ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಕಾಳಮ್ಮದೇವಿ ದೇವಾಲಯದ 32ನೇ ವರ್ಧಂತಿ ಉತ್ಸವ ಮಾರ್ಚ್ 15 ಮತ್ತು 16 ರಂದು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಮಾರ್ಚ್ 15ರಂದು ಬೆಳಿಗ್ಗೆ ಗಣಪತಿ ಪುಣ್ಯಾಹ, ಬ್ರಹ್ಮಕೂರ್ಚ ಹವನ, ಋತ್ವಿಗ್ವರ್ಣನ, ಮಹಾಸಂಕಲ್ಪ, ಗಣಪತಿ ಹವನ ಚಂಡೀಪಾಠ ನಡೆಯಲಿದೆ.

ಮಾರ್ಚ್ 16ರಂದು ಬೆಳಗ್ಗೆ ನವಚಂಡಿಕಾ ಹವನ, ಹಾಗೂ ಪೂರ್ಣಾಹುತಿ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ, ರಾತ್ರಿ 9 ಗಂಟೆಯಿಂದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.

RELATED ARTICLES  ದೇವಾಲಯ ಕದ್ದವರು ಈಗ ಕುಮಟಾ ಪೋಲೀಸರ ಬಲೆಗೆ: ಅಂದರ್ ಆದ್ರು ಮೂರು ಆರೋಪಿಗಳು.

ಎಲ್ಲ ಧಾರ್ಮಿಕ ಕಾರ್ಯಕ್ರಮಗಳ ಪ್ರಧಾನ ಆಚಾರ್ಯತ್ವವನ್ನು ವೇದಮೂರ್ತಿ ವಿದ್ವಾನ ಕೃಷ್ಣ ಭಟ್ ಚಿಮ್ನಳ್ಳಿ, ಹಾಗೂ ಪ್ರಧಾನ ಅರ್ಚಕರಾಗಿ ರಾಮಚಂದ್ರ ಭಟ್ ಕಾರ್ಯನಿರ್ವಹಿಸಲಿದ್ದಾರೆ.

ದೇವಸ್ಥಾನದಲ್ಲಿ ತಯಾರಿ ಉಡಿ, ಕುಂಕುಮಾರ್ಚನೆ, ತುಲಾಭಾರ ಇತ್ಯಾದಿ ಸೇವೆಗಳ ಲಭ್ಯವಿದೆ. ಚಂಡಿ ಹೋಮಕ್ಕೆ. ಅನ್ನಸಂತರ್ಪಣೆಗೆ ಭಕ್ತಾದಿಗಳು ದವಸ ಧಾನ್ಯ ಬೆಲ್ಲ ಇತ್ಯಾದಿ ಸಾಮಗ್ರಿಗಳನ್ನು ನೀಡಬಹುದಾಗಿದೆ. ದೇವಸ್ಥಾನದ ಕಟ್ಟಡದ ಕೆಲಸ ನಿರ್ಮಾಣ ಹಂತದಲ್ಲಿದ್ದು, ಇನ್ನಷ್ಟೇ ಪೂರ್ಣ ಕೊಳ್ಳಬೇಕಾಗಿದೆ ಆದ್ದರಿಂದ ದೇವಸ್ಥಾನ ನಿರ್ಮಾಣಕ್ಕೆ ಭಕ್ತರು ಶಕ್ತಿಯಾನುಸಾರ ದೇಣಿಗೆ ನೀಡಬೇಕಾಗಿ ಕಮಿಟಿಯವರು ಕೋರಿದ್ದಾರೆ .

RELATED ARTICLES  ಯಕ್ಷಗಾನ ತಜ್ಞೆ ಡಾ. ವಿಜಯನಳಿನಿ ರಮೇಶ್ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ