ಕುಮಟಾ:ತಾಲೂಕಿನ ಕೋಡಕಣಿಯಲ್ಲಿರುವ ಕೋಡಕಣಿ ಸಿಂಡಿಕೇಟ್ ಬ್ಯಾಂಕ್ ಎತ್ತಂಗಡಿ ಮಾಡುವ ಪ್ರಯತ್ನ ನಡೆದಿದೆ ಎಂಬ ವದಂತಿ ಕೋಡಕಣಿ ಗ್ರಾಮಸ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಕೋಡಕಣಿ ಬ್ರಾಂಚ್ ಸ್ಥಳಾಂತರಿಸದಂತೆ ಬಿ.ಜೆ.ಪಿ ಮುಖಂಡರಾದ ದಿನಕರಶೆಟ್ಟಿ ಯವರ ಮುಂದಾಳತ್ವದಲ್ಲಿ ಊರ ನಾಗರಿಕರು ಮನವಿ ನೀಡುವದರ ಮೂಲಕ ನ್ಯಾಯ ಬೇಕು ಎಂಬ ಘೋಷಣೆ ಕೂಗಿ ಎಚ್ಚರಿಕೆ ನೀಡಿದರು.ಮತ್ತು ಸ್ಥಳಾಂತರಿಸುವ ಪ್ರಯತ್ನ ನಡೆದಲ್ಲಿ ಬ್ಯಾಂಕ್ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡಿದರು.

RELATED ARTICLES  ಭೀಕರ ಅಪಘಾತ ಬೈಕ್ ಸವಾರ ಸ್ಪಾಟ್ ಡೆತ್.

ಈ ಪ್ರಯತ್ನ ಹೀಗೆ ಮುಂದುವರಿದಲ್ಲಿ ಮುಂದಾಗುವ ಅನಾಹುತಕ್ಕೆ ನೀವೇ ಜವಾಬ್ದಾರರು ಎಂದು ಊರ ಗ್ರಾಮಸ್ಥರು ಅಧಿಕಾರಿಗಳಿಗೆ ತಿಳಿಸಿದರು.

ಈ ಸಮಯದಲ್ಲಿ ಈಶ್ವರ ನಾಯ್ಕ,ವೆಂಕಟೇಶ ನಾಯ್ಕ,ಬಿ.ಆರ್ ಶ್ಯಾನಭಾಗ,ಚಂದ್ರಾಸ ನಾಯ್ಕ,ಮಾದೇವ ಪಟಗಾರ,ನಾಗಾ ಶ್ಯಾನಭಾಗ,ಮಂಜುನಾಥ ಆರ್ ನಾಯ್ಕ,ವಿಘ್ನೇಶ ಗುನಗಾ,ಅಣ್ಣಪ್ಪ ನಾಯ್ಕ,ಸುನಿಲ ನಾಯ್ಕ,ರತ್ನಾಕರ ಶ್ಯಾನಭಾಗ ಹಾಗೂ ಊರ ನಾಗರು ಉಪಸ್ಥಿತರಿದ್ದರು.

RELATED ARTICLES  “ಮುಸ್ಲಿಂ ಹೆಂಗಸಿನ ಹಿಂದೆ ಓಡಿಹೋಗಿದ್ದೇ ನಿಮ್ಮ ಸಾಧನೆ,” ದಿನೇಶ್ ಗುಂಡೂರಾವ್ ವಿರುದ್ಧ ಅನಂತ ಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ