ಯಲ್ಲಾಪುರ ; ಟ್ರಾಕ್ಟರ್ ಒಂದು ಅರಬೈಲ್ ಘಟ್ಟದ ಯು ಟರ್ನ್ ಬಳಿ ಉರಳಿ ಬಿದ್ದ ಪರಿಣಾಮ ಟ್ರಾಕ್ಟರ್ ನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವನಪ್ಪಿ, ಮೂವರು ಗಂಭೀರ ಗಾಯಗೊಂಡಿರುವ ಘಟನೆ ಸೋಮವಾರ ಮೂರು ಗಂಟೆಯ ಸುಮಾರಿಗೆ ನಡೆದಿದೆ.

ಸ್ಥಳದಲ್ಲಿಯೇ ಸಾವನಪ್ಪಿರುವ ಶಿವು

ಟ್ರಾಕ್ಟರ್ ಟ್ರಾಲರ್ ದೊಂದಿಗೆ ,ಕಟ್ಟಡ ನಿರ್ಮಾಣದ ಕೂಲಿ ಕಾರ್ಮಿಕರನ್ನು ಹಾಗೂ ಸಾಮಾಗ್ರಿಗಳನ್ನು ಸಾಗಿಸುತ್ತಿತ್ತು, ರಾ.ಹೆ 63ರ ಅರಬೈಲ್ ಘಟ್ಟದ ಯೂ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ರಾಕ್ಟರ್ ಗುಡ್ಡದ ಮೇಲೆ ಹತ್ತಿದೆ. ನಂತರ ಹಿಂಬದಿ ಮುಖದಲ್ಲಿ ಚಲಿಸಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಹುಬ್ಬಳ್ಳಿಯ ಗುಡಗೇರಿ ನಿವಾಸಿ ಶಿವು ಎಂಬಾತ ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ,

RELATED ARTICLES  ಶಿರಸಿಯಲ್ಲಿ ಶಂಕರ ಜಯಂತಿ ಸಂಪನ್ನ: ಹಂಪಿಹೊಳಿಯವರಿಗೆ ಸಂದಿತು ಆಚಾರ್ಯ ಶಂಕರ ಪ್ರಶಸ್ತಿ.

ಅಪಘಾತದಲ್ಲಿ ಗಾಯಗೊಂಡವರು.

ದೇವೇಂದ್ರಪ್ಪ ಗುರಪ್ಪ ದಂಡೀನ (32), ಶೇಖಪ್ಪ ಪಾಳ್ಯೇ(52), ಹುಬ್ಬಳ್ಳಿ ರಾಮನಗರ ನಿವಾಸಿ ಮಂಜುನಾಥ ಚಂದ್ರಪ್ಪ ಚಲವಾದಿ(26) ಈ ಮೂವರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಗುಳ್ಳಾಪುರದ 108 ಅಂಬುಲೇನ್ಸ್ ಮೂಲಕ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಾಕ್ಟರ್ ನಲ್ಲಿ ನಾಲ್ವರು ಗುಳ್ಳಾಪುರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕೆಲಸಕ್ಕೆ ಹುಬ್ಬಳ್ಳಿಯಿಂದ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.

RELATED ARTICLES  ಸತ್ಯವಾನ್ ಸಾವಿತ್ರಿ ಯಕ್ಷಗಾನ ಪ್ರದರ್ಶನ

ಸ್ಥಳಕ್ಕೆ ಪೊಲೀಸ್ ನಿರೀಕ್ಷಕರಾದ ಡಾ.ಮಂಜುನಾಥ ನಾಯಕ, ಎಎಸ್ಐ ಬಿ.ಎಸ್.ನಾಯ್ಕ ಸಿಬ್ಬಂದಿಗಳು ತೆರಳಿ ಪರಿಶಿಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.