ಕುಮಟಾ : ತಾಲೂಕಿನ ಹೆರವಟ್ಟದ ಗುಡಾಳದ ನಿವಾಸಿಯಾದ ದಾಮೋದರ ಜಿ. ಗೌಡ ಈತ ಶ್ರೀಲಂಕಾದಲ್ಲಿ ನಡೆಯಲಿರುವ 3000 ಮೀ ಅಂತರ್ರಾಷ್ಟ್ರೀಯ ಓಟದ ಸ್ಪರ್ಧೆಯಲ್ಲಿ ಹೊನ್ನಾವರದ ಅದ್ವೈತ್ ಸ್ಪೋಟ್ರ್ಸ ಕ್ಲಬ್ ವತಿಯಿಂದ ಪ್ರತಿನಿಧಿಸಲಿರುವ ಗ್ರಾಮೀಣ ಪ್ರತಿಭೆ. ಈತ ಈ ಸ್ಪೋಟ್ರ್ಸ ಕ್ಲಬ್ ನಲ್ಲಿ ತರಬೇತಿ ಪಡೆದಿದ್ದನು.

ಶ್ರೀಲಂಕಾಕ್ಕೆ ತೆರಳಲಿರುವ ಈ ಅಪ್ರತಿಮ ಪ್ರತಿಭೆಯನ್ನು ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆ ಅವರು ಸಹಾಯ, ಸಹಕಾರ ನೀಡಿ ಪ್ರೋತ್ಸಾಹಿಸಿ ಶುಭ ಹಾರೈಸುತ್ತಾ ಬಡ ಕುಟುಂಬದಲ್ಲಿ ಅರಳಿದ ಈ ಕ್ರೀಡಾ ಪ್ರತಿಭೆ ಇಂದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಹೊರಟಿದ್ದಾನೆ. ಪಿಯುಸಿಯ ವರೆಗೆ ಕಲಿತ ಈತ ಪೇಂಟಿಂಗ್ ವೃತ್ತಿ ಮಾಡುತ್ತಾ ಕ್ರೀಡಾ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡು ಎರಡು ಚಿನ್ನದ ಪದಕಗಳನ್ನು ಗಳಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

RELATED ARTICLES  ಮಗಳ ಮನೆಗೆ ತೆರಳುತ್ತಿದ್ದ ಮಹಿಳೆ ಸಾವು.

ಸಾಧಿಸುವ ಛಲವಿದ್ದಲ್ಲಿ ಪರಿಸ್ಥಿತಿಯನ್ನು ಮೀರಿ ಬೆಳೆಯುತ್ತಾರೆ ಎನ್ನುವುದಕ್ಕೆ ಈತ ಸಾಕ್ಷಿಯಾಗಿದ್ದಾನೆ ಇಂತಹ ಪ್ರತಿಭೆಗಳಿಗೆ ಸಮಾಜ ಹೆಚ್ಚಿನ ಪ್ರೋತ್ಸಾಹ ನೀಡಿ ಹುರಿದುಂಬಿಸಬೇಕು. ಇತರೇ ಸಂಘ ಸಂಸ್ಥೆಗಳು ಹೃದಯವಂತ ದಾನಿಗಳು ಈತನಿಗೆ ಹೆಚ್ಚಿನ ಸಹಾಯ ನೀಡಿದಲ್ಲಿ ಇನ್ನೂ ಹೆಚ್ಚಿನ ಅನುಕೂಲತೆ ಉಂಟಾಗಲಿದೆ ಎಂದು ದಾಮೋದರ ಗೌಡನ ಸಾಧನೆಗೆ ಹರ್ಷ ವ್ಯಕ್ತಪಡಿಸುತ್ತಾ ನಮ್ಮ ತಾಲೂಕಿನ ಹೆಮ್ಮೆಯ ಛಲಗಾರನಿಗೆ ನಮ್ಮ ತಾಲೂಕಿಗೆ ಮತ್ತು ದೇಶಕ್ಕೆ ಕೀರ್ತಿ ತರುವಂತಾಗಲಿ ಎಂದು ತುಂಬು ಹೃದಯದಿಂದ ಹಾರೈಸಿ ಶುಭ ಕೋರಿ ಬೀಳ್ಕೊಟ್ಟರು

RELATED ARTICLES  ಹೆಗಡೆ ಹೆಣ್ಣುಮಕ್ಕಳ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ.