ಕಾರವಾರ: ಬೇಲೆಕೇರಿಯ ಕರಿದೇವ ದೇವಸ್ಥಾನದ ಎದುರು ನಿರ್ಮಿಸಿದ ಭವ್ಯ ರಂಗ ಸಜ್ಜಿಕೆಯಲ್ಲಿ ಹಿರಿಯ ಕಲಾವಿದರು ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಹಾಗೂ ಐದನೇ ತರಗತಿಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ರಮೇಶ್ ಗೌಡ ವಿರಚಿತ ಶ್ವೇತಾ ಚಂದನ ಎಂಬ ಸಾಮಾಜಿಕ ಯಕ್ಷಗಾನವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದಸ್ಯೆ ಹಾಗೂ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಭಾರಿಯಾದ ಶ್ರೀಮತಿ ರೂಪಾಲಿ ನಾಯ್ಕ ಉದ್ಘಾಟಿಸಿದರು.ಮೊದಲಿಗೆ ವೇದಿಕೆಯಲ್ಲಿದ್ದ ಎಲ್ಲರನ್ನೂ ವಂದಿಸಿ ಮಾತನಾಡಿದ ಅವರು ಇಂತಹ ಹಿರಿಯ ಕಲಾವಿದರು ಹಾಗೂ ಹಿರಿಯ ನಾಗರಿಕರಿಗೆ ನಾನು ಸನ್ಮಾನ ಮಾಡುತ್ತಿದ್ದೇನೆ ಎಂಬುದೆ ಒಂದು ಖುಷಿಯ ವಿಚಾರ,ನಾನು ಅವರಿಗಿಂತ ವಯಸ್ಸಿನಲ್ಲಿ ತುಂಬಾ ಚಿಕ್ಕವಳಿದ್ದೇನೆ.ಅವರ ಎದುರು ನಿಂತು ಮಾತನಾಡುವ ಅರ್ಹತೆಯೂ ನನ್ನಲ್ಲಿಲ್ಲ ಅಂತಹದರಲ್ಲಿ ಅವರಿಗೆ ನಾನು ಸನ್ಮಾನ ಮಾಡುತ್ತೇನೆಂದರೆ ಇದಕ್ಕಿಂತ ಖುಷಿಯ ವಿಚಾರ ಇನ್ನೊಂದಿಲ್ಲ ಎಂದರು.

RELATED ARTICLES  ಯಲ್ಲಾಪುರದಲ್ಲಿ ಭರ್ಜರಿ ಕಾರ್ಯಾಚರಣೆ : ಲಕ್ಷಾಂತರ ಮೌಲ್ಯದ ಸೀಸಂ ಕಟ್ಟಿಗೆ ವಶ

ಇಂತಹ ಕಾರ್ಯಕ್ರಮಗಳನ್ನು ನಡೆಸುವುದು ಸುಲಭದ ಮಾತಲ್ಲ,ಈ ಕಾರ್ಯಕ್ರವನ್ನು ನೋಡಿದರೆ,ಸಂಘಟಕರು ಪಟ್ಟ ಪರಿಶ್ರಮ ಎದ್ದು ಕಾಣುತ್ತಿದೆ ಎಂದರು.ಇಂತಹ ಸಾಮಾಜಿಕ ಯಕ್ಷಗಾನಗಳು ಈಗಿನ ದಿನಗಳಲ್ಲಿ ಅತಿ ವಿರಳವಾಗಿವೆ, ನಮ್ಮ ಜೀವನದ ಆಗು ಹೊಗುಗಳನ್ನೇ, ಯಕ್ಷಗಾನವನ್ನಾಗಿ ಪರಿವರ್ತಿಸಿ, ಜನತೆಯ ಮನ ಮುಟ್ಟುವ ಕೆಲಸವನ್ನು ಕಲಾವಿದರು ಮಾಡುತ್ತಾರೆ ಎಂದರು.ಇಂತಹ ಯಕ್ಷಗಾನವನ್ನು ವೀಕ್ಷಿಸಿದರೆ ನಮ್ಮ ಜೀವನದಲ್ಲಿ ಬರುವಂತಹ ಕಷ್ಟ ಕಾರ್ಪಣ್ಯಗಳನ್ನು ಹೇಗೆ ಎದುರಿಸಬೇಕೆಂದು ತಿಳಿಯಬಹುದು ಎಂದರು.

RELATED ARTICLES  ಕುಮಟಾ : ಬೆಂಕಿ ಅವಘಡ : ಬೆಳೆ ಬೆಂಕಿಗೆ ಆಹುತಿ.

ಪಾಲಕರು ಹೆಚ್ಚಿನದಾಗಿ ಮಕ್ಕಳಲ್ಲಿ ಇಂತಹ ಆಸಕ್ತಿಯನ್ನು ತುಂಬಿದರೆ, ಮುಂದಿನ ದಿನಗಳಲ್ಲಿ ಅವರು ಇಂತಹ ಒಳ್ಳೆಯ ಕಲೆ ಮರೆಯಾಗದಂತೆ ನೋಡಿಕೊಳ್ಳುತ್ತಾರೆ ಎಂದರು.ಯುವಕರು ವಾಟ್ಸಾಪ್, ಫೇಸ್ ಬುಕ್ ಎನ್ನದೆ ಇಂತಹ ಕಲೆಗಳನ್ನು ಪ್ರೋತ್ಸಾಹಿಸಬೇಕು ಎಂದರು.