ಬೆಂಗಳೂರು : ಉತ್ತರ ಕನ್ನಡದ ಕುಮಟಾ ಮತ್ತು ಹೊನ್ನಾವರ ತಾಲೂಕಿನ ಸುಮಾರು ೪೦ ಸಾವಿರಕ್ಕೂ ಹೆಚ್ಚು ಮಹಿಳೆಯರಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ. ಎರಡುವರೆ ಸಾವಿರಕ್ಕೂ ಹೆಚ್ಚು ಮಹಿಳಾ ಸ್ವ ಸಹಾಯ ಸಂಘವನ್ನು ರಚಿಸಿ ಯಶಸ್ವಿ ಕಂಡ ಯಶೋದರ ನಾಯ್ಕ ಟ್ರಸ್ಟನ ಕೇದ್ರಬಿಂದು ಯಶೋದರ ನಾಯ್ಕ ಅವರನ್ನ ಕೇಂದ್ರ ಸರಕಾರದ ಕೌಶಲ್ಯಾಬಿವೃದ್ದಿ ಸಚೀವಾಲಯದ ಸ್ಕಿಲ್ ಇಂಡಯಾ ವತಿಯಿಂದ ಬೆಂಗಳೂರಿನ ಲಲಿತ ಅಶೋಕ್ ಹೋಟೆಲ್ ನಲ್ಲಿ ನಡೆದ ಸಮಾರಂಬದಲ್ಲಿ ಜರ್ನಿ ಒಫ್ ರೂರಲ್ ಯುವತ್ ಅವಾರ್ಡ ನೀಡಿ ಗೌರವಿಸಲಾಯಿತು.
ಇದು ಇಂದಿನ ದಿನದಲ್ಲಿಯೂ ನಂಬಿಕೆಗೆ ಬೆಲೆ ಇದೆ ಎಂದು ಸಾರಿ ಸಾರಿ ಹೆಳಿದ ಸಮಾರಂಬವಾಗಿ ಪರಿಣಮಿಸಿತು. ಅಂದರೆ ಯಶೊದರ ನಾಯ್ಕ ಅವರು ತನ್ನ ಟ್ಟಸ್ಟನ ಸದಸ್ಯರ ಮೇಲೆ ಸಿಬ್ಬಂದಿಗಳಮೇಲೆ ತಾನು ಹಾಗು ತನ್ನ ಕುಟುಂಬದ ಸದಸ್ಯರ ಬೆವರಿನ ಕೋಟ್ಯಾಂತರ ರೂಪಾಯಿ ಹಣ ನೀಡುವಾಗ ಇಟ್ಟ ನಂಬಿಕೆ ಪಿಯರಲೆಸ್ ನಂತ ಸಂಸ್ಥೆ ಕಳೆದು ಹೋದರೂ. ಅಗ್ರಿಗೋಲ್ಡನಂತ ಸಂಸ್ಥೆ ಮುಳುಗಿ ಹೋದರು ಹಲವಾರು ಹಣಕಾಸು ಸಂಸ್ಥೆಗಳಿಂದ ಇಂದಿನ ದಿನಗಳಲ್ಲಿ ಮೋಸವಾಗುತ್ತಿದ್ದರೂ. ಯಶೋದರ ನಾಯ್ಕ ಟ್ರಸ್ಟನ ೪೦ ಸಾವಿರಕ್ಕೂ ಹೆಚ್ಚು ಮಹಿಳೆಯರು ಶ್ರೀ ಯಶೋಧರ ನಾಯ್ಕ ಅವರ ಮೇಲೆ ಇಟ್ಟ ನಂಬಿಕೆ .
ಇಂದೂ ನಂಬಿಕೆಗೆ ಬೆಲೆ ಇದೆ ಎನ್ನುವುದನ್ನ ಸಾಬೀತು ಪಡಿಸಿ ಮೂಲತ ಹೊನ್ನಾವರ ತಾಲೂಕಿನ ಚಿಕ್ಕ ಹಳ್ಳಿ ಮುಳ್ಕೊಡಿನ ಯಶೋದರ ನಾಯ್ಕ ಬಾಲ್ಯದಲ್ಲಿ ಬಡತನದ ಎಲ್ಲಾ ಮೇರೆಯನ್ನ ಮೀರಿ ಬದುಕಿಗಾಗಿ ಪಟ್ಟಣ ಸೇರಿದವರು.ತನ್ನ ಸ್ವಂತ ಪರಿಶ್ರಮದಿಂದ ಇಂದು ಬೃಹತ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
ನ್ನ ಹಾಗೂ ತನ್ನ ಕುಟುಂಬದ ಸದಸ್ಯರ ಸಂಸ್ಥೆಯ ಲಾಭದ ಕೆಲವು ಬಾಗದ ಹಣವನ್ನ ೪೦ ಸಾವಿರಕ್ಕೂ ಹೆಚ್ಚು ಮಹಿಳಾ ಸಹೋದರಿಯರಿಗೆ ನೀಡಿ ಅವರ ಬಾಳಿಗೆ ದೀಪವಾಗಿ ಬೆಳಗಿದ್ದಾರೆ.ಇವರ ಈ ಸಾದನೆಯನ್ನ ಗುರುತಿಸಿ ಕೇಂದ್ರಸರಕಾರವು ನೀಡಿದ ಗೌರವ ದೇಶಮಟ್ಟದಲ್ಲಿ ಉತ್ತರಕನ್ನಡವನ್ನ ಅದರಲ್ಲಯೂ ಕುಮಟಾ- ಹೊನ್ನಾವರವನ್ನ ಗುರುತಿಸುವಂತೆ ಮಾಡಿದ್ದಂತೂ ಸತ್ಯ.