ಭಟ್ಕಳ: ತನ್ನ 12 ದಿನದ ಹೆಣ್ಣು ಮಗುವನ್ನು ತಾಯಿಯೇ ಸುಟ್ಟು ಹಾಕಿದ್ದಾಳೆ ಎನ್ನಲಾದ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಗುವನ್ನು ಸುಟ್ಟು ಕೊಂದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಮಹಿಳೆಯನ್ನು ಬಂಧಿಸಿದ್ದು, ಕಾರವಾರದ ಜೈಲಿಗೆ ಕಳುಹಿಸಲಾಗಿದೆ.

RELATED ARTICLES  ಆಸಕ್ತಿಯ ಕ್ಷೇತ್ರದಿಂದ ಆನಂದ ಸಾಧ್ಯ: ವಿದ್ಯಾಧೀಶ ಶ್ರೀ : ಗಿಬ್ ಸಮೂಹ ಸಂಸ್ಥೆಗಳಿಗೆ ಶ್ರೀಗಳ ದಿವ್ಯ ಪಾದಸ್ಪರ್ಶ

ಈ ಕೃತ್ಯ ಎಸಗಿದ್ದಾಳೆ ಎನ್ನಲಾದ ಮಹಿಳೆಯನ್ನು ವೆಂಕಟಾಪುರದ ಯಶೋಧಾ ಗೋಪಾಲ ಮೊಗೇರ್ ಎಂದು ಗುರುತಿಸಲಾಗಿದೆ

ಕಳೆದ ಮೂರುವರೆ ವರ್ಷಗಳ ಹಿಂದೆ ತಾಲೂಕಿನ ಬೆಳ್ನಿಯ ಗೋಪಾಲ್ ಮೊಗೇರ್ ಎಂಬವರನ್ನು ವಿವಾಹವಾಗಿದ್ದ ಯಶೋಧ ಹೆರಿಗೆಗಾಗಿ ತನ್ನ ತಾಯಿ ಮನೆಯಾದ ವೆಂಕಟಾಪುರಕ್ಕೆ ಹೋಗಿದ್ದು, ಹೆರಿಗೆಯಾಗಿ 12 ದಿನಗಳು ಕಳೆದರೂ ತನ್ನ ಪತಿ ಮಗು ಹೆಣ್ಣೆಂಬ ಕಾರಣಕ್ಕೆ ನೋಡಲು ಬಂದಿಲ್ಲ ಎಂದು ಮಾನಸಿಕವಾಗಿ ನೊಂದು ಮಾ. 9ರಂದು ಶಿಶುವಿಗೆ ಬೆಂಕಿ ಹಚ್ಚಿದ್ದಾಳೆ ಎಂದು ಹೇಳಲಾಗಿದೆ. ಸುಟ್ಟು ಗಾಯಗೊಂಡ ಹಸುಳೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಗು ಮೃತಪಟ್ಟಿದೆ.

RELATED ARTICLES  ರೋಷನ್ ಬೇಗ್ ಮಾತಿಗೆ ತೀವ್ರ ಖಂಡನೆ ಕುಮಟಾದಲ್ಲಿ ನಡೆಯಿತು ಪ್ರತಿಭಟನೆ.

ಈ ಘಟನೆಗೆ ಸಂಬಂಧಿದಂತೆ ದೂರು ದಾಖಲಿಸಿಕೊಂಡ ಗ್ರಾಮೀಣ ಪೊಲೀಸರು ಮಹಿಳೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.