ಭಟ್ಕಳ: ಇಲ್ಲಿನ ಯಲ್ವಡಿಕವೂರ ಪಂಚಾಯತ್ ವ್ಯಾಪ್ತಿಯ ಸರ್ಪನಕಟ್ಟೆಯಲ್ಲಿ ಕೃಷಿಕನೋರ್ವ ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ನೆಲಕ್ಕೆ ಕುಸಿದು ಬಿದ್ದು ಮೃತ ಪಟ್ಟಿದ್ದಾನೆ.
ಮೃತ ಸರ್ಪನಕಟ್ಟೆಯ ನಿವಾಸಿ ನಾಗಪ್ಪ ಭೀಮಾ ಗೊಂಡ(46) ಎಂದು ತಿಳಿದು ಬಂದಿದೆ. ಈ ಕುರಿತು ಮೃತ ವ್ಯಕ್ತಿಯ ಪುತ್ರ ಜಯಂತ ನಾಗಪ್ಪ ಗೊಂಡ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾನೆ. ಮನೆಯಿಂದ ಬೆಳಿಗ್ಗೆ 8 ಗಂಟೆಗೆ ಅವರ ತೋಟಕ್ಕೆ ಕೃಷಿ ಕೆಲಸ ಮಾಡಲು ಹೋದಾಗ ಮಧ್ಯಾಹ್ನ 2 ಗಂಟೆಗೆ ಕೃಷಿ ಕೆಲಸದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಪ್ರಕರಣವನ್ನು ಗ್ರಾಮೀಣ ಠಾಣೆ ಪಿಎಎಸೈ ರವಿ ಜಿ.ಎ. ತನಿಖೆಯನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ.

RELATED ARTICLES  ಜನಶಿಕ್ಷಣ ಸಂಸ್ಥಾನದಿಂದ ಅಂಕೋಲಾದಲ್ಲಿ ‘ಸ್ವಚ್ಚತಾ ಪಕ್ವಾಡಾ’ ಕಾರ್ಯಕ್ರಮ