ಯಲ್ಲಾಪುರ: ಅಕ್ರಮವಾಗಿ ಲಾರಿಯ ಮೂಲಕ ಕಸಾಯಿಖಾನೆಗೆ ಕೋಣಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಸೋಮವಾರ ಬಂಧಿಸಿರುವ ಇಲ್ಲಿನ ಪೊಲೀಸರು, 18 ಕೋಣಗಳನ್ನು ರಕ್ಷಿಸಿದ್ದಾರೆ.

RELATED ARTICLES  ಜೆ.ಡಿ.ಎಸ್ ನಿಂದ ಚುನಾವಣಾ ಕಾರ್ಯಾಚರಣೆ ಚುರುಕು ಕಾಗಾಲ್ ನಲ್ಲಿ ನಡೆಯಿತು ಸಭೆ.

ಮಂಗಳೂರು ವೇಣೂರಿನ ನಿವಾಸಿಗಳಾದ ಲಾರಿ ಚಾಲಕ ಹೈದರ್ ರಮಣದ್(35), ಬಾಬು ಮಾದು(58) ಹಾಗೂ ಫಾರುಕ್ ಮಂಗಳೂರ(30) ಬಂಧಿತ ಆರೋಪಿಗಳು.

ಧಾರವಾಡ ಜಿಲ್ಲೆಯ ಕಲಘಟಗಿಯಿಂದ ಮಂಗಳೂರಿನ ಕಸಾಯಿಖಾನೆಗೆ ಕೋಣಗಳನ್ನು ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು, ಪಟ್ಟಣದ ಕೆ.ಮಿಲನ್ ಹೋಟೆಲ್ ಬಳಿ ವಾಹನವನ್ನು ವಶಪಡಿಸಿಕೊಂಡರು.

RELATED ARTICLES  ಸರಸ್ವತಿ ವಿದ್ಯಾ ಕೇಂದ್ರದಲ್ಲಿ ವಿಶ್ವಯೋಗದಿನ ಆಚರಣೆ