ಬೆಂಗಳೂರು: ಯೋಗಿಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾದ ನಂತರ ಹಲವು ಧಾರ್ಮಿಕ ಸಂಸ್ಥೆಗಳ ಸ್ವಾಮೀಜಿಗಳು ಕೂಡ ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ದಿಸಲು ಹವಣಿಸುತ್ತಿದ್ದಾರೆ.
ಹಲವು ಸ್ವಾಮೀಜಿಗಳು ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲು ಆಸಕ್ತಿ ತೋರುತ್ತಿದ್ದು, ಸ್ವತಂತ್ರ್ಯ ಅಭ್ಯರ್ಥಿಯಾಗಿ ಇವಲ್ಲವೇ ಪ್ರಮುಖ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ಬಯಸುತ್ತಿದ್ದಾರೆ.

ಉಡುಪಿಯ ಶಿರೂರು ಮಠದ ಲಕ್ಷ್ಮಿವರ ತೀರ್ಥ ಸ್ವಾಮಿಜಿ ಕೂಡ ಟಿಕೆಟ್ ಆಕಾಂಕ್ಷಿಗಳ ರೇಸ್ ನಲ್ಲಿದ್ದಾರೆ. ಕರ್ನಾಟಕದಲ್ಲಿರುವ ಹಲವು ಮಠಗಳು ಜಾತಿ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬರುವಲ್ಲಿ ತನ್ನ ಹಸ್ತಕ್ಷೇಪ ಮಾಡುತ್ತದೆ. ಈ ಮಠಗಳಿಗೆ ವಾರ್ಷಿಕ ಬಜೆಟ್ ನಲ್ಲಿ ಸರ್ಕಾರ ಅನುದಾನ ಕೂಡ ನೀಡುತ್ತದೆ.

ಈ ಟ್ರೆಂಡ್ ಕೆಲ ವರ್ಷಗಳಿಂದ ಹೆಚ್ಚಾಗಿದೆ, ಹೀಗಾಗಿ ಖಾವಿಗಳು ಸರ್ಕಾರದ ಹಲವು ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿವೆ, ಉಡುಪಿಯ ಶಿರೂರು ಮಠದ ಲಕ್ಷ್ಮಿವರ ಸ್ವಾಮೀಜಿ ರಾಜಕೀಯಕ್ಕೆ ಬರುವ ಹಂಬಲ ವ್ಯಕ್ತ ಪಡಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ಬಯಸುತ್ತಿದ್ದಾರೆ, ಒಂದು ವೇಳೆ ಅದು ಸಾಧ್ಯವಾಗದಿದ್ದರೇ ಸ್ವತಂತ್ರ್ಯ ಅಭ್ಯರ್ಥಿಯಾಗಿ ಉಡುಪಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ದಿಸುವುದಾಗಿ ತಿಳಿಸಿದ್ದಾರೆ.
ಈ ಮೊದಲು ಧಾರವಾಡದ ಮಾನಗುಡಿಯ ಶ್ರೀ ಗುರು ಬಸವ ಮಹಾಮಾನೆ ಮಠದ ಬಸವಾನಂದ ಸ್ವಾಮಿ, ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಗಳು ರಾಜಕೀಯಕ್ಕೆ ಬರಲು ನಿರ್ಧರಿಸಿದ್ದಾರೆ. ಈ ಸಂಬಂಧ ಮಾದಾರ ಚನ್ನಯ್ಯ ಸ್ವಾಮೀಜಿಯನ್ನು ಸಂಪರ್ಕಿಸಿದಾಗ, ಇದುವರೆಗೂ ಯಾವುದೇ ರಾಜಕೀಯ ಪಕ್ಷಗಳು ನನ್ನನ್ನು ಸಂಪರ್ಕಿಸಿಲ್ಲ, ಭಕ್ತರ ಜೊತೆ ಇದನ್ನು ಚರ್ಚಿಸಿ ಮುಂದಿನ ನಡೆ ನಿರ್ದರಿಸುವುದಾಗಿ ತಿಳಿಸಿದ್ದಾರೆ.

RELATED ARTICLES  ಅಂಬೇಡ್ಕರ್ ಭವನವನ್ನು ವಿವಿಧ ಸಾಮಾಜಿಕ ಕಾರ್ಯಗಳಿಗಾಗಿ ಬಳಕೆ ಮಾಡಿ; ಬಾಲಚಂದ್ರ ಜಾರಕಿಹೊಳಿ

ಧಾರ್ಮಿಕ ಸಂಸ್ಥೆಗಳ ಈ ಟ್ರೆಂಡ್ ಭಕ್ತರಲ್ಲಿ ಬೇಸರ ಮೂಡಿಸಿದೆ. ರಾಜಕೀಯ ಮತ್ತು ಧರ್ಮದ ನಡುವೆ ವ್ಯತ್ಯಾಸವಿದೆ, ಧಾರ್ಮಿಕ ಸಂಸ್ಥೆಗಳು ಕೆಲವೊಂದು ಭಾವನಾತ್ಮಕ ಸಂಬಂಧವಿರುತ್ತದೆ. ಖಾವಿಗಳು ಈ ಬಾವನೆಗಳ ಬಗ್ಗೆ ಭಯಪಡುತ್ತಾರೆ, ಖಾವಿಗಳು ಅಷ್ಟೊಂದು ಸುಲಭವಾಗಿ ರಾಜಕೀಯ ಪ್ರವೇಶಿಸುವುದು ಸಾಧ್ಯವಿಲ್ಲ, ಹೀಗಾಗಿ ರಾಜಕೀಯ ಮತ್ತು ಧರ್ಮದ ನಡುವೆ ಅಂತರ ಕಾಯ್ದುಕೊಳ್ಳಬೇಕು ಎಂದು ಚಿತ್ರದುರ್ಗದ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾ ಸ್ವಾಮೀಜಿ ತಿಳಿಸಿದ್ದಾರೆ.
ಹಲವು ‘ಯೋಗಿ’ಗಳು ಬಿಜೆಪಿಯಿಂದ ಟಿಕೆಟ್ ಬಯಸಿದ್ದಾರೆ, ಅಥಣಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮೊಟಗಿ ಮಠದ ಪ್ರಭು ಚನ್ನಬಸವಸ್ವಾಮೀಜಿ ಅವರನ್ನು ಕಾಂಗ್ರೆಸ್ ಓಲೈಸುವ ಪ್ರಯತ್ನ ಮಾಡುತ್ತಿದೆ, ಬಸವ ಧರ್ಮ ಪೀಠದ ಮಾತೆ ಮಹಾದೇವಿ, ಸಿದ್ದೇಶ್ವರ್ ಮಠದ ಬಸವರಾಜ ದೇವರು ಬಾದಾಮಿ ಕ್ಷೇತ್ರದಿಂದ ಸ್ಪರ್ದಿಸಲು ಬಯಸಿದ್ದಾರೆ, ಆದರೆ ಇನ್ನೂ ಯಾವುದು ಸ್ಪಷ್ಟವಾಗಿಲ್ಲ.

RELATED ARTICLES  ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲ ಮಹಿಳೆಯರಿಗೆ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತ ಊಟ