ಹೊಸದಿಲ್ಲಿ: ಜನಪ್ರಿಯ ಚಾಟ್‌ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸ್‌ಆ್ಯಪ್‌ ತನ್ನ ಸಂದೇಶ ಅಳಿಸುವ ಸೌಲಭ್ಯವನ್ನು ಮತ್ತೂಮ್ಮೆ ಬದಲಾವಣೆ ಮಾಡಿದೆ. ಆರಂಭದಲ್ಲಿ ಕೇವಲ ಏಳು ನಿಮಿಷಗಳೊಳಗೆ ಅಳಿಸಬಹುದಾದ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ನಂತರ ಇದನ್ನು ಒಂದು ಗಂಟೆಗೆ ವಿಸ್ತರಿಸಿತ್ತು. ಇದೀಗ 3 ವರ್ಷ ಹಳೆಯ ಸಂದೇಶವನ್ನೂ ಅಳಿಸಬಹುದಾದ ಸೌಲಭ್ಯವನ್ನು ಕಲ್ಪಿಸುತ್ತಿದೆ. ಕೆಲವು ಬೀಟಾ ಆವೃತ್ತಿಗಳಲ್ಲಿ ಇದು ಲಭ್ಯವಿದೆ. ಆದರೆ ಈ ಸೌಲಭ್ಯದಡಿಯಲ್ಲಿ ವಾಟ್ಸ್‌ಆ್ಯಪ್‌ಗೆ ಸಂದೇಶ ಅಳಿಸಲು ವಿನಂತಿ ಮಾಡಬಹುದಾಗಿದೆ. ನಂತರ ವಾಟ್ಸ್‌ ಆ್ಯಪ್‌ ಅದನ್ನು ಪರಿಗಣಿಸಿ ಅಳಿಸುತ್ತದೆ.

RELATED ARTICLES  ಲಕ್ಷ ದೀಪೋತ್ಸವ ಕಾರ್ಯಕ್ರಮದ ಮಹಾ ಸಂಕಲ್ಪಪೂಜೆಯಲ್ಲಿ ಭಾಗವಹಿಸಿದ ಸಹಾಯಕ ಆಯುಕ್ತರು.