ಕೆಂಬ್ರಿಡ್ಜ್: ಪ್ರಖ್ಯಾತ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರು ತಮ್ಮ ನಿವಾಸದಲ್ಲಿ ಬುಧವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು.
ಭೌತಶಾಸ್ತ್ರಜ್ಞರಾಗಿದ್ದ ಹಾಕಿಂಗ್ 40 ವರ್ಷಗಳ ಸುದೀರ್ಘ ಕಾಲ ಅನುಭವದ ಮೂಲಕ ಹಲವು ಪುಸ್ತಕಗಳು ಹಾಗೂ ಅಧ್ಯಯನ ಗ್ರಂಧಗಳನ್ನು ವಿಜ್ಞಾನ ಲೋಕಕ್ಕೆ ನೀಡುವ ಮೂಲಕ ವೈಜ್ಞಾನಿಕ ಕ್ಷೇತ್ರದಲ್ಲಿ ವಿಶ್ವಪ್ರಸಿದ್ಧಿ ಪಡೆದಿದ್ದರು.
ರಾಯಲ್ ಸೊಸೈಟಿ ಆಫ್ ಆರ್ಟ್ಸ್‌ನ ಗೌರವಾನ್ವಿತ ವ್ಯಕ್ತಿಯಾಗಿದ್ದ ಹಾಕಿಂಗ್ ಅವರು ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಆಜೀವ ಸದಸ್ಯತ್ವ ಹೊಂದಿದ್ದರು.
RELATED ARTICLES ಮೂರು ದಿನಗಳ ಸಾಹಿತ್ಯ ಸಮ್ಮೇಳನದಲ್ಲಿ ಏನೆಲ್ಲಾ ಕಾರ್ಯಕ್ರಮಗಳು. ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ
ಅವರ ನಿಧನದ ವಾರ್ತೆಯನ್ನು ಮಕ್ಕಳಾದ ಲೂಸಿ, ರಾಬರ್ಟ್ ಮತ್ತು ಟಿಮ್ ಅವರು ಮಾಧ್ಯಮಗಳಿಗೆ ತಿಳಿಸಿದ್ದು, ನಾವು ನಮ್ಮ ತಂದೆಯವರನ್ನು ಕಳೆದುಕೊಂಡು ತೀವ್ರ ದುಃಖೀತರಾಗಿದ್ದೇವೆ ಎಂದಿದ್ದಾರೆ.