ಕುಮಟಾ : ಕಳೆದ ವಾರ ಅಂಕೋಲಾ ದಿಂದ ಭಟ್ಕಳಕ್ಕೆ ಗೋವು ಕಳ್ಳಸಾಗಾಣಿಕೆ ಮಾಡುವಾಗ ಸಿಕ್ಕಿಬಿದ್ದ ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಿ ಜಿಲ್ಲೆಯ ಹೆಸರಾಂತ ಹಿಂದೂ ಮುಖಂಡ ಹಾಗೂ ಬಿಜೆಪಿ ನೇತಾರ ಸೂರಜ್ ನಾಯ್ಕ ಸೋನಿಯನ್ನು ಪೊಲೀಸರು ಬಂದಿಸಿದ್ದಾರೆಂದು ತಿಳಿದುಬಂದಿದೆ. ಕಾರ್ಯ ನಿಮಿತ್ತ ದೆಹಲಿ ತೆರಳಿದ್ದ ಅವರನ್ನು, ಬೆಳಿಗ್ಗೆ ಬೆಂಗಳೂರಿಗೆ ಕರೆತಂದಿದ್ದು ಇಂದು ಸಂಜೆಯೊಳಗೆ ಹೊನ್ನಾವರ ತಲುಪುವ ಸಾದ್ಯತೆಗಳಿಗೆ, ಎನ್ನಲಾಗಿದೆ. ಆದರೆ ಈ ಬಗ್ಗೆ ಸೂರಜ್ ನಾಯ್ಕ ಬೆಂಬಲಿಗರು ಆಕ್ರೋಷ ವ್ಯಕ್ತಪಡಿಸಿದ್ದಾರೆ.

ವಿನಾಕಾರಣ, ಕೇವಲ ಮೊಬೈಲ್ ಟವರ್ ಲೊಕೇಶನ್ ಆಧಾರದ ಮೇಲೆ ಸೂರಜ್ಅವರ ಮೇಲೆ 307 ದಂತಹ ಗಂಬೀರ ಕೇಸ್ ನ್ನು ಪೊಲೀಸರು ದಾಖಲಿಸಿದ್ದಾರೆ, ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದು. ಸೂರಜ್ ನಾಯ್ಕ ಅವರ ಪತ್ನಿ ವೀಣಾ ಸೂರಜ್ ನಾಯ್ಕ ಸಹ ಅಸಮಾಧಾನ ಹೊರಹಾಕಿದ್ದಾರೆ.

RELATED ARTICLES  ಹೊಲನಗದ್ದೆಯಲ್ಲಿ ಅಂತಾರಾಷ್ಟೀಯ ಯೋಗ ದಿನ

ಕಳೆದ ಡಿಸೆಂಬರ್ ನಲ್ಲಿ ಐ.ಜಿ. ಕಾರಿಗೆ ಬೆಂಕಿ, ಘಟನೆ ಸಂದರ್ಭದಲ್ಲಿ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ತಿಳಿಯುವ ಗೋಜಿಗೆ ಹೋಗಿಲ್ಲ, ಆ ಘಟನೆ ನಡೆದಾಗ ಸೂರಜ್ ಸೋನಿಯವರು ತಮ್ಮ ನಿವಾಸದಲ್ಲಿಯೇ ಇದ್ದರು. ಆದರೂ, ಆಗ ಅವರ ಮೇಲೆ ವಿನಾಕಾರಣ 307 ಕೇಸ್ ಹಾಕಲಾಗಿತ್ತು ಎಂದು ಸುರಜ್ ನಾಯ್ಕ ಅಭಿಮಾನಿಗಳು ಕಿಡಿ ಕಾರಿದ್ದಾರೆ.

RELATED ARTICLES  ಉತ್ತರಕನ್ನಡದ ಕೊರೋನಾ ವಿವರ ಇಲ್ಲಿದೆ

ಕ್ಷೇತ್ರದ ಜವಾಬ್ಧಾರಿಯುತ ಮುಖಂಡರಾದ ಸೂರಜ್ ಸೋನಿ, ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಾ ಬಂದವರು. ರಸ್ತೆಯ ಬದಿಯಲ್ಲಿ ಜನರು ಸೇರಿದ್ದಾಗ, ನೋಡಿಯು ಕೂಡಾ ವಾಹನ ನಿಲ್ಲಿಸದೆ ಮುಂದೆ ಸಾಗುವ ಜಾಯಮಾನದವರಲ್ಲ, ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಇಂತಹವರ ಮೇಲೆ ವಿನಾಕಾರಣ ಆಪಾದನೆ ಹೊರಿಸಿ ಅವರನ್ನು ತುಳಿಯುವ ಯತ್ನ ನಡೆದಿದೆ ಎಂಬುದು ಸೂರಜ್ ನಾಯ್ಕ ಬೆಂಬಲಿಗರ ಮಾತು.

ಇಂದು ಬಿಜೆಪಿ ಮಂಡಳದ ಸಭೆ ನಡೆದಿದ್ದು ಈ ಸಭೆ ಯಾವ ನಿಟ್ಟಿನಲ್ಲಿ ಸಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ‌ಮಾಡಿದೆ.