರ್ನ ತಡೆಯುವುದು ಹೇಗೆ ಗೊತ್ತಾ?