ಯಲ್ಲಾಪುರ ; ಯುವ ರೆಡ್ ಕ್ರಾಸ್ ಹಾಗೂ ಕೆ. ಎಂ.ಸಿ ಹುಬ್ಬಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ರಕ್ತದಾನ ಶಿಬಿರ ನಡೆಯಿತು

ಶಿಬಿರವನ್ನು ಉದ್ಘಾಟಿಸಿದ ಕಿಮ್ಸ್ ಹುಬ್ಬಳ್ಳಿ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ.ಅನಿಲಕುಮಾರ, ರಕ್ತವನ್ನು ಜೀವಿತಾವಧಿಯಲ್ಲಿ ಮಾತ್ರ ದಾನವನ್ನು ಮಾಡುವಂತದ್ದು, ಒಬ್ಬರು ನೀಡುವ ರಕ್ತವು 3 ಜನರ ಜೀವನವನ್ನು ಉಳಿಸಲು ಸಾಧ್ಯವಾಗುತ್ತದೆ. ಪ್ರತಿ ದಿನ ಹುಬ್ಬಳ್ಳಿ ಕಿಮ್ಸಗೆ 45 ಯುನಿಟ್ ರಕ್ತ ಅವಶ್ಯಕತೆ ಇದೆ ಅಂದರೆ ತಿಂಗಳಿಗೆ 1400 ಯುನಿಟ್ ರಕ್ತ ಅವಶ್ಯಕತೆ ಇದೆ ಇಷ್ಟು ದೊಡ್ಡ ಪ್ರಮಾಣದ ಬೇಡಿಕೆಗೆ ನಿಮ್ಮಂತಹ ಕಾಲೇಜುಗಳು ರತ್ರದಾನ ಮಾಡಿದರೆ ಮಾತ್ರ ಬರುವಂತಹ ರೋಗಿಗಳಿಗೆ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದ ಅವರು ಪ್ರತಿ ವರ್ಷ ಯಲ್ಲಾಪುರ ಕಾಲೇಜಿನ ಯುವ ರೆಡ್ ಕ್ರಾಸ್ ರಕ್ತದಾನ ಶಿಬಿರ ಏರ್ಪಡಿಸುತ್ತಿರುವುದು ಶ್ಲಾಘನೀಯ ಎಂದರು.

RELATED ARTICLES  ಟಿ.ಎಸ್.ಎಸ್. ಸುಪರ್ ಮಾರ್ಕೆಟ್‍ನಲ್ಲಿ “ಸ್ವಾದ ವೈವಿಧ್ಯ”: ಕಡುಬನ್ನು ಸ್ಥಳದಲ್ಲೇ ತಯಾರಿಸುವ ಸ್ಪರ್ಧೆ

ಕಾರ್ಯಕ್ರಮದಲ್ಲಿ ಯುವ ರೆಡ್ ಕ್ರಾಸ್ ಸಂಚಾಲಕರಾದ ಎಂ.ಎಂ.ಹೆಬ್ಬಳ್ಳಿ ಮಾತನಾಡಿ, ಕಳೆದ 10 ವರ್ಷದಿಂದ ನಮ್ಮ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಹಾಗೂ ಸಾರ್ವಜನಿಕರು ಅತ್ಯಂತ ಉತ್ಸಾಹದಿಂದ ಪಾಲ್ಗೋಂಡು ಶಿಬಿರವನ್ನು ಯಶಸ್ವಿಗೊಳಿಸುತ್ತಾ ಬಂದಿದ್ದಾರೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ದಾಕ್ಷಾಯಣಿ ಜಿ ಹೆಗಡೆ ಮಾತನಾಡಿದರು.

ಕಾಲೇಜಿನ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕರಾದ ಶರತಕುಮಾರ 26 ವಯಸ್ಸಿನಲ್ಲಿ 22 ಬಾರಿ ರಕ್ತದಾನ ಮಾಡಿರುವ ಕುರಿತು ಅವರನ್ನು ಸನ್ಮಾನಿಸಲಾಯಿತು.

RELATED ARTICLES  ಶ್ರೀ ಶ್ರೀ ಮಹೇಶ್ವರ ತಾತನವರಿಗೆ ಗೋಕರ್ಣ ಗೌರವ

ಕಾರ್ಯಕ್ರಮದಲ್ಲಿ ಡಾ.ಅಥಿರಾ ನಾಯರ್ ಡಾ. ಮೇಘಾ ನಾಯ್ಕ, ಕ್ರೀಡಾ ಸಂಚಾಲರಾದ ಡಿ.ಎಸ್.ಭಟ್, ನ್ಯಾಕ್ ಸಂಚಾಲಕರಾದ ಶರತಕುಮಾರ, ಸಹಾಯಕ ಪ್ರಾಧ್ಯಾಪಕರಾದ ಆರ್.ಡಿ.ಜನಾರ್ಧನ, ಭವ್ಯ ಸಿ, ಸುರೇಖಾ ಎಸ್ ತಡವಲ, ಪಿಜಿ.ಹೆಗಡೆ ಭಾಗವಹಿಸಿದ್ದರು.

ಕಾಲೇಜಿನ ವಿದ್ಯಾರ್ಥಿಗಳಾದ ಸಹನಾ ಭಟ್ ಪ್ರಾರ್ಥಸಿದರು, ಪ್ರಧಾನ ಕಾರ್ಯದರ್ಶಿ ಸ್ವಾತಿ ಚೌಹಾಣ ಸ್ವಾಗತಿಸಿದರು , ಎನ್.ಎಸ್.ಎಸ್ ಯೋಜನಾಧಿಕಾರಿ ಡಿ.ಜಿ.ತಾಪಸ್ ವಂದಿಸಿದರು. ನಿಖಿತಾ ಮಡಗಾಂವಕರ ನಿರೂಪಿಸಿದರು.

ರಕ್ತದಾನ ಶಿಬಿರದಲ್ಲಿ ಒಟ್ಟು 45 ಯುನಿಟ್ ರಕ್ತ ಸಂಗ್ರಹವಾಯಿತು.