ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕುಲಪತಿ ನೇಮಕಾತಿಗೆ ಹೊಸ ತಿರುವು ಸಿಕ್ಕಿದೆ. ಅರ್ಹ ಅಭ್ಯರ್ಥಿಗಳಿಂದ ಹೊಸದಾಗಿ ಅರ್ಜಿ ಆಹ್ವಾನಿಸಲು ತೀರ್ಮಾನವಾಗಿದೆ.

2018ರ ಜ. 10ಕ್ಕೆ ಕುಲಪತಿ ಹುದ್ದೆ ತೆರವಾಗಿ 1 ವರ್ಷ ಪೂರ್ಣಗೊಂಡಿದೆ. ಅಂದಿನಿಂದಲೂ ಪ್ರಭಾರ ಕುಲಪತಿಗಳೇ ಅಧಿಕಾರ ನಡೆಸುತ್ತಿದ್ದಾರೆ. ಕುಲಪತಿ ನೇಮಕಕ್ಕಾಗಿ ರಚನೆಯಾಗಿರುವ ಶೋಧನಾ ಸಮಿತಿಯು ನೀಡಿದ ಪಟ್ಟಿಯನ್ನು ರಾಜ್ಯಪಾಲರು ಮೂರು ಬಾರಿ ತಿರಸ್ಕರಿಸಿದ್ದು, ನೇಮಕ ಮುಂದೂಡುತ್ತಲೇ ಇತ್ತು. ರಾಜ್ಯಪಾಲರು ಹೊಸ ಹೆಸರುಗಳ ಪಟ್ಟಿ ನೀಡುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಈಚೆಗೆ ಶೋಧನಾ ಸಮಿತಿ ಸಭೆಯನ್ನೂ ನಡೆಸಿತ್ತು.

RELATED ARTICLES  “ಕೊಂಕಣ ಭೂಷಣ” ವಿದ್ಯಾರ್ಥಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಆದರೆ, ಹೊಸ ಬೆಳವಣಿಗೆಯಲ್ಲಿ ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಲು ಜಾಹೀರಾತು ನೀಡುವಂತೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ. ಜಾಹೀರಾತು ಪ್ರಕಟವಾದ ನಂತರ ಅರ್ಜಿ ಸಲ್ಲಿಸಲು 1 ತಿಂಗಳು ಕಾಲಾವಕಾಶ ಇರುತ್ತದೆ. ಆ ನಂತರ, ಪ್ರಕ್ರಿಯೆಗಳು ಆರಂಭವಾಗುತ್ತವೆ ಎಂದು ವಿ.ವಿ ಮೂಲಗಳು ತಿಳಿಸಿವೆ.

RELATED ARTICLES  ಶಿಕ್ಷಕರ ಅರ್ಹತಾ ಪರೀಕ್ಷೆ ( TET) -2022ರ ಕೀ ಉತ್ತರ ಪ್ರಕಟ