ಮೂಡಬಿದಿರೆ: ಶಾಸಕ ಅಭಯಚಂದ್ರ ಒಟ್ಟು 25 ವರ್ಷ ಶಾಸಕರಾಗಿದ್ದು ಮೂಡಬಿದಿರೆ ಕ್ಷೇತ್ರದಲ್ಲಿ ದಾಖಲೆ ಬರೆದಿದ್ದಾರೆ. ಈ ಕಳೆದ ನಾಲ್ಕೂವರೆ ವರ್ಷಗಳಲ್ಲಿ 200 ಕೋ.ರೂ. ಗೂ ಮಿಕ್ಕಿದ ಅನುದಾನವನ್ನು ಮೂಡಬಿದಿರೆ ಕ್ಷೇತ್ರಕ್ಕೆ ಹರಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಅಭಯಚಂದ್ರ.

ಮೂಡಬಿದಿರೆ-ಶಿರ್ತಾಡಿ ಮಾರ್ಗ ವಿಸ್ತರಣೆ, ಮೂಲ್ಕಿ ವಿಜಯಾ ಕಾಲೇಜು ಏಳಿಂಜೆ ವರೆಗೆ ಕಾಂಕ್ರೀಟ್‌ ರಸ್ತೆ, ಮಟ್ಟುವರೆಗೆ ಡಾಮರು ರಸ್ತೆ ಅಭಿವೃದ್ಧಿ, ಅಂಗರಗುಡ್ಡೆ-ಶಿಮಂತೂರು -ಎಳತ್ತೂರು ರಸ್ತೆ (4.5 ಕೋ.ರೂ.), ಸಸಿಹಿತ್ಲು ಸೇತುವೆ (7ಕೋ.) ಹೀಗೆ ಹಲವೆಡೆ ದೊಡ್ಡ ಮೊತ್ತದ ಕಾಮಗಾರಿಗಳು ನಡೆದಿವೆ. ಬೆಳುವಾಯಿ-ಅಳಿಯೂರು ರಸ್ತೆ ಅಭಿವೃದ್ಧಿ, ಎಂಆರ್‌ಪಿಎಲ್‌ ಮಂಗಳಪೇಟೆ-ಬಜಪೆ ರಸ್ತೆ (12 ಕೋ.), ಶಿರ್ತಾಡಿ ಹೊಸ್ಮಾರು ರಸ್ತೆ (9 ಕೋ.), ಬೆಳುವಾಯಿ – ಅಳಿಯೂರು ರಸ್ತೆ (5.5 ಕೋ.), ಪಡು ಮಾರ್ನಾಡು- ತಂಡ್ರಕೆರೆ ರಸ್ತೆ (3.5 ಕೋ.) ಪೂರ್ಣವಾಗುತ್ತಿದೆ. ಸಸಿಹಿತ್ಲಿನಲ್ಲಿ 4 ಕೋ.ರೂ. ವೆಚ್ಚದಲ್ಲಿ ಮೀನುಗಾರಿಕಾ ಜೆಟ್ಟಿ ನಿರ್ಮಿಸಬೇಕಾದರೆ ತಾನು ಸಾಕಷ್ಟು ಶ್ರಮ ಪಟ್ಟಿರುವುದಾಗಿ ಅವರು ಹೇಳುತ್ತಾರೆ.

RELATED ARTICLES  ಮಹಾಮಜ್ಜನಕ್ಕೂ ಮುನ್ನ ದೇಹ ತ್ಯಾಗ ಮಾಡಿದ ಜೈನಮುನಿ