ಶಿವಮೊಗ್ಗ: ವೆಪ್ ಸಂಸ್ಥೆಯು ಜಿಎಸ್‌ಟಿ ವರ್ತಕರಿಗಾಗಿ ಹೊಸ ಪರಿಕರವನ್ನು ಆವಿಷ್ಕರಿಸಿದ್ದು, ಇದರ ಪ್ರದರ್ಶನ ಮತ್ತು ಮಾರಾಟವನ್ನು ಮಾರ್ಚ್ 14ರಿಂದ 16ರವರೆಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪುಷ್ಪಕ್ ಎಂಟರ್‌ಪ್ರೈಸಸ್ ನಿರ್ದೇಶಕ ನಾಗರಾಜ್ ಶೆಟ್ಟರ್, ಪಾರ್ಕ್ ಬಡಾವಣೆಯ ತಮ್ಮ ಮಳಿಗೆಯಲ್ಲಿ ಈ ಪರಿಕರ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಲಾಗಿದೆ ಎಂದರು.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ನೈಜ ಚುನಾವಣಾ ಮಾದರಿಯಲ್ಲಿ ಶಾಲಾ ಸಂಸತ್ತು ಆಯ್ಕೆ.

ವಿಪ್ರೋದ ಅಂಗಸಂಸ್ಥೆಯಾದ ವೆಪ್ ಅತಿ ಸಣ್ಣ ವ್ಯಾಪಾರಸ್ಥರಿಂದ ದೊಡ್ಡ ವ್ಯಾಪಾರಸ್ಥರು ಹಾಗೂ ಸೂಪರ್ ಮಾರ್ಕೆಟ್‌ನವರು ಬಳಸಬಹುದಾದ ಬಿಲ್ಲಿಂಗ್ ಯಂತ್ರವನ್ನು ಆವಿಷ್ಕರಿಸಿದೆ. ಯಾವುದೇ ವಿದ್ಯಾರ್ಹತೆ ಮತ್ತು ಅನುಭವ ಇಲ್ಲದವರೂ ಸಹಾ ಇದನ್ನು ಸರಳವಾಗಿ ಬಳಸಬಹುದಾಗಿದೆ ಎಂದರು.

ಶಿವಮೊಗ್ಗ ಜಿಲ್ಲೆಗೆ ಈ ಪರಿಕರದ ಅಧಿಕೃತ ಮಾರಾಟಗಾರರನ್ನಾಗಿ ಪುಷ್ಪಕ್ ಎಂಟರ್‌ಪ್ರೈಸಸ್‌ಅನ್ನು ನೇಮಿಸಲಾಗಿದೆ. ಎಲ್ಲಾ ರೀತಿಯ ವ್ಯಾಪಾರಸ್ಥರು ಈ ಬಿಲ್ಲಿಂಗ್ ಪ್ರಿಂಟರ್‌ನ ಪ್ರಾತ್ಯಕ್ಷಿಕೆ ಭೇಟಿ ನೀಡಿ ಅಗತ್ಯಮಾಹಿತಿ ಪಡೆಯಬಹುದು ಎಂದರು.

RELATED ARTICLES  ಉತ್ತರ ಕನ್ನಡದಲ್ಲಿ ಇಂದು ಐವರಲ್ಲಿ ಕೊರೋನಾ ದೃಢ

ಕೆಲವೇ ತಾಸಿನಲ್ಲಿ ಬಿಲ್ಲಿಂಗ್ ಮಾಡಬಹುದಾದ ಈ ಯಂತ್ರದಿಂದ ವೇಳೆ ಉಳಿತಾಯವಾಗಲಿದೆ. ಲೆಕ್ಕ ಪರಿಶೋಧಕರು ಮತ್ತು ಆಡಿಟರ್‌ಗಳು ನೀಡುವ ವರದಿಯನ್ನು ಕೇವಲ ಒಂದು ಬಟನ್ ಒತ್ತುವಮೂಲಕ ಪಡೆಯಬಹುದಾಗಿದೆ ಎಂದರು.

ಹೆಚ್ಚಿನ ಮಾಹಿತಿಗೆ 9884139271 ಅಥವಾ 9480402634 ಇಲ್ಲಿಗೆ ಸಂಪರ್ಕಿಸಬಹುದು ಎಂದರು.