ಯಲ್ಲಾಪುರ ; ಮನೆಗೆ ಟಿ.ವಿ ನೋಡಲು ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿರುವ ಘಟನೆ ತಾಲೂಕಿನ ಕಿರವತ್ತಿ ಗ್ರಾಮದ ಜಯಂತಿನಗರದಲ್ಲಿ ಮಾರ್ಚ್ 9ರಂದು ಮಧ್ಯಾಹ್ನ ನಡೆದಿದೆ.

ಪರಿಚಯಸ್ತ 13 ವರ್ಷದ ಅಪ್ರಾಪ್ತ ಬಾಲಕಿ ಮಧ್ಯಾಹ್ನ ಪಕ್ಕದ ಮನೆಯ ಟಿ.ವಿ ನೋಡಲು ಬಂದಿದ್ದಳು. ಮನೆಯಲ್ಲಿ ಆರೋಪಿ ಈಗಾಗಲೇ ಮದುವೆಯಾಗಿ 20 ವರ್ಷದಷ್ಟು ದೊಡ್ಡ 3 ಮಕ್ಕಳಿರುವ ಮದರಸಾಬ್ ಘೋರಿಸಾಬ್ ಪಟೇಲ್(42) ಈತನನ್ನು ಹೊರತು ಪಡಿಸಿ ಇನ್ಯಾರು ಮನೆಯಲ್ಲಿ ಇರಲಿಲ್ಲ ,

RELATED ARTICLES  ಶಿರಸಿಯ ಟಿ.ಎಸ್.ಎಸ್ ಗೆ 2.05ಕೋಟಿ ನಿವ್ವಳ ಲಾಭ: ಗ್ರಾಹಕರ ಸ್ವರ್ಗವಾಗಿ ಬೆಳೆದ ಸಂಸ್ಥೆ

ಬಾಲಕಿ ನೀರು ಕುಡಿಯಲು ಎಂದು ಆತನ ಮನೆಯ ಅಡಿಗೆ ಕೊಣೆಯ ಒಳಗೆ ಹೋದಾಗ ಆರೋಪಿ ಆಕೆಯನ್ನು ನೆಲಕ್ಕೆ ಕೆಡವಿ ಅತ್ಯಾಚಾರ ಮಾಡಿದ್ದಾನೆ ಎಂದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಮನರಂಜನೆಯಲ್ಲಿ ಮಿಂದೆದ್ದ ಚಿತ್ತಾರ : ಯಶಸ್ವಿಯಾಯ್ತು ವಾರ್ಷಿಕೋತ್ಸವ

ಈ ಕುರಿತು ಸಂತ್ರಸ್ತೆಯ ತಾಯಿ ಈ ಕುರಿತು ಪೊಲೀಸ್ ಇಲಾಖೆಯಲ್ಲಿ ದೂರು ದಾಖಲಿಸಿದ್ದಾರೆ. ಕಲಂ 376, ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ 2012 (POCSO-2012) ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸ್ ನಿರೀಕ್ಷಕ ಡಾ.ಮಂಜುನಾಥ ನಾಯಕ ತನಿಖೆ ಕೈಗೊಂಡಿದ್ದಾರೆ.