ಹೊನ್ನಾವರ: ಶ್ರೀ ಮಹಾಲಿಂಗೇಶ್ವರ ಗೆಳೆಯರ ಬಳಗದ ವತಿಯಿಂದ ಹೊನ್ನಾವರ ತಾಲೂಕಿನ ಕಢ್ಲೆ ಗ್ರಾಮದ ಉಪ್ಲೆ ರಥಬೀದಿಯಲ್ಲಿ ಪ್ರಥಮ ವರ್ಷದ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಮಾಜಿ ಶಾಸಕರು ಹಾಗೂ ಬಿಜೆಪಿ ಮುಖಂಡರಾದ ದಿನಕರ ಕೆ ಶೆಟ್ಟಿಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂತಹ ಕ್ರೀಡಾಕೂಟಗಳು ಮಾನವನ ಬದುಕಿಗೂ ಪೂರಕ ಹಾಗೂ ಸದೃಢ ಜೀವನ ನಡೆಸಲು ಕ್ರೀಡೆ ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.

RELATED ARTICLES  ನೀರು ತೆಗೆಯುವಾಗ ಆಯತಪ್ಪಿ ಬಾವಿಗೆ ಬಿದ್ದ ಯುವತಿ

ಕಾರ್ಯಕ್ರಮದ ಅದ್ಯಕ್ಷತೆಯನ್ನು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟನ ಅದ್ಯಕ್ಷರು ಹಾಗು ಬಿ ಜೆ ಪಿ ಮುಖಂಡರಾದ ನಾಗರಾಜ ನಾಯಕ ತೊರ್ಕೆ ಅವರು ವಹಿಸಿದ್ದರು.

RELATED ARTICLES  ಮೀಟರ್ ಬಡ್ಡಿ ಕಿರುಕುಳಕ್ಕೆ ಬಲಿಯಾದ ಅಂಗನವಾಡಿ ಶಿಕ್ಷಕಿಗೆ ನ್ಯಾಯ ಕೊಡಿ : ಮತ್ತೆ ಹೋರಾಟ ನಡೆಸಿದ ಅಂಗನವಾಡಿ ಕಾರ್ಯಕರ್ತರು.

ವೇದಿಕೆಯಲ್ಲಿ ಹಳದಿಪುರ ಜಿಲ್ಲಾ ಪಂಚಾಯತ ಸದಸ್ಯರಾದ ಶಿವಾನಂದ ಹೆಗಡೆ. ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಕೃಷ್ಣಗೌಡ ಗ್ರಾಮ ಪಂಚಾಯತ ಅದ್ಯಕ್ಷರಾದ ಉರ್ಮಿಳಾ ಶೇಟ್ ಉಪಾದ್ಯಕ್ಷರಾದ ಗಜಾನನ ಮಡಿವಾಳ ಸದಸ್ಯರಾದ ಗೋವಿಂದ ಗೌಡ , ಕೃಷ್ಣಾನಂದ ಭಟ್ಟ, ಎಂ ಜಿ ಹೆಗಡೆ ನಾಗಿ ಮುಕ್ರಿ ಉಪಸ್ಥಿತರಿದ್ದರು.