ಕುಮಟಾ : ಒಳಚರಂಡಿ ಯೋಜನೆಯ ಕಾಮಗಾರಿ ಸಮರ್ಪಕವಾಗಿ ಆಗಿಲ್ಲ ಎಂಬುದಾಗಿ‌ ಬಗ್ಗೋಣ ಊರ ನಾಗರಿಕರು ಆಕ್ರೋಶಗೊಂಡು ರಸ್ತೆ ತಡೆ ನಡೆಸಿದ ಘಟನೆ ನಡೆದಿದೆ.

ಒಳ್ಳೆಯ ರಸ್ತೆಯನ್ನು ಹೊಂಡಗಳನ್ನಾಗಿ ಮಾಡಿ ಪುನಃ ಕಾಟಾಚಾರಕ್ಕೆ ಡಾಂಬರಿಕರಣ ಮಾಡಿದ್ದಾರೆ ಆದರೆ ದಿನನಿತ್ಯವೂ ಊರಕೇರಿ ಬಗ್ಗೋಣ ಮಾರ್ಗವಾಗಿ ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಹಾಗೂ ಹೊಟ್ಟೆ ಪಾಡಿಗಾಗಿ ಕೂಲಿ ಕೆಲಸ ಮಾಡಲು ಕುಮಟಾ ನಗರಕ್ಕೆ ಹೋಗುವ ಜನ ಇಲ್ಲಿಯ ದಾರಿಯಲ್ಲಿಯೇ ತೆರಳಬೇಕು. ಆದರೆ ರಾತ್ರಿ ಸಮಯದಲ್ಲಿ ಮನೆಗೆ ತೆರಳುವಾಗ ಯಮರೂಪಿ ಯಂತೆ ಕಾದು ಕುಳಿತಿರುವ ಹೊಂಡದಲ್ಲಿ ಬಿದ್ದು ಎಷ್ಟೋ ಊರಿನ ಜನರು ಬಿದ್ದು ಗಾಯಗೊಂಡಿದ್ದಾರೆ ಎಂದು ಈ ಸಂದರ್ಭದಲ್ಲಿ ಜನರು ಆಕ್ರೋಶ ಹೊರ ಹಾಕಿದರು.

RELATED ARTICLES  ನಾಳೆ ಶಿರಸಿಯಲ್ಲಿ ಜಿಲ್ಲಾ ಕ.ಸಾ.ಪ.ದಿಂದ ‘ಅನುಭವ ಮಂಟಪ’ ಉದ್ಘಾಟನೆ

ಇದೆ ಮಾರ್ಗದಲ್ಲಿ ಕೆ.ಎಸ್.ಆರ್.ಟೊ.ಸಿ ಬಸ್ಸುಗಳು ಸಂಚರಿಸುತ್ತವೆ ಸಂಚರಿಸುವಾಗ ಬಸ್ಸ ಟಯರ್ ಪಂಚರ ಆಗಿ ಶಾಲಾ ಮಕ್ಕಳು ಶಾಲೆಗೆ ಹೋಗದೆ ಪುನಃ ಮನೆಗೆ ಹೋಗುವಂತಾಗಿದೆ. ಕುಮಟಾ ಸರಕಾರಿ ಆಸ್ಪತ್ರೆಯಿಂದ ಬಗ್ಗೋಣ ಮೂಲಕ ಬರುವಾಗ ಏಳು ನೂರಕ್ಕೂ ಮನೆಗಳು ರಸ್ತೆಯ ಇಂಚಿನಲ್ಲಿ ಇದೆ ಆದರೆ ಒಳಚರಂಡಿಯವರು ಕಾಟಾಚಾರಕ್ಕೆ ರಸ್ತೆಯ ಹೊಂಡವನ್ನು ತುಂಬಲು ಹಾಕಿದ ಮಣ್ಣುಗಳ ಮೇಲೆ ವಾಹನಗಳು ಸಂಚರಿಸುವುದರಿಂದ ಮನೆಗಳಿಗೆ ಧೂಳು ಬರುತ್ತಿದೆ. ಮನೆಗಳೆಲ್ಲಾ ಮಣ್ಣು ಮಯವಾಗಿದೆ. ಇದರಿಂದಾಗಿ ಮಕ್ಕಳಿಗೆ ಆರೋಗ್ಯ ಕೆಡುತ್ತಿದ್ದು ಊರಿನ ಗ್ರಾಮಸ್ಥರು ಆತಂಕವನ್ನು ಪಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.

RELATED ARTICLES  ಬಸ್ ಗೆ ಕಾಯುತ್ತಿರುವ ವಿದ್ಯಾರ್ಥಿಗೆ ಬೈಕ್ ಬಡಿದು ಗಂಭೀರ ಪೆಟ್ಟು…!

ಸಂಬಂಧ ಪಟ್ಟ ಅಧಿಕಾರಿಗಳು ಈ ಸ್ಥಳಕ್ಕೆ ಆಗಮಿಸಿ ಈ ಕ್ಷಣದಲ್ಲಿ ರಸ್ತೆಗಳನ್ನು ಡಾಂಬರಿಕರಣ ಮಾಡಬೇಕು ಇಲ್ಲವಾದಲ್ಲಿ ಮುಂದೆ ಆಗುವ ಪ್ರತಿಭಟನೆಗೆ ಅಧಿಕಾರಿಗಳೇ ನೇರ ಹೊಣೆ ಆಗುತ್ತಾರೆಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿ ಪೋಲೀಸರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ತಿಳಿಯಾಗಿಸಿದರು. ಪೊಲೀಸ್ ಹಾಗೂ ಯೋಜನೆಯ ಅಧಿಕಾರಿಗಳಿಗೆ ಸ್ಥಳಕ್ಕೆ ಬರುವಂತೆ ಎಚ್ಚರಿಕೆ ನೀಡಿದರು. ಪುರಸಭಾ ಅಧ್ಯಕ್ಷರಾದ ಮಧುಸೂಧನ್ ಶೇಟ್ ಜನರ ಜೊತೆ ಮಾತುಕತೆ ನಡೆಸಿದರು. ನಂತರ ಈ ಭಾಗದ ಒಳಚರಂಡಿ ಯೋಜನೆಯ ಕೆಲಸವನ್ನು ತಕ್ಷಣ ನಿಲ್ಲಿಸುವಂತೆ ಆದೇಶ ನೀಡಿದರು ಎನ್ನಲಾಗಿದೆ.