ಕೋಟ/ಉಡುಪಿ: ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರ ಆಡಳಿತಾವಧಿಯನ್ನು ಮೂರರಿಂದ ಐದು ವರ್ಷಗಳಿಗೆ ಏರಿಸುವುದು ಸಹಿತ ಒಟ್ಟು 13 ಪ್ರಸ್ತಾವಗಳನ್ನು ಪರಿಷತ್‌ನ ಸರ್ವ ಸದಸ್ಯರ ವಿಶೇಷ ಸಭೆ ಅನುಮೋದಿಸಿದೆ. ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ್‌ ಅಧ್ಯಕ್ಷತೆಯಲ್ಲಿ ಗುರುವಾರ ಕೋಟ ಕಾರಂತ ಕಲಾಭವನದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಸಂಬಂಧ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಸಾಪ ಅಧ್ಯಕ್ಷ ಮನುಬಳಿಗಾರ್‌, ಉಪಸ್ಥಿತರಿದ್ದ 802 ಸದಸ್ಯರಲ್ಲಿ ಕೇವಲ ಏಳು ಮಂದಿ ತಿದ್ದುಪಡಿಗಳಿಗೆ ವಿರೋಧ ವ್ಯಕ್ತಪಡಿಸಿದರು. ವಿರೋಧ ವ್ಯಕ್ತಪಡಿಸಿದ ಸದಸ್ಯರಲ್ಲಿ ಮೂವರ ಅನಿಸಿಕೆಗಳನ್ನು ಕೇಳಲಾಯಿತು. ಮತ್ತೂಮ್ಮೆ ತಿದ್ದುಪಡಿಯ ಪರವಾಗಿರುವವರನ್ನು ಕೈ ಎತ್ತುವ ಮೂಲಕ ಗುರುತಿಸಿ ಬಹುಮತ ಪಡೆಯಲಾಯಿತು. ಕೊನೆಯಲ್ಲಿ ಎಲ್ಲ ತಿದ್ದುಪಡಿ ವಿಧೇಯಕ ಬಹುಮತದಿಂದ ಅಂಗೀಕಾರಗೊಂಡಿದೆ ಎಂದು ಹೇಳಿದ ರು. ಜತೆಗೆ ಎರಡು ಲಕ್ಷ ಸದಸ್ಯರಿರುವಾಗ ಚುನಾವಣೆಗೆ 45 ಲಕ್ಷ ರೂ. ಖರ್ಚಾಗುತ್ತಿತ್ತು. ಈಗ 3 ಲಕ್ಷ ಸದಸ್ಯರಿದ್ದಾರೆ. ಈಗ ಚುನಾವಣೆಗೆ 65-70 ಲಕ್ಷ ರೂ. ಅಗತ್ಯವಿದೆ. ಹೀಗಾಗಿ ಐದು ವರ್ಷಗಳಿಗೆ ಏರಿಸಲಾಗಿದೆ ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಗುರುವಾರ ವಜಾಗೊಂಡಿದೆ ಎಂದರು.

RELATED ARTICLES  "ತರಂಗ ಫರ್ನಿಚರ್ ಫೆಸ್ಟಿವಲ್" ಪ್ರಾರಂಭವಾಗಿದೆ.