ಹೊನ್ನಾವರ: ತಾಲ್ಲೂಕಿನ ಹಳದೀಪುರ ಪಂಚಾಯತ್ ವ್ಯಾಪ್ತಿಯ ತಿಮ್ಮುಮನೆ ಹೊರಭಾಗ ಮೀನುಗಾರಿಕಾ ಕೊಂಡಿರಸ್ತೆಯ ಆಯ್ದಭಾಗದಲ್ಲಿ ಲೋಕೋಪಯೋಗಿ ಮತ್ತು ಒಳನಾಡು ಬಂದರು ಇಲಾಖೆಯ ಯೋಜನೆಯಡಿ ಅಂದಾಜು 40 ಲಕ್ಷ ಅನುದಾನದ ಕಾಂಕ್ರೀಟೀಕರಣ ಕಾಮಗಾರಿಗೆ ಚಾಲನೆ ದೊರೆತಿದೆ.

ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಭೂಮಿಪೂಜೆ ನೆರವೇರಿಸಿದರು.

ಹಳದೀಪುರ ಪಂಚಾಯತ್ ವ್ಯಾಪ್ತಿಯ ತಿಮ್ಮುಮನೆ ಹೊರಭಾಗ ಮೀನುಗಾರಿಕಾ ಕೊಂಡಿರಸ್ತೆಯ ಆಯ್ದಭಾಗದಲ್ಲಿ ಲೋಕೋಪಯೋಗಿ ಮತ್ತು ಒಳನಾಡು ಬಂದರು ಇಲಾಖೆಯ ಯೋಜನೆಯಡಿ ಅಂದಾಜು 40 ಲಕ್ಷ ಅನುದಾನ ತರುವಲ್ಲಿ ಸಹಕರಿಸಿದ ಎಲ್ಲರಿಗೂ ಶಾಸಕರು ಧನ್ಯವಾದ ಸಮರ್ಪಿಸಿದರು.

RELATED ARTICLES  ಪರೇಶ್ ಮೇಸ್ತಾ ಗಲಭೆ ಪ್ರಕರಣ: ಹಿಂದೂ ಯುವಕರ ಮೇಲಿನ ಕೇಸ್ ವಾಪಸ್.

ಈ ಸಂದರ್ಬದಲ್ಲಿ ಮಾತನಾಡಿದ ಸ್ಥಳೀಯ ಗ್ರಾಮ ಪಂಚಾಯತ ಸದಸ್ಯರು ಶ್ರೀ ದಾಮೋದರ ನಾಯ್ಕ ಮಾತನಾಡಿ ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾದ ರಸ್ತೆ ದುರಸ್ಥಿ ಕಾಮಗಾರಿಗೆ ಹೆಚ್ಚಿನ ಅನುದಾನ 40 ಲಕ್ಷ ನೀಡಿ ರಸ್ತೆಗಳನ್ನು ಕಾಂಕ್ರೇಟಿಕರಣಗೊಳಿಸದಕ್ಕಾಗಿ ಸಾರ್ವಜನಿಕರ ಪರವಾಗಿ ಶಾಸಕರನ್ನು ಅಭಿನಂದಿಸಿದರು ಈ ಸಂದರ್ಬದಲ್ಲಿ ತಾಲೂಕು ಪಂಚಾಯತ ಅಧ್ಯಕ್ಷರು ಶ್ರೀ ಉಲ್ಲಾಸ ನಾಯ್ಕ ಹಳದೀಪುರ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ಗುಣಮಾಲಾ ಜೈನ ಸದಸ್ಯರಾದ ಶ್ರೀ ವಿನಾಯಕ ಶೇಟ ಶ್ರೀ ಗಣಪತಿ ಹರಿಕಂತ್ರ ಶ್ರೀ ರವಿ ಮೋಗೆರ ಶ್ರೀ ಇಸ್ಮಾಯಿಲ್ ಸಾಬ್ ಶ್ರೀಮತಿ ಸುರೇಕಾ ನಾಯ್ಕ ಶ್ರೀಮತಿ ನಳಿನಿ ಹರಿಕಂತ್ರ ಶ್ರೀ ಮಂಜುಳಾ ನಾಯ್ಕ ಮುತಾಂದವರು ಉಪಸ್ಥಿತರಿದ್ದರು

RELATED ARTICLES  ಸರಸ್ವತಿ ಪಿ.ಯು ಕಾಲೇಜ್ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಉತ್ತಮ ಸಾಧನೆ