ಕರ್ನಾಟಕ ಸರ್ಕಾರದ ಕಲಬುರಗಿ (ಗುಲಬರ್ಗಾ) ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದಲ್ಲಿ ಎಲೆಕ್ಟ್ರೀಷಿಯನ್ ವೃತ್ತಿಯಲ್ಲಿ ಶಿಶಿಕ್ಷು (ಅಪ್ರೆಂಟಿಸ್) ತರಬೇತಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ – 470
ಹುದ್ದೆಗಳ ವಿವರ
ಶಿಶಿಕ್ಷು (ಅಪ್ರೆಂಟಿಸ್) ತರಬೇತಿ ಹುದ್ದೆಗಳು – 472 (ಹೈಕ – 376)
ವಿದ್ಯಾರ್ಹತೆ : ಎಸ್.ಎಸ್.ಎಲ್.ಸಿ ಜೊತೆಗೆ ಎರಡು ವರ್ಷದ ಐಟಿಐ ಶಿಕ್ಷಣ ಪಡೆದಿರಬೇಕು. ಕುಶಲಕರ್ಮಿ ತರಬೇತಿ ಯೋಜನೆಯಡಿ ನಡೆಸುವ ವೃತ್ತಿ ಪರೀಕ್ಷೆಯ ಎಲೆಕ್ಟ್ರೀಷಿಯನ್ ವೃತ್ತಿಯಲ್ಲಿ ತೇರ್ಗಡೆಯಾಗಿ, ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ (ಎನ್.ಸಿ.ವಿ.ಟಿ), ರಾಜ್ಯ ವೃತ್ತಿ ಪ್ರಮಾಣ ಪತ್ರ (ಎಸ್.ಸಿ.ವಿ.ಟಿ) ಅಂಕಪಟ್ಟಿ
ಹೊಂದಿರಬೇಕು. ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 100 ರೂ, ಪ.ಜಾ, ಪ.ಪಂಗಡದವರಿಗೆ 50 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ : ಪ್ರಧಾನ ವ್ಯವಸ್ಥಾಪಕರು (ಆ ಮತ್ತು ಮಾ.ಸಂ.ಆ) ನಿಗಮ ಕಚೇರಿ ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ, ಸ್ಟೇಷನ್ ರಸ್ತೆ ಕಲುಬುರಗಿ – 585102 ಇಲ್ಲಿಗೆ ಸಲ್ಲಿಸವಂತೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19-03-2018

RELATED ARTICLES  ಕರ್ನಾಟಕದಾದ್ಯಂತ ನಿಷೇಧಾಜ್ಞೆ : ಸಾರ್ವಜನಿಕರಿಗೆ ಪೊಲೀಸ್ ಪ್ರಕಟಣೆ.