ಯಲ್ಲಾಪುರ; ಮಾರ್ಚ್ 18ರಂದು ನಡೆಯಲಿರುವ ಯುಗಾದಿ ಉತ್ಸವದ ಕಾರ್ಯಕ್ರಮಗಳಿಗಾಗಿ ಯಲ್ಲಾಪುರದ ಪಟ್ಟಣದ ಮಹಿಳೆಯರಿಗಾಗಿ ಶನಿವಾರ ಸಂಜೆ ಶ್ರೀ ಗ್ರಾಮದೇವಿಯ ದೇವಸ್ಥಾನದ ಆವಾರದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಸುಮಾರು 100 ಕ್ಕೂ ಹೆಚ್ಚು ಯುವತಿಯರು ಮಹಿಳೆಯರು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. 15 ನಿಮಿಷಗಳ ಅವಧಿಯ ಮೆಹಂದಿ ಹಚ್ಚುವ ಸ್ಪರ್ಧೆ, 3 ನಿಮಿಷ ಅವಧಿಯ ಕಣ್ಣುಮುಚ್ಚಿ ಮಹಿಳೆಯರಿಗೆ ಮೇಕಪ್ ಮಾಡುವ ಸ್ಪರ್ಧೆ, ಒಂದು ನಿಮಿಷದ ಅವಧಿಯಲ್ಲಿ ಸೂಜಿಯಲ್ಲಿ ದಾರ ಹಾಕುವ ಸ್ಪರ್ಧೆ, 1 ನಿಮಿಷದಲ್ಲಿ ವಸ್ತುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಮೆಮೋರಿ ಸ್ಪರ್ಧೆ, ಸಂಗೀತದ ಲಯಕ್ಕೆ ಚೆಂಡನ್ನು ಪಾಸ್ ಮಾಡುವ ಸ್ಪರ್ಧೆ ಹಾಗೂ ಹಗ್ಗಜಗ್ಗಾಟ ಏರ್ಪಡಿಸಲಾಗಿತ್ತು.
ಯುಗಾದಿ ಉತ್ಸವ ಸಮಿತಿಯ ಮಹಿಳಾ ಪ್ರಮುಖರಾದ ನಮಿತಾ ಬೀಡಿಕರ, ಶೋಭಾ ಹುಲಮನಿ, ವೀಣಾ ಯಲ್ಲಾಪುರಕರ, ರಾಧಾ ಗುಡಿಗಾರ, ಆರತಿ ನಾಯ್ಕ, ಗಿರೀಜಾ ಮಾವಳ್ಳಿ, ರಾಧಾ ಮರಾಟೆ, ವೈಭವಿ ಮಾಲಶೇಟ, ಪ್ರೀಯಾಂಕಾ ಕುದಳೆ, ಸಧಾ ಕುದಳೆ, ಕುಮುದಾ ಮುಂತಾದವರ ನೇತೃತ್ವದಲ್ಲಿ ಸ್ಪರ್ಧೆಗಳು ನಡೆದವು. ಅಕ್ಷತಾ ನಾಯ್ಕ, ಪ್ರೀತಿ ದೇಸಾಯಿ ಹಾಗೂ ದೀಪಾ ಮರಾಟೆ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.