ಚಿತ್ರದುರ್ಗ: ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಿರ್ಮಿಸಿರುವ ಹಾಸ್ಟೆಲ್‌ಗ‌ಳು ಸ್ಟಾರ್‌ ಹೋಟೆಲ್‌ಗ‌ಳಂತಿವೆ. ಹಾಸ್ಟೆಲ್‌ಗ‌ಳಲ್ಲಿ ಸೌಲಭ್ಯಗಳಿಲ್ಲ ಎಂದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿರುವ ಬಿಜೆಪಿಯವರು ವಸ್ತುಸ್ಥಿತಿ ಅರಿತು ಮಾತನಾಡಲಿ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌. ಆಂಜನೇಯ ತಾಕೀತು ಮಾಡಿದ್ದಾರೆ.

RELATED ARTICLES  ಶಾಲೆ ಪ್ರಾರಂಭದ ಹೇಳಿಕೆ : ನನಗೆ ನನ್ನ ಮಕ್ಕಳ ಶಿಕ್ಷಣಕ್ಕಿಂತ ಆರೋಗ್ಯ ಮುಖ್ಯ ಎಂದ ಪಾಲಕರು.

ತಾಲೂಕಿನ ಬಾದರಘಟ್ಟ ಗ್ರಾಮದಲ್ಲಿ ಮಾತನಾಡಿ, ಬಿಜೆಪಿಯವರು ಮಾತ್ರವಲ್ಲ, ಪ್ರಧಾನಿ ಮೋದಿ ಅವರಿಂದಲೂ ಇಂತಹ ಹೈಟೆಕ್‌ ಶಾಲೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಇಡೀ ರಾಜ್ಯದಲ್ಲೇ ಮಾದರಿಯಾದ ಹೈಟೆಕ್‌ ವಸತಿ ಶಾಲೆಯನ್ನು ಬಾದರಘಟ್ಟ ಗ್ರಾಮದಲ್ಲಿ ನಿರ್ಮಿಸಲಾಗಿದ್ದು, ಖಾಸಗಿ ಶಾಲೆಗಿಂತ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗಿದೆ. ಹಾಸ್ಟೆಲ್‌ಗ‌ಳಲ್ಲಿ ಸೌಲಭ್ಯಗಳಿಲ್ಲ ಎಂದು ಮಾತನಾಡುವ ಬಿಜೆಪಿಯವರು ಈ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿ ಎಂದರು.

RELATED ARTICLES  ಪಾಕಿಸ್ಥಾನ ಭಾರತಕ್ಕೆ 2.86 ಲಕ್ಷ ಬಿಲ್ ಕೊಟ್ಟಿದ್ದು ಯಾಕೆ ಗೊತ್ತಾ?