ಹೊನ್ನಾವರ : ಹೊನ್ನಾವರ ತಾಲ್ಲೂಕಿನ ಹಳದೀಪುರ ಪಂಚಾಯತ್ ವ್ಯಾಪ್ತಿಯ ಎಂ.ಡಿ.ಆರ್. ಕುದಬೈಲ್ ಕ್ರಾಸಿನಿಂದ ಚಂಡೇಶ್ವರ ಹಬ್ಬುಚಿಟ್ಟೆವರೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಹಂತ-4ರ ಅಡಿಯಲ್ಲಿ ಅಂದಾಜು 30 ಲಕ್ಷ ಅನುದಾನದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಿಕ್ಕಿದೆ.

RELATED ARTICLES  ಮತ್ತೆ ಸದ್ದುಮಾಡುತ್ತಿದೆ ಅಕ್ರಮ ಗೋ ಸಾಗಾಟ

ನಮ್ಮ ಗ್ರಾಮ ನಮ್ಮ ರಸ್ತೆ ಹಂತ-4ರ ಅಡಿಯಲ್ಲಿ ಅಂದಾಜು 30 ಲಕ್ಷ ಅನುದಾನದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ಪಂಚಾಯತ್ ಸದಸ್ಯರ, ಅಧಿಕಾರಿಗಳ ಹಾಗೂ ಊರ ನಾಗರಿಕರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನೆರವೇರಿಸಿದರು.

RELATED ARTICLES  ಕ್ಷುಲ್ಲಕ ವಿಷಯಕ್ಕೆ ತಾಯಿ ಹಾಗೂ ಅಕ್ಕನ ಮೇಲೆ ಗುಂಡು ಹಾರಿಸಿದ ಯುವಕ

ಈ ಸಂದರ್ಭದಲ್ಲಿ ಹಳದೀಪುರ ಗ್ರಾ.ಪಂ ಅಧ್ಯಕ್ಷರಾದ ಗುಣಮಾಲಾ ಇಂದ್ರ, ಎಂಜಿನಿಯರ್ ಆರ್.ಜಿ ಭಟ್ಟ, ಪ್ರಮುಖರಾದ ವಿನಾಯಕ ಶೇಟ್,ದಾಮೋದರ ನಾಯ್ಕ ಹಾಗೂ ಇನ್ನಿತರರು ಹಾಜರಿದ್ದರು.