ಯಲ್ಲಾಪುರ ; ಪಟ್ಟಣ ವ್ಯಾಪ್ತಿಯ ಬಿಸಗೋಡ ಕ್ರಾಸ್ ಬಳಿ ಅಕ್ರಮವಾಗಿ ಸಾರಾಯಿ ಸ್ಯಾಚೇಟ್ಸ್ ಗಳನ್ನು ಮಾರಾಟ ಮಾಡುವ ವ್ಯಕ್ತಿಯೋರ್ವನನ್ನು ಯಲ್ಲಾಪುರ ಪೊಲೀಸರು ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ.

ಪ್ಲಾಸ್ಟಿಕ್ ಚೀಲದಲ್ಲಿ ಸುಮಾರು 1600 ರೂ ಮೌಲ್ಯದ ಓರಿಜನಲ್ ಚಾಯ್ಸ್ ಬ್ರಾಂಡನ 60 ಪ್ಯಾಕೆಟ್ಗಳನ್ನು ಯಾವುದೇ ಪಾಸ್ ಅಥವ ಪರವಾನಗಿ ಇಲ್ಲದೆ ಮಾರಾಟ ಮಾಡತೊಡಗಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ಮಾರಾಟ ಮಾಡುತ್ತಿದ್ದ ಸಾರಾಯಿ ಪ್ಯಾಕೆಟ್ ಗಳೊಂದಿಗೆ ಕಿರುವತ್ತಿ ಸಮೀಪದ ಹೊಸಳ್ಳಿ ಖಾರೆವಾಡ ನಿವಾಸಿ ವಸಂತ ಬಾಳಪ್ಪ ಕೂಗನವರ(32) ಎಂಬಾತನನ್ನು ಬಂದಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES  ಸ್ಥಳೀಯ ಸಂಸ್ಥೆ ಚುನಾವಣಾ ಮತ ಎಣಿಕೆ ಪೂರ್ಣ: ಯಾವ ಯಾವ ತಾಲೂಕಿನಲ್ಲಿ ಯಾವ ಪಕ್ಷ ಇಲ್ಲಿದೆ ವರದಿ!