ಬೆಳಗಾವಿ: ನಗರದ ಕೋಟೆಕೆರೆ ಆವರಣದಲ್ಲಿ ದೇಶದ ಅತಿ ಎತ್ತರದ ರಾಷ್ಟ್ರಧ್ವಜ ಸ್ತಂಭಕ್ಕೆ ಸೋಮವಾರ ಅಧಿಕೃತವಾಗಿ ಚಾಲನೆ ಸಿಗಲಿದೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬುಡಾ ಅಧ್ಯಕ್ಷ, ಉತ್ತರ ಕ್ಷೇತ್ರದ ಶಾಸಕ ಫಿರೋಜ ಸೇs… ಈ ಬಗ್ಗೆ ಮಾಹಿತಿ ನೀಡಿದರು. ಪುಣೆಯ ಬಜಾಜ್‌ ಎಲೆಕ್ಟ್ರಿಕಲ್ಸ್‌ನವರಿಗೆ ಡೆನಿಯರ್‌ ಪಾಲಿಸ್ಟರ್‌ ಬಟ್ಟೆಯಿಂದ ಧ್ವಜ ಸಿದ್ಧಪಡಿಸಲು ಗುತ್ತಿಗೆ ನೀಡಲಾಗಿತ್ತು. 15 ದಿನದಲ್ಲಿ ಧ್ವಜ ಸಿದ್ಧಪಡಿಸಲಾಗಿದೆ. ಸೋಮವಾರ ಬೆಳಗ್ಗೆ 8:30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಧ್ವಜಾರೋಹಣ ಮಾಡುವ ಮೂಲಕ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯಮಂತ್ರಿಯವರಿಂದ ರಾಷ್ಟ್ರಧ್ವಜ ಲೋಕಾರ್ಪಣೆ ಮಾಡುವ ಯೋಜನೆ ಹೊಂದಲಾಗಿತ್ತು. ಸಿದ್ದರಾಮಯ್ಯ ಅವರು ಚುನಾವಣೆ ಸಿದ್ಧತೆಯಲ್ಲಿರುವುದರಿಂದ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ತಿಳಿಸಿದರು.

RELATED ARTICLES  ನಾನು ಅನಂತ್ ಕುಮಾರ್ ಬಾಲವಾದರೆ, ಚಂಪಾ ಸಿಎಂ ಸಿದ್ದರಾಮಯ್ಯ ಬಾಲ!

ವಿಶೇಷತೆ
ಧ್ವಜಸ್ತಂಭ:

– ವಾಘಾ ಬಾರ್ಡರ್‌ನ ಧ್ವಜಸ್ತಂಭಕ್ಕಿಂತಲೂ ಅತಿ ಎತ್ತರದ ಧ್ವಜಸ್ತಂಭ ಇದಾಗಿದೆ.

– ಬೇಸ್‌ ಪ್ಲೇಟ್‌ನಿಂದ ಒಟ್ಟು 110 ಮೀಟರ್‌ ಎತ್ತರದ, ಒಟ್ಟು 36 ಟನ್‌ ತೂಕದ ಸ್ತಂಭ

RELATED ARTICLES  ಉತ್ತರ ಕರ್ನಾಟಕದಿಂದ ಸ್ಪರ್ಧೆ: ಖಚಿತಪಡಿಸಿದ ಬಿಎಸ್ ಯಡಿಯೂರಪ್ಪ

– 1.62 ಕೋಟಿ ರೂ.ವೆಚ್ಚದಲ್ಲಿ ರಾಷ್ಟ್ರಧ್ವಜ ಸ್ತಂಭ ನಿರ್ಮಿಸಲಾಗಿದೆ.

– ರಾತ್ರಿ ಹೊತ್ತಿನಲ್ಲೂ ಧ್ವಜಸ್ತಂಭ ಕಾಣುವಂತೆ ಪೋಕಸ್‌ ಲೈಟ್‌ ವ್ಯವಸ್ಥೆ ಮಾಡಲಾಗಿದೆ.

ರಾಷ್ಟ್ರಧ್ವಜ

– ಸ್ತಂಭದಲ್ಲಿ 120/80 ಅಡಿ ವಿಸ್ತೀರ್ಣದ ರಾಷ್ಟ್ರಧ್ವಜ ಹಾರಾಡಲಿದೆ.

– 1.9 ಮೀಟರ್‌ ಡೈಮನನ್‌ ಹಾಗೂ 14 ಮಿ.ಮೀ. ದಪ್ಪ ಇರುವ ಧ್ವಜ 

– ವಿದ್ಯುನ್ಮಾನ ಯಂತ್ರದ ಸಹಾಯದಿಂದ ರಾಷ್ಟ್ರಧ್ವಜ ಹಾರಾಡಲಿದ್ದು, 3.5 ಎಚ್‌ಪಿ ಮೋಟಾರ್‌ ಅಳವಡಿಸಲಾಗಿದೆ.