ಪಳ್ಳತ್ತಡ್ಕ : ಭಾರತೀಯ ಗೋಗ್ರಾಮ ಯೋಜನೆಯ ನೇತೃತ್ವದಲ್ಲಿ ಗೋವರ್ಧನ ಗೋವಿಹಾರ ಧಾಮ, ಜೋಗಿಯಡ್ಕ, ಚೊಕ್ಕಾಡಿ ಇವರು ತಯಾರಿಸಿರುವ ದೇಶೀಯ ಗೋ ತಳಿಯ ಗೋಮೂತ್ರದ ಅರ್ಕದಿಂದ ನಿರ್ಮಿಸಿರುವ ದ್ರವರೂಪದ ಸಾಬೂನು ” ಅಂಬಾ ಮಲ್ಟಿ ಪರ್ಪಸ್ ಲಿಕ್ವಿಡ್ ” ಎಂಬ ಉತ್ಪನ್ನವನ್ನು ಶ್ರೀ ಸಂಸ್ಥಾನದವರು ಪೆರಾಜೆ ಮಾಣಿ ರಾಮಚಂದ್ರಾಪುರಮಠದಲ್ಲಿ ಲೋಕಾರ್ಪಣೆ ಮಾಡಿ ಅನುಗ್ರಹಿಸಿ ಆಶೀರ್ವದಿಸಿದರು. ನೆಕ್ಕರೆಕಳೆಯ ಗೋವಿಜ್ಞಾನ ಅಧ್ಯಯನ ಕೇಂದ್ರ ಇವರ ಸಹಕಾರವೂ ಈ ಯೋಜನೆಯಲ್ಲಿದೆ.

RELATED ARTICLES  ಗೋಕರ್ಣದಲ್ಲಿ ಮಹಾರುದ್ರ ಪಾರಾಯಣ ವಿಶೇಷ ಪೂಜೆ ಕಾರ್ಯಕ್ರಮ.

ಈ ಉತ್ಪನ್ನವನ್ನು ಪಾತ್ರೆ, ಬಟ್ಟೆ, ವಾಹನ, ಚಿನ್ನಾಭರಣ, ಬೆಳ್ಳಿ ಆಭರಣ , ಪೂಜಾಪರಿಕರಗಳು, ವಾಷಿಂಗ್ ಮೆಷಿನ್ ಗಳಲ್ಲಿ ಉಪಯೋಗಿದಬಹುದಾಗಿದೆ.

ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಭಟ್ ನೆಕ್ಕರೆಕಳೆಯ ಸಂಚಾಲಕರು ಭಾರತೀಯ ಗೋಗ್ರಾಮ ಯೋಜನೆ, ಮಹಾಲಿಂಗೇಶ್ವರ ಭಟ್ಟ ಸಂಚಾಲಕರು ಗೋವರ್ಧನ ಗೋವಿಹಾರ ಧಾಮ, ಡಾ // ವೈ ವಿ ಕೃಷ್ಣಮೂರ್ತಿ ಕಾಮದುಘಾ ಸಂಚಾಲಕರು, ಈಶ್ವರೀ ಬೇರ್ಕಡವು ಅಧ್ಯಕ್ಷೆ ಮಹಾ ಮಂಡಲ, ಗೋವಿಂದಬಳ್ಳಮೂಲೆ ಉಲ್ಲೇಖ ವಿಭಾಗ ಪ್ರಧಾನ ಮಹಾ ಮಂಡಲ, ಅಶೋಕ ಕೆದ್ಲ ಉಪ್ಪನಂಗಡಿ ಹವ್ಯಕ ಮಂಡಲಾಧ್ಯಕ್ಷರು, ಪ್ರೊ ಶ್ರೀಕೃಷ್ಣ ಭಟ್ ಮುಳ್ಳೇರ್ಯ ಹವ್ಯಕ ಮಂಡಲಾಧ್ಯಕ್ಷರು, ಶ್ರೀಕೃಷ್ಣ ಭಟ್ ಮೀನಗದ್ದೆ ಗೋಶಾಲಾ ವಿಭಾಗ ಜೊತೆಕಾರ್ಯದರ್ಶಿ, ಹಾರಕೆರೆ ನಾರಾಯಣ ಭಟ್ ವ್ಯವಸ್ಥಾಪಕರು ಮಾಣೀಮಠ, ಪ್ರಕಾಶ ಪೆಲತ್ತಡಿ ಮತ್ತು ಗೋಗ್ರಾಮ ಯೋಜನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES  ನೋಟ್ ಬ್ಯಾನ್ ನಿಂದ ದೇಶದ ಅಭಿವೃದ್ಧಿ ಕುಂಠಿತವಾಗಿದೆ :ಶಾರದಾ ಶೆಟ್ಟಿ