ಯಲ್ಲಾಪುರ ; ಕಾಂಗ್ರೆಸ್ ಸರಕಾರದ ಪಾಪದ ಕೊಡ ತುಂಬಿದ್ದು, ಶಿಶುಪಾಲನ ಅಡಳಿತದ ಸಿದ್ದರಾಮಯ್ಯನವರ ಅಸುರ ಸರಕಾರ ಹೋಗಿ ಸಜ್ಜನರ ಸರಕಾರ ತರುವಂತಹ ಕಾಲ ಕೂಡಿ ಬಂದಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಪ್ರಮೋದ ಹೆಗಡೆ ಹೇಳಿದ್ದಾರೆ.

ಅವರು ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿ, ಜಸ್ಟೀಸ್ ವಿಶ್ವನಾಥ ಶೆಟ್ಟಿಯವರಿಗೆ ಚೂರಿಯಿಂದ ಇರಿದ ಘಟನೆ ಸರಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಐಪಿಎಸ್ ಅಧಿಕಾರಿಗಳ ಸಂಘದ ವತಿಯಿಂದ ಆರ್.ಪಿ. ಶರ್ಮರವರು ಸಿ.ಎಂ ಅವರ ವಿರುದ್ಧವಾಗಿ ಬರೆದ ಬಂಡಾಯದ ಪ್ರತಿಭಟನೆ ಪತ್ರ ಸರಕಾರದ ಆಡಳಿತ ಕೈಗನ್ನಡಿಯಾಗಿದೆ. ಹಾಸನ ಡಿ.ಸಿ ವರ್ಗಾವಣೆ ಮಾಡುವ ಪ್ರಯತ್ನ ಸಿ.ಎಂ ರವರಿಗೆ ಮುಖಭಂಗವಾಗಿದೆ. ಸರ್ಕಾರ ಬಡ್ತಿ ವಿಷಯದಲ್ಲಿ ಸುಪ್ರಿಂಕೋರ್ಟ ಆದೇಶ ಉಲ್ಲಂಘನೆ ಮಾಡುತ್ತಿರುವ ಸಿ.ಎಂ ವಿರುದ್ಧ “ಅಹಿಂಸಾ” ಸರಕಾರಿ ನೌಕರರು ಬಂಡೆದ್ದಿದ್ದಾರೆ. ಸರಕಾರಿ ನೌಕರರಲ್ಲಿ ಸದಾಶಿವ ಆಯೋಗ ವರದಿ ಕುರಿತು ಎಡ ಹಾಗೂ ಬಲದ ಮಧ್ಯ ಬಿರುಕುಂಟು ಮಾಡಿದ ಸಿ.ಎಂ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ ಎಂದಿದ್ದಾರೆ.

RELATED ARTICLES  ಭಟ್ಕಳದಲ್ಲಿ ಬಾವಿಗೆ ಜಿಗಿದ ಮಹಿಳೆ : ಜೀವಂತವಾಗಿ ಮೇಲೆತ್ತಿ ಸಾಹಸ ಮೆರೆದ ಯುವಕರು.

ವಿಧಾನಸೌಧ ನೌಕರರ ನೇಮಕಾತಿಯಲ್ಲಿ ನಡೆದ ಸ್ವಜನ ಪಕ್ಷಪಾತದ ವಿರುದ್ಧ ಅಲ್ಲಿಯ ನೌಕರರು ತಿರುಗಿ ಬಿದ್ದಿರುವುದು, ಕರ್ಕಿಯಲ್ಲಿ ಅಕ್ರಮ ದನಗಳನ್ನು ಜನರೇ ಹಿಡಿದು ಪೋಲಿಸರಿಗೆ ಒಪ್ಪಿಸಿದ್ದರು, ಹಿಡಿದವರನ್ನೇ ಗುರಿಯಾಗಿಸಿ ಪ್ರಕರಣ ಹಾಕಲಾಗುತ್ತಿದೆ. ಒಟ್ಟಾರೆ ತುಷ್ಠಿಕರಣಕ್ಕಾಗಿ ದನಗಳ ಬಲಿಗೆ ಅಪರೋಕ್ಷವಾಗಿ ಸರಕಾರ ಬೆಂಬಲಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಲಿಂಗಾಯತ ಧರ್ಮ ಒಡೆಯಲು ಸಿ.ಎಂ ಸಾಕಷ್ಟು ಸಾಹಸಪಟ್ಟು ಈಗ ಮಂತ್ರಿಮಂಡಳದಲ್ಲಿಯೇ ಒಡಕಾಗಿ ಬಂಡಾಯವಾಗಿದೆ. ಲಿಂಗಾಯತರಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಲು ಅಡ್ಡದಾರಿ ಹಿಡಿದ ಸಿ.ಎಂ ವಿರುದ್ಧ ಮುಸ್ಲಿಂರು ಅಸಂತುಷ್ಟರಾಗಿದ್ದಾರೆ ಎಂದು ಕಾಂಗ್ರೆಸನಲ್ಲಿಯೇ ಆತಂಕ ಸೃಷ್ಟಿಯಾಗಿದೆ. ಸರಕಾರದ ಬಂಢ ನೀತಿಯಿಂದ ನಗರದ ಆಸ್ತಿದಾರರಿಗೆ 50 ವರ್ಷದ ಹಿಂದಿನ “ನಕ್ಷೆ” ತರುವ ಅವೈಜ್ಞಾನಿಕ ಕಾಟದಿಂದ ಜನ ಕಂಗಾಲಾಗಿದ್ದಾರೆ. ಇಂದಿಗೂ ಇ-ಸೊತ್ತು ಕಂಟಕದಿಂದ ಹಳ್ಳಿಗಳಲ್ಲಿ ಮನೆ ಕಟ್ಟಲು ಸಾಧ್ಯವೇ ಇಲ್ಲದಂತಾಗಿದೆ. ಮನೆಗಳಿಗೆ “ಹಣಬಿಡುಗಡೆ” ಆಗದೇ ಕಟ್ಟುವ ಮನೆಗಳಲ್ಲಿ ಅರ್ಧಕ್ಕೆ ನಿಂತಿದೆ. ಈ ವರ್ಷದ ಕೇಂದ್ರದ ಮೋದಿ ಸರಕಾರದ ಹೆಚ್ಚುವರಿ ಹಣ ಕರ್ನಾಟಕಕ್ಕೆ ನೀಡಿದ್ದರಿಂದ ಈಗ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣುತ್ತಿವೆ. ನಾಲ್ಕು ಮುಕ್ಕಾಲು ವರ್ಷ ಕೆಲಸ ಮಾಡದ ಕಾಂಗ್ರೆಸ್ ಪ್ರತಿನಿಧಿಗಳು ಈಗ ಚುನಾವಣೆ ಬಂದಿರುವದರಿಂದ ಜನರ ಕಣ್ಣಿಗೆ ಮಣ್ಣೆರೆಚಲು ಸಾಧ್ಯವಾಗದ ಅಭಿವೃದ್ಧಿ ಕೆಲಸಗಳ ಸುಳ್ಳಿನ ಕಂತೆ ಘೋಷಣೆ ಮಾಡುತ್ತಿದ್ದಾರೆ ಎಂದು ಪ್ರಮೋದ ಹೆಗಡೆ ಆಪಾದಿಸಿದ್ದಾರೆ.

RELATED ARTICLES  ಕುಮಟಾ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ

ಒಟ್ಟಾರೆ ಅತಿಕ್ರಮಣದಾರರನ್ನ ಅತಂತ್ರಕ್ಕೆ ತಳ್ಳಿದ ಕಾಂಗ್ರೆಸ್‌ ಸರಕಾರ ಪ್ರಣಾಳಿಕೆಯಲ್ಲಿ ಹೇಳಿದ ಅನೇಕ ಮಾತುಗಳು ಆಚರಣೆಗೆ ಬಂದಿಲ್ಲ. ಇಂತಹ ಪಾಪದ ಕೊಡ ತುಂಬಿದ ಕಾಂಗ್ರೆಸ ತೊಲಗಿಸಿ, ಬಿ.ಜೆ.ಪಿ ಗೆಲ್ಲಿಸಲು ಇದು ಸೂಕ್ತ ಪರ್ವಕಾಲವಾಗಿದೆ ಎಂದಿದ್ದಾರೆ.