ನವದೆಹಲಿ, – ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿರುದ್ಧ ವೈಎಸ್‍ಆರ್ ಕಾಂಗ್ರೆಸ್‍ನ ಜಗನ್ಮೋಹನ ರೆಡ್ಡಿ ಹಾಗೂ ಜನಸೇನಾದ ಪವನ್ ಕಲ್ಯಾಣ್ ಅವರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ತೆಲುಗುದೇಶಂ ಮುಖಂಡ -ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ. ಟೆಲಿಕಾನ್ಸ್‍ಫರೆನ್ಸ್‍ನಲ್ಲಿ ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಅವರು,

RELATED ARTICLES  ‘ಇನ್ಫೋಸಿಸ್‌ ವಿಜ್ಞಾನ‘ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟ.

ತಮಿಳುನಾಡಿನಲ್ಲಿ ಇಪಿಎಸ್ (ಪನೀರ್ ಸೆಲ್ವಂ) ಬಣದ ವಿರುದ್ಧ ಒಪಿಎಸ್ (ಎಡಪ್ಪಾಡಿ ಪಳನಿಸ್ವಾಮಿ) ಬಣವನ್ನು ಎತ್ತಿಕಟ್ಟಿದ ತಂತ್ರವನ್ನೇ ಮೋದಿ ಇಲ್ಲೂ ಬಳಸುತ್ತಿದ್ದಾರೆ ಎಂದು ದೂರಿದ್ದಾರೆ. ಆಂಧ್ರದ ನ್ಯಾಯಬದ್ಧ ಹಕ್ಕನ್ನು ಒದಗಿಸುವ ಬದಲು ನಮ್ಮ ವಿರುದ್ಧ ಇವರಿಬ್ಬರನ್ನು ಛೂ ಬಿಟ್ಟು, ತಮಿಳುನಾಡಿನಲ್ಲಿ ಆಡಿದ ಆಟವನ್ನೇ ಅಡಲು ಮೋದಿ ಮುಂದಾಗಿದ್ದಾರೆ ಎಂದು ದೇಶದಲ್ಲಿ ಪ್ರಬಲವಾದ ಮೋದಿ ವಿರೋಧಿ ಅಲೆ ಮತ್ತು ಬಿಜೆಪಿ ವಿರೋಧಿ ಅಲೆ ಇರುವುದು ನಿನ್ನೆಯ ಉಪ ಚುನಾವಣೆ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

RELATED ARTICLES  ಧಾರವಾಡ ನಿರ್ಮಾಣ ಹಂತದ ಕಟ್ಟಡ ಕುಸಿತ: ಅವಶೇಷಗಳ ಅಡಿಯಲ್ಲಿ ಮೂವರು ಜೀವಂತ.