ಕಾರವಾರ:ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಖಾಲಿ ಇರುವ ಬೋದಕ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ಏರ್ಪಡಿಸಲಾಗಿದೆ.

ಪ್ರಾಧ್ಯಾಪಕರು 2, ಸಹ ಪ್ರಾದ್ಯಾಪಕರು 5, ಸಹಾಯಕ ಪ್ರಾಧ್ಯಾಪಕರು 8, ಸೀನಿಯರ್ ರೆಸಿಡೆಂಟ್ 16 ಮತ್ತು ಜೂನಿಯರ್ ರೆಸಿಡೆಂಟ್ 27 ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ.

RELATED ARTICLES  ಅಂಚೆ ಕಾರ್ಡಿನಲ್ಲಿ ಕವನ : ರಾಜ್ಯಮಟ್ಟದ ಕವನ ಸ್ಪರ್ಧೆ

ಆಸಕ್ತ ಎಂ.ಬಿ.ಬಿ.ಎಸ್, ಎಂ.ಡಿ ಅಥವಾ ಡಿ.ಎನ್.ಬಿ ವೈದ್ಯರು ಸಂಸ್ಥೆಯ ವೆಬ್‍ಸೈಟ್ ನಲ್ಲಿ ಪ್ರಕಟಿಸಲಾದ ಅರ್ಜಿ ನಮೂನೆಯಲ್ಲಿ ಸೂಕ್ತ ದಾಖಲಾತಿಗಳನ್ನು ಸಲ್ಲಿಸಿ ಮಾರ್ಚ 21 ರಂದು ಜರಗುವ ನೇರ ಸಂದರ್ಶನದಲ್ಲಿ ಹಾಜರಾಗಬಹುದಾಗಿದೆ.

RELATED ARTICLES  ನರ್ಸಿಂಗ್ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಜೂನಿಯರ ರೆಸಿಡೆಂಟ ಹುದ್ದೆಗಳ ಅಭ್ಯರ್ಥಿಗಳು ಯಾವುದೇ ಕೆಲಸದ ದಿನ ಕಚೇರಿ ವೇಳೆಯಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ವಿವರಗಳನು www.kimskarwar.kar.nic.in ನಿಂದ ಪಡೆದುಕೊಳ್ಳಬಹುದಾಗಿದೆ. ಎಂದು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.