ಕುಮಟಾ:ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಗ್ರಾಮ ಪಂಚಾಯತ್ ಬರ್ಗಿ ಇದರ “ಕಾಯಕ ಕೇಂದ್ರ” ಎಂಬ ನೂತನ ಕಟ್ಟಡವನ್ನು ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಉದ್ಘಾಟಿಸಿದರು.

RELATED ARTICLES  ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಧ್ವಜಾರೋಹಣ

ಜನತೆಯ ಅನುಕೂಲಕ್ಕಾಗಿ ಈ ಕಾಯಕ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಸ್ಥಿರ ಹಾಗೂ ಅತೀ ಅಗತ್ಯ ಕಾರ್ಯಗಳಿಗೆ ಅನುಕೂಲವಾಗಲು ಈ ಕೇಂದ್ರಕ್ಕೆ ಕಟ್ಟಡವನ್ನು ನಿರ್ಮಾಣಮಾಡಲಾಗಿದೆ. ಇಂದಿನಿಂದ ಇದು ಜನತೆಯ ಅನುಕೂಲಕ್ಕಾಗಿ ತೆರೆದುಕೊಳ್ಳಲಿದೆ ಎಂದರು.

RELATED ARTICLES  ಪೋಲೀಸ್ ಜೀಪ್ ನಲ್ಲಿ ಬಂದು ಸಿಕ್ಕಿ ಬಿದ್ದ ಮೂವರು: ಗೋಕರ್ಣದಲ್ಲಿ ದಾಖಲಾಯ್ತು ಪ್ರಕರಣ

ಇದೇ ಸಂದರ್ಭದಲ್ಲಿ ಆಶ್ರಯ ಯೋಜನೆ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬರ್ಗಿ ಗ್ರಾ. ಪಂ. ಅಧ್ಯಕ್ಷರಾದ ಶ್ರೀ ರಾಮ ಪಟಗಾರ,ತಾ ಪಂ. ಇ. ಒ. ಕುರಿಯವರ್ ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.