ಯಲ್ಲಾಪುರ ; ರಾಜ್ಯದಲ್ಲಿ ಆಡಳಿತ ನಡೆಸಿರುವ ಕಾಂಗ್ತೆಸ್ ಹಾಗೂ ಬಿಜೆಪಿ ಸರಕಾರಗಳು ಉತ್ತರಕನ್ನಡ ಜಿಲ್ಲೆಯನ್ನು ನಿರ್ಲಕ್ಷಿಸಿವೆ. ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿರುವ ಈ ಜಿಲ್ಲೆಯ ಜನತೆಗೆ ಸರ್ಕಾರಗಳು ನೀಡಿರುವ ಸೌಲಬ್ಯ ನಾಗರಿಕರು ತಲೆ ತಗ್ಗಿಸುವಂತಹದಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.

ಅವರು ಗುರುವಾರ ಮಧ್ಯಾಹ್ನ ಯಲ್ಲಾಪುರದ ವೆಂಕಟ್ರಮಣ ಮಠದಿಂದ ಕುಮಾರಪರ್ವ ಮೆರವಣಿಗೆಗೆ ಚಾಲನೆ‌ ನೀಡಿ, ವೈಟಿಎಸ್ಎಸ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

ನನ್ನ ಮನೆಗೆ ಕೈಗಾರಿಕೋದ್ಯಮಿಗಳು ಬರುವುದಿಲ್ಲ ಸರ್ಕಾರದ ಯಾವುದೇ ಸೌಲಭ್ಯ ಸಿಗದೆ ವಂಚಿತರಾಗಿದ್ದವರು ನಮ್ಮ ಮನೆಗೆ ಆಗಮಿಸಿ ತಮ್ಮ ಸಮಸ್ಯೆಯನ್ನು ಹೇಳಿ ಹೇಳಿಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಹತ್ತು ಇಪ್ಪತ್ತು ಗುಂಟೆ ಜಮೀನನ್ನು ಅತಿಕ್ರಮಣ ಮಾಡಿಕೊಂಡು ಸಾಗುವಳಿ ಮಾಡುವ ರೈತರನ್ನು ಒಕ್ಕಲೆಬ್ಬಿಸುವ ಅರಣ್ಯ ಇಲಾಖೆ, ಬೆಂಗಳೂರಿನ ಜಕ್ಕೂರಿನ 120 ಎಕರೆ ಅರಣ್ಯ ಪ್ರದೇಶದಲ್ಲಿ ಐದು ಎಕರೆ ಅತಿಕ್ರಮಣ ಮಾಡಿ ಮನೆ ಕಟ್ಟಿಕೊಂಡಿರುವ ಆರ್ ವಿ ದೇಶಪಾಂಡೆ ಅಂತಹ ಸಚಿವರ ಅತಿಕ್ರಮಣಕ್ಕೆ ಕೈ ಹಾಕುವ ಧೈರ್ಯ ಮಾಡುವುದಿಲ್ಲ. ಇಲ್ಲಿಯ ಅತಿಕ್ರಮಣದಾರರ ಪರವಾಗಿ ದೇಶಪಾಂಡೆ ಅವರು ಕೂಡ ಏನು ಕೆಲಸ ಮಾಡುತ್ತಿಲ್ಲ. ನೀವು ದೇಶಪಾಂಡೆ ಅವರಿಗೆ ಮಂತ್ರಿಯಾಗಿ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟಿದ್ದೀರಿ ಹೀಗಾಗಿ ನಿಮ್ಮ ಅತಿಕ್ರಮಣ ಸಕ್ರಮ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕುಟುಂಬದವರನ್ನೆ ಇಲ್ಲಿಯ ಶಾಸಕರು ಜೈಲಿಗೆ ಕಳುಹಿಸಿದ್ದಾರೆ. ಗ್ರಾಮ ಪಂಚಾಯತ ಅಧ್ಯಕ್ಷ ಸದಸ್ಯರನ್ನು ಕಡೆಗಣಿಸಿ ಮನೆ ಹಂಚಿಕೆಯಲ್ಲಿ ತಾವು ಮಾಡುತ್ತಾರೆ. ಆದರೆ ನಮ್ಮ ಕ್ಷೇತ್ರದಲ್ಲಿ ನಾನು ನಮ್ಮ ಗ್ರಾಮ ಪಂಚಾಯತ ಪ್ರತಿನಿಧಿಗಳಿಗೆ ಸ್ವತಂತ್ರ ನೀಡಿದ್ದೇನೆ ಅವರ ಹಕ್ಕನ್ನು ಮೊಟಕುಗೊಳಿಸಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಮುಂದಿನ ಚುನಾವಣೆಯಲ್ಲಿ ನನಗೆ ಅಧಿಕಾರ ನೀಡಿದರೆ ನಾನು ಆಡಳಿತ ನಡೆಸುವುದಿಲ್ಲ, ರಾಜ್ಯದ ಶೋಷಿತರು ಬಡವರು ಆಡಳಿತ ನಡೆಸಲಿದ್ದಾರೆ. ನಾನು ನಿಮಗಾಗಿ ನನ್ನ ಅಪ್ಪನ ಮನೆಯಿಂದ ಏನನ್ನೂ ತಂದು ಕೊಡಬೇಕಾಗಿಲ್ಲ. ನೀವು ತೆರಿಗೆಯ ರೂಪದಲ್ಲಿ ಸರ್ಕಾರಕ್ಕೆ ನೀಡಿರುವ ಹಣವನ್ನೇ ನಿಮಗೆ ನೀಡುತ್ತೇನೆ. ಯೋಜನೆಗಳ ಹೆಸರಲ್ಲಿ ಹಣ ನುಂಗುವ ಇತರೆ ಸರ್ಕಾರ ಗಳಂತೆ ಕಾರ್ಯ ಕಾರ್ಯನಿರ್ವಹಿಸುವುದಿಲ್ಲ ಎಂದು ಅವರು ಆಶ್ವಾಸನೆ ನೀಡಿದರು.

RELATED ARTICLES  ಬೇಸಿಗೆ ರಜಾ ಶಿಬಿರ ಪ್ರಾರಂಭ

ಜಾಹೀರಾತಿನ ಮೂಲಕ ಯೋಜನೆಗಳನ್ನು ಪ್ರಕಟಿಸಿ ಜನರನ್ನು ಮರಳು ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಪ್ರತಿ ದಿನ ಜಾಹೀರಾತಿಗೆ ನೀಡುವ ಕೋಟ್ಯಾಂತರ ರುಪಾಯಿ ಹಣದಲ್ಲಿ ಇನ್ನಷ್ಟು ಮನೆಗಳನ್ನು ಹಾಗೂ ಬಡವರ ಸೇವೆಯನ್ನು ಮಾಡಬಹುದಾಗಿತ್ತು. ಈಗ ಕಾಂಗ್ರೆಸ್ ಸರಕಾರದ ಎಲ್ಲ ಯೋಜನೆಗಳು ವಿಫಲವಾಗಿದೆ. ಶಾಲಾ ಮಕ್ಕಳು ಸಿದ್ದರಾಮಯ್ಯನವರ ಜಾಹೀರಾತಿಗೆ ಕಲ್ಲು ತೆಗೆದುಕೊಂಡು ಹೊಡೆಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮೊಬೈಲ್ ನಲ್ಲಿ ಕಲ್ಲು ಹೊಡೆಯುತ್ತಿರುವ ಒಂದು ಚಿತ್ರವನ್ನು ಪ್ರದರ್ಶಿಸಿದರು.

ಬಿಜೆಪಿ ಮಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಜಾತಿ-ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುತ್ತಿದೆ. ಬಿಜೆಪಿಯಲ್ಲಿ ವಿಷಬೀಜಕ್ಕೆ ಮೀನುಗಾರರು ಮೊಗವೀರರು ಹಾಗೂ ಹಿಂದುಳಿದವರ ಮಕ್ಕಳು ಬಲಿಯಾಗುತ್ತಿದ್ದಾರೆ. ಬಿಜೆಪಿಯ ಮುಖಂಡರ ಮಕ್ಕಳ್ಯಾರು ಇದುವರೆಗೂ ಸತ್ತಿಲ್ಲ ಎಂದ ಅವರು, ಮುಸ್ಲಿಂ ಹಾಗೂ ಹಿಂದೂಗಳ ಮೈಯಲ್ಲಿ ಹರಿಯುತ್ತಿರುವುದು ಒಂದೇ ರಕ್ತ. ಯಾರ ರಕ್ತ ಹರಿಸಿ ಪ್ರಯೋಜನವೇನು ಎಂದು ಪ್ರಶ್ನಿಸಿದರು.

ಉತ್ತರಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಅಲ್ಲಿಯ ಸಮಸ್ಯೆಗಳನ್ನು ಬಗೆಹರಿಸಲಾಗದ ಅಲ್ಲಿಯ ಬಿಜೆಪಿ ಮುಖ್ಯಮಂತ್ರಿ ಆದಿತ್ಯನಾಥ ಅವರನ್ನು ಕರ್ನಾಟಕದ ಬಿಜೆಪಿ ಪ್ರಚಾರಕ್ಕೆ ಬಳಸುತ್ತಿರುವುದು ಇಲ್ಲಿಯ ಜನರನ್ನು ಮೋಸ ಮಾಡುವುದು ಬಿಟ್ಟರೆ ಬೇರೇನೂ ಇಲ್ಲ ಎಂದು ಆಪಾದಿಸಿದರು.

ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿಗೆ 24 ಸಾವಿರ ಮತಗಳನ್ನು ನೀಡಿದ್ದೀರಿ. ನಿಮ್ಮನ್ನು ನಾವು ನೆನಪಿನಲ್ಲಿಟ್ಟಿದ್ದೆವೆ. ಈ ಬಾರಿ ಇನ್ನೂ ಹದಿನೈದು ಸಾವಿರ ಮತಗಳನ್ನು ಸೇರಿಸಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಘೋಷಿತ ಅಭ್ಯರ್ಥಿ ರವೀಂದ್ರ ಅವರನ್ನು ಆಯ್ಕೆ ಮಾಡುವಂತೆ ಕುಮಾರಸ್ವಾಮಿ ಕೇಳಿಕೊಂಡರು.

RELATED ARTICLES  ಯಶಸ್ವಿಯಾಗಿ ಸಂಪನ್ನಗೊಂಡ ಗ್ರಾಮ ಒಕ್ಕಲಿಗರ ಕ್ರಿಕೆಟ್ ಪಂದ್ಯಾವಳಿ

ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ರೈತರು ಸಾಲ ಮಾಡಿ ಕೃಷಿ ಮಾಡಬೇಕಾಗಿಲ್ಲ, ಸರ್ಕಾರ ಉಚಿತವಾಗಿ ಬಿತ್ತನೆ ಬೀಜ ಕೃಷಿ ಉಪಕರಣಗಳನ್ನು ರೈತರಿಗೆ ಪೂರೈಸಲಿದೆ. ರೈತರ ಬೆಳೆಗೆ ನ್ಯಾಯಯುತ ಬೆಲೆ ಕೊಡಿಸಲು ನಿಮ್ಮ ಭವಿಷ್ಯವನ್ನು ಉಜ್ವಲವಾಗಿಸಲು ಹಾಗೂ ರಾಜ್ಯದ ಜನತೆಯ ರಕ್ಷಣೆಗಾಗಿ ನನ್ನ ಆರೋಗ್ಯವನ್ನು ನಿರ್ಲಕ್ಷಿಸಿ ಕಾರ್ಯನಿರ್ವಹಿಸುತ್ತೇನೆ. ಈ ರಾಜ್ಯದಲ್ಲಿ ಜನರೇ ಜನರಿಗಾಗಿ ಆಡಳಿತ ನಡೆಸುವ ನಿಮ್ಮ ಬದುಕನ್ನು ಹಸನು ಮಾಡುವ ಸರ್ಕಾರ ಬೇಕು ಎನ್ನುವ ಉದ್ದೇಶ ನಿಮ್ಮದಾಗಲಿ ಜೆಡಿಎಸ್ಸಿಗೆ ಮತ್ತೊಮ್ಮೆ ಅವಕಾಶ ಕೊಡುವಂತೆ ಅವರು ಜನತೆಯಲ್ಲಿ ಕೇಳಿಕೊಂಡರು.

ಮಾಜಿ ಸಚಿವ ಹಾಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭಾಗವಹಿಸುವ ಸಭೆಗಳಲ್ಲಿ ಜನ ಮುಗಿಬಿದ್ದು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಯಸುತ್ತಾರೆ. ಬೇರೆ ಯಾವುದೇ ಪಕ್ಷದ ಮುಖಂಡರು ಜನರನ್ನು ಹತ್ತಿರ ಸುಳಿಯಲು ಕೊಡುವುದಿಲ್ಲ ಎಂದರು.

ಶಾಸಕ ಮಧು ಬಂಗಾರಪ್ಪ ಮಾತನಾಡಿ, ಉತ್ತರಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣದಾರರಿಗೆ ಬಹಳಷ್ಟು ಅನ್ಯಾಯವಾಗಿದೆ. ಬೇರೆ ಜಿಲ್ಲೆಗಳಲ್ಲಿ ಅತಿಕ್ರಮಣ ಸಕ್ರಮವಾದಂತೆ ಇಲ್ಲಿ ನಡೆದಿಲ್ಲ, ಹೋರಾಟಗಾರೆ ಎ ರವೀಂದ್ರ ನಾಯ್ಕ ಅವರು ಬಹಳಷ್ಟು ವರ್ಷದಿಂದ ಅತಿಕ್ರಮಣ ಪರವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಅವರ ಹೋರಾಟವನ್ನು ಗಮನಿಸಿ ಕುಮಾರಸ್ವಾಮಿಯವರು ಅವರಿಗೆ ಯಲ್ಲಾಪುರ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ನೀಡಿದ್ದಾರೆ. ನಮ್ಮೊಂದಿಗೆ ರವೀಂದ್ರನಾಥ್ ನಾಯ್ಕ ಅವರನ್ನು ವಿಧಾನಸಭೆಗೆ ಕಳುಹಿಸಿಕೊಟ್ಟಲ್ಲಿ ಅತಿಕ್ರಮಣ ಸಕ್ರಮ ನೂರಕ್ಕೆ ನೂರು ಯಶಸ್ವಿಯಾಗಲಿದೆ ಎಂದು ಭರವಸೆ ನೀಡಿದರು.

ಇಂದು ಕುಮಟಾಕ್ಕೆ ಆಗಮಿಸಲಿರುವ ಕುಮಾರ ಸ್ವಾಮಿಯವರನ್ನು ಸ್ವಾಗತಿಸಲು ಪ್ರದೀಪ ನಾಯಕ ಹಾಗೂ ಅವರ ತಂಡ ಸಿದ್ಧವಾಗಿದ್ದು ಮಣಕಿ ಮೈದಾನದಲ್ಲಿ ಸಕಲ‌ಸಿದ್ಧತೆ ನಡೆದಿದೆ.