ಕುಮಟಾ: ಮೇಜರ್ ಸಂದೀಪ್ ಉನ್ನಿಕೃಷ್ಣನ್, ಈ ಹೆಸರು ಕೇಳಿದರೆ ಮೈ ರೋಮಾಂಚನವಾಗುತ್ತದೆ. ಮುಂಬೈ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಉನ್ನಿಕೃಷ್ಣನ್ ಬದುಕಿದ್ದರೆ ಇಂದು 38 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.
ಸಂದೀಪ್ ಪ್ರಾಣತ್ಯಾಗ ಮಾಡಿ ಆರು ವರ್ಷಗಳೇ ಆಗಿವೆ. ಸಂದೀಪ್ ಎನ್‌ಎಸ್‌ಜಿ ಕಮಾಂಡೊ, ಮೇಜರ್ ಆಗಿ ಮುಂಬಯಿ ದಾಳಿಯಲ್ಲಿ ಉಗ್ರರೊಂದಿಗೆ ಸೆಣಸಾಡಿ ದೇಶಕ್ಕಾಗಿ ಮಡಿದರು. ಸಾಮಾಜಿಕ ಜಾಲತಾಣಗಳಲ್ಲೂ ಸಂದೀಪ್ ಸ್ಮರಣೆ ಮಾಡಿಕೊಳ್ಳಲಾಗಿದೆ.
ಅದೇ ರೀತಿ ಕುಮಟಾದ ಯು ಬ್ರಿಗೇಡ್ ವಿಶೇಷವಾಗಿ ಸಂದೀಪ್ ಉನ್ನಿಕೃಷ್ಣನ್ ಜನ್ಮದಿನ ಆಚರಿಸಿದರು.ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಹುಟ್ಟುಹಬ್ಬದ ಅಂಗವಾಗಿ ಇವತ್ತು ಕುಮಟಾದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ಕುಮಟಾದ ಹೊಸ ಬಸ್ ನಿಲ್ದಾಣದಲ್ಲಿ ಸಂದೀಪರ ಫೋಟೋ ಇಡುವ ಮೂಲಕ ಹಾಗೂ ಸೈನ್ಯಕ್ಕಾಗಿ ನಿಧಿ ಸಂಗ್ರಹಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯಕರ್ತರಾದ ಅಣ್ಣಪ್ಪ ,ಕಿರಣ್ ,ಆದಿತ್ಯ ,ಲಕ್ಷ್ಮಿಕಾಂತ್ ,ಮುಂತಾದ ಕಾಯಕರ್ತರು ಮತ್ತು ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳು ಉಪಸ್ಥಿತರಿದ್ದರು.