ಕುಮಟಾ: ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕುಮಟಾ ಘಟಕಕ್ಕೆ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು 4 ಹೊಸ ಬಸ್ಸುಗಳನ್ನು ಸರ್ಕಾರದಿಂದ ಮಂಜೂರುಮಾಡಿಸದ್ದಾರೆ.

ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ
ಕುಮಟಾ ಘಟಕಕ್ಕೆ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು 4 ಹೊಸ ಬಸ್ಸುಗಳನ್ನು ಮಂಜೂರು ಮಾಡಿಸಲು ತಾವೇ ಮುತುವರ್ಜಿ ವಹಿಸಿ ಈ ಕಾರ್ಯ ಕೈಗೊಂಡು ಈಗ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

RELATED ARTICLES  ಕ್ರೀಡೆಗಳಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ, ದೊರೆಯುತ್ತದೆ: ನಾಗರಾಜ ನಾಯಕ ತೊರ್ಕೆ

ಇಂದು ಈ ನಾಲ್ಕು ಬಸ್ ಗಳನ್ನು ಕುಮಟಾ ಬಸ್ ನಿಲ್ದಾಣದ ಎದುರು ರಿಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದ ಶಾಸಕರು ಸಾರ್ವಜನಿಕ ಸೇವೆಗೆ ಒದಗಿಸಿದರು.

ಜನತೆಯ ಅನುಕೂಲದ ದೃಷ್ಟಿಯಿಂದ ಈ ಬಸ್ ಗಳನ್ನು ತರಿಸಿದ್ದು ಇದಕ್ಕೆ ಸಹಕರಿಸಿದ ಸರಕಾರ ಹಾಗೂ ಮುಖ್ಯಮಂತ್ರಿ ಗಳಿಗೆ ಶಾಸಕರು ಅಭಿನಂದನೆ ತಿಳಿಸಿದರು.

RELATED ARTICLES  ಮಳೆ ಮುಗಿದರೂ ಮುಗಿದಿಲ್ಲ ಅವಾಂತರ : ರಸ್ತೆ ಸರಿಪಡಿಸಲು ಜಿಲ್ಲಾಡಳಿತ ಹರ ಸಾಹಸ

ಈ ಸಂದರ್ಭದಲ್ಲಿ ಡಿಪೋ ಮೆನೇಜರ್ ಶ್ರೀ ಬಿರಾದಾರ್, ವಿ ಎಲ್ ನಾಯ್ಕ, ಹನುಮಂತ ಪಟಗಾರ, ತಾರಾ ಗೌಡ, ಸುರೇಖ ವಾರೇಕರ, ಸುರೇಶ ಪಟಗಾರ ಹಾಗೂ ಎಂ ಟಿ ನಾಯ್ಕ , ಗಣಪತಿ ಶೆಟ್ಟಿ, ರಾಜು ಅಂಬಿಗ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.