ಅಂಕೋಲಾ: ಅಂಕೋಲಾ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ವಿಠ್ಠಲ ಗಾಂವಕರ ಅವರು ಆಯ್ಕೆ ಆಗಿದ್ದಾರೆ ಎಂದು ತಾಲೂಕು ಕ.ಸಾ.ಪ. ಅಧ್ಯಕ್ಷ ಡಾ. ಪ್ರಕಾಶ್ ನಾಯಕ ಅವರು ತಿಳಿಸಿದ್ದಾರೆ.

ಪಟ್ಟಣದ ಕನ್ನಡ ಭವನದಲ್ಲಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನು ಸರ್ವಾನುಮತದಿಂದ ತೆಗೆzದುಕೊಳ್ಳಲಾಯಿತು.

ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾದ್ಯಾಯರಾದ ವಿಠ್ಠಲ ಗಾಂವಕರ ಅವರು ಅಂಕೋಲೆಯ ಬೋಳೆಯವರಾಗಿದ್ದಾರೆ. ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕøತರಾಗಿದ್ದ ಅವರು ಗೋರೂರು ಪ್ರತಿಷ್ಠಾನದಿಂದ ರನ್ನ ಸಾಹಿತ್ಯ ಪ್ರಶಸ್ತಿಯ ಮನ್ನಣೆಗೂ ಪಾತ್ರರಾಗಿದ್ದಾರೆ.

RELATED ARTICLES  ಉತ್ತರಕನ್ನಡದಲ್ಲಿ ಇಂದು ಕೊರೋನಾ ಮಹಾ ಸ್ಪೋಟ..!

ಶೈಕ್ಷಣಿಕ ಸಾಹಿತ್ಯ ಮತ್ತು ಸೃಜನಶೀಲ ಸಾಹಿತ್ಯ ಈ ಎರಡು ಪ್ರಕಾರಗಳಲ್ಲಿಯೂ ಕೃಷಿ ಮಾಡಿದ ವಿಠ್ಠಲ ಗಾಂವಕರ ಅವರು ಹೂಬಾಣ, ಬದುಕು, ಮೌಲ್ಯ, ಶಬ್ದ ಕಾವ್ಯ ಮುಂತಾದ ಕವನ ಸಂಕಲನಗಳೊಂದಿಗೆ ತತ್ಸವ-ತದ್ಭವ, ಗಾದೆಗಳ ಗುಡಿ, ಜ್ಞಾನ ಬಿಂದುಗಳ ಸಿಂಧು, ಕನ್ನಡ ಛಂದಸ್ಸು ಹಾಗೂ ಅಲಂಕಾರ, ಸರ್ವಜ್ಞ ನೀತಿ, ಚಿಂತನ ಕತೆಗಳು, ಶಾಲಾ ಶಿಕ್ಷಣ ಮತ್ತು ಜೀವನ ಮೌಲ್ಯಗಳು, ಜಗದಂಬ ವಚನಾಮೃತ, ಜೈ ಭಾರತ ಜನನಿ, ಗಾಂಧೀಜಿ ನಡೆದ ಸಪ್ತಪದಿ, ಭಾಂಧವ್ಯದ ಹೊತ್ತಗೆ, ಗಾದೆಗಲ ಲೋಕ,
ನುಡಿಗಟ್ಟು ನುಡಿಗುಟ್ಟು, ಚಂದದ ಚೌಕದ ಹಳ್ಳಿ ಮತ್ತು ಬೊಮ್ಮಯ್ಯ ದೇವರು, ಬದುಕಿಗಾಗಿ ಸಾಹಿತ್ಯ ಹೀಗೆ ಸುಮಾರು 31ಕ್ಕೂ ಹೆಚ್ಚು ಕೃತಿಗಳನ್ನು ಗಾಂವಕರ ಅವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.

RELATED ARTICLES  ಎಂ.ಬಿ.ಎ ಯಲ್ಲಿ ಚಿನ್ನದ ಪದಕ ಪಡೆದು ಅಪೂರ್ವ ಸಾಧನೆ ಮಾಡಿದ ಯಲ್ಲಾಪುರದ ಪದ್ಮಶ್ರಿ ಮಂಜುನಾಥ ಭಟ್ಟ

ಸಮ್ಮೇಳನ ಎಪ್ರಿಲ್ ಎರಡನೇ ವಾರದಲ್ಲಿ ತಾಲೂಕಿನ ಶೆಟಗೇರಿಯ ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದ್ದು, ಸ್ವಾಗತ ಸಮಿತಿ ರಚನೆಯಾದ ನಂತರ ದಿನಾಂಕವನ್ನು ಸದ್ಯದಲ್ಲಿಯೇ ಪ್ರಕಟಿಸಲಾಗುವುದು ಎಂದು ಪ್ರಕಾಶ ನಾಯಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.