ಕುಮಟಾ : ತಾಲೂಕಿನ ಗೋಕರ್ಣ ಪಂಚಾಯತ್ ವ್ಯಾಪ್ತಿಯಲ್ಲಿ ಅಂದಾಜು 15.68 ಲಕ್ಷ ಅನುದಾನದ ನಾಡಕಛೇರಿ ನಿರ್ಮಾಣ ಕಾಮಗಾರಿ(ಹಂತದ-1)ಕ್ಕೆ ಚಾಲನೆ ದೊರೆತಿದೆ.

ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿರವರು ಪಂಚಾಯತ್ ಸದಸ್ಯರ, ಅಧಿಕಾರಿಗಳ ಹಾಗೂ ಊರ ನಾಗರಿಕರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನೆರವೇರಿಸಿದರು.

RELATED ARTICLES  ಮಹಾರಾಷ್ಟ್ರ ರಾಜಕೀಯದಲ್ಲಿ ಹೈ ಡ್ರಾಮಾ : ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ

ಈ ಸಂದರಗಭದಲ್ಲಿ ಸತ್ವಾಧಾರ ನ್ಯೂಸ್ ಜೊತೆ ಮಾತನಾಡಿದ‌ ಶಾಸಕರು ಗೋಕರ್ಣ ಹಾಗೂ ಈ ಭಾಗದಲ್ಲಿ ಹೆಚ್ಚಿನ ಅನುದಾನ ಬಿಡುಗಡೆಯಾಗಿ ಪ್ರವಾಸೋಧ್ಯಮ ಹಾಗೂ ಇನ್ನಿತರೆ ಕ್ಷೇತ್ರಗಳ ಅಭಿವೃದ್ಧಿಯಾಗಿದೆ ಎಂದರು.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.

ಈ ಸಂದರ್ಭದಲ್ಲಿ ಗೋಕರ್ಣ ಪಂ. ಅಧ್ಯಕ್ಷೆ ಶ್ರೀಮತಿ ಮಹಾಲಕ್ಷ್ಮಿ ಭಡ್ತಿ, ಪ್ರಮುಖರಾದ ಮೋಹನ್ ಗೌಡ, ಹನೀಫ್ ಸಾಬ್ ಹಾಗೂ ಈಶ್ವರ ಗೌಡ ಉಪಸ್ಥಿತರಿದ್ದರು.