ಭಟ್ಕಳ : ತಾಲ್ಲೂಕಿನ ಹಾಡುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಂಜಿಲೆ ಗ್ರಾಮಕ್ಕೆ ಶಾಸಕ ಮಂಕಾಳ ವೈದ್ಯರ ಪ್ರಯತ್ನದಿಂದ ಮಂಜೂರಿಯಾಗಿ ನಿರ್ಮಾಣಗೊಂಡ ನೂತನ ಸೇತುವೆಯನ್ನು ಇಂದು ಉದ್ಘಾಟಿಸಿದ ಭಟ್ಕಳದ ಜನಪ್ರಿಯ ಶಾಸಕ, ಅಭಿವೃದ್ಧಿಯ ಹರಿಕಾರ ಸನ್ಮಾನ್ಯ ಶ್ರೀ ಮಂಕಾಳ ವೈದ್ಯರವರು ಸೇತುವೆಗೆ ಮಾಜಿ ಶಾಸಕರಾದ ದಿ.ಡಾ.ಯು.ಚಿತ್ತರಂಜನ್ ಹೆಸರನ್ನು ನಾಮಕರಣಗೊಳಿಸಿ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.

RELATED ARTICLES  ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ ಸಂಸ್ಥೆಗೆ ಸನ್ಮಾನಕ್ಕೆ ಅರ್ಜಿ ಆಹ್ವಾನ.

ಈ ಭಾಗದಲ್ಲಿ ಸೇತುವೆ ನಿರ್ಮಿಸಬೇಕೆಂಬುದು ಅಂದಿನ ಶಾಸಕರಾಗಿದ್ದ ಡಾ.ಚಿತ್ತರಂಜನ್ ಅವರ ಕನಸಾಗಿತ್ತು. ಅವರ ಕನಸನ್ನು 22 ವರ್ಷಗಳ ನಂತರ ನಾನು ಈಡೇರಿಸಿದ್ದು ನನ್ನ ಸೌಭಾಗ್ಯ ಎಂದು ಹೇಳಿದ ಶಾಸಕ ಮಂಕಾಳ ವೈದ್ಯರು ಮಾಜಿ ಶಾಸಕ ಡಾ.ಚಿತ್ತರಂಜನ್ ಅವರ ಹೆಸರು ಚಿರಸ್ಥಾಯಿಯಾಗಿರಬೇಕು ಎನ್ನುವ ಕಾರಣದಿಂದ ಸೇತುವೆಗೆ ಇವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದರು. ರೂ.4 ಕೋಟಿ 83 ಲಕ್ಷದ ವೆಚ್ಚದಲ್ಲಿ ನಿರ್ಮಾಣವಾದ ಈ ಸೇತುವೆಯು ಈ ಭಾಗದ ಜನರ ದಶಕಗಳ ಕನಸನ್ನು ಈಡೇರಿಸಿದೆ.

RELATED ARTICLES  ಅರಬ್ಬಿ ಸಮುದ್ರದಲ್ಲಿ ಪಾಕ್ ಹಡಗು : ಕರಾವಳಿ ಕಾವಲುಪಡೆಯಿಂದ ವಶ

ಕೇವಲ 45 ಕುಟುಂಬ 200 ಕ್ಕಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ಈ ಪುಟ್ಟ ಗ್ರಾಮ ಇಂದು ಸೇತುವೆ ಭಾಗ್ಯ ಪಡೆದಿರುವುದು ಹೆಮ್ಮೆಯ ವಿಷಯ.