ಮುಂಡಗೋಡ : ಪರಿಶಿಷ್ಟ ಜಾತಿಗೆ ಸೇರಿದ ಗೃಹಿಣಿಗೆ ಫೋನ್ ಮಾಡಿ ಸುಖಪಡೆಯಲು ಹುಬ್ಬಳ್ಳಿಗೆ ಬರುವಂತೆ ಒತ್ತಾಯಿಸುತ್ತಿದ್ದ ಕಾಮುಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಹೊಡೆದು ಪೊಲೀಸ ಠಾಣೆಗೆ ಒಪ್ಪಿಸಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಕಾತೂರ ಗ್ರಾಮದ ಪ್ರಕಾಶ ಅಜ್ಜಂನವರ ಎಂಬ ವ್ಯಕ್ತಿಯೇ ಸಾರ್ವಜನಿಕರಿಂದ ಹೊಡೆತದಿಂದ ಕಾಮುಕ.
ಸಂತ್ರಸ್ಥೆಯು ಜಾತಿ ಪ್ರಮಾಣ ಪತ್ರ ಮಾಡಿಸಿಕೊಳ್ಳಲು ಮಾರ್ಚ್ 9 ರಂದು ತಹಶೀಲ್ದಾರ ಕಚೇರಿಗೆ ಬಂದಾಗ ತಾನು ಜಾತಿ ಪ್ರಮಾಣ ಮಾಡಿಸಿಕೊಡುವುದಾಗಿ ಹೇಳಿದ್ದಾನೆ. ಜಾತಿ ಪ್ರಮಾಣ ಮಾಡಿಸಿ ತಮಗೆ ತಿಳಿಸುತ್ತೇನೆ ಎಂದು ಮಹಿಳೆಯ ಫೋನ ನಂಬರ ಪಡೆದಿದ್ದಾನೆ. ಒತ್ತಾಯ ಪೂರ್ವಕವಾಗಿ 200 ರೂ ನೀಡಲು ಹೋಗಿದ್ದಾನೆ ಮಹಿಳೆಯು ನೀರಾಕರಿಸಿದ್ದಾಳೆ . ನಂತರ ಮಹಿಳೆಯ ಫೋನ ನಂಬರಗೆ, ಪದೇ ಪದೇ ಫೋನ್ ಮಾಡುತ್ತಾ ಒಂದು ದಿನ ಹುಬ್ಬಳ್ಳಿಗೆ ಹೋಗೊಣಾ ಬಾ ಹೋಗಿ ಒಂದು ರಾತ್ರಿ ಉಳಿದು ದೈಹಿಕ ಸಂಪರ್ಕ ಮಾಡು ಎಂದು ಒತ್ತಾಯಿಸುತ್ತಿದ್ದ ಎಂದು ಹೇಳಲಾಗಿದೆ. ಈ ರೀತಿ ಫೋನ ಮಾಡಬೇಡ ಎಂದು ಸಂತ್ರೆಸ್ಥೆಯು ಎಷ್ಟೇ ಹೇಳಿದರೂ ಕೇಳದೇ ಈ ದಿವಸ(ಸೋಮವಾರ) ತಾನೂ ಹುಬ್ಬಳ್ಳಿಯಿಂದ ಮುಂಡಗೋಡ ಬಸ್ ನಿಲ್ದಾಣಕ್ಕೆ ಬರುತ್ತಿದ್ದೇನೆ ನೀನು ಅಲ್ಲಿಗೆ ಬಾ ತಿಳಿಸಿದ್ದನಂತೆ ಸಂತ್ರಸ್ಥೆಯು ಮೈದುನಿಗೆ ಕರೆದುಕೊಂಡು ಸಾಯಂಕಾಲ ಮುಂಡಗೋಡ ಬಸ್ ನಿಲ್ದಾಣಕ್ಕೆ ಬಂದಾಗ ಆರೋಪಿತನು ಬಸ್ಸನಿಂದ ಇಳಿದ ತಕ್ಷಣ ಆತನಿಗೆ ವಿಷಯ ಕುರಿತು ವಿಚಾರಿಸಿದಾಗ ಸ್ಥಳಿಯರು ಸೇರಿದ್ದರಿಂದ ಆತನೊಂದಿಗೆ ಗಲಾಟೆ ಏರ್ಪಟ್ಟು ಆರೋಪಿತನಿಗೆ ಹಿಗ್ಗಾಮುಗ್ಗಾ ತದಕಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

RELATED ARTICLES  ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ನಿಧಿ ಸಾಧನೆ.

ಈ ಕುರಿತು ನೊಂದ ಮಹಿಳೆ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಜಾತಿ ನಿಂದನೆ ಮಹಿಳಾ ದೌರ್ಜನ್ಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

RELATED ARTICLES  ಅದ್ಧೂರಿಯಾಗಿ ಸಂಪನ್ನಗೊಂಡ ಗೋಕರ್ಣದ ಕರಾವಳಿ ಬಾಯ್ಸ ತಂಡದ ಹಗ್ಗಜಗ್ಗಾಟ ಸ್ಪರ್ಧೆ