ಕುಮಟಾ : ಸೂರಜ್ ನಾಯ್ಕ ಸೋನಿ ಬಂಧನದ ಸುದ್ಧಿ ಹಬ್ಬುತಿದ್ದಂತೆ ಜಿಲ್ಲೆಯಲ್ಲಿ ವಾತಾವರಣ ಬಿಸಿಏರ ತೊಡಗಿದೆ.

ದ್ವೇಷದ ರಾಜಕಾರಣದಿಂದ, ಒಂದು ಕ್ಷುಲ್ಲಕ ಪ್ರಕರಣದಲ್ಲಿ 307 ಮುಕದ್ದಮೆ ಹೂಡಿ, ಹಿಂದೂ ಮುಖಂಡ ಸೂರಜ್ ಸೋನಿ ಬಂಧನ ಮಾಡಿರುವುದರಿಂದ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ, ಎಂದು ಹೇಳಲಾಗಿದೆ. ಈ ಬಂಧನದ ಕುರಿತು ಚರ್ಚಿಸಲು ಸ್ಥಳೀಯ ಬಿಜೆಪಿ ಪ್ರಮುಖರು ಈಗಾಗಲೇ ಮನವಿ ಸಲ್ಲಿಸಿದ್ದು ಆಕ್ರೋಶ ಹೊರಹಾಕಿದ್ದಾರೆ.

ಕಳೆದ ಶುಕ್ರವಾರವಷ್ಟೇ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಬಿಜೆಪಿ, ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋದಿ ನೀತಿಯನ್ನು ಖಂಡಿಸಿ, ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಹಾಕಿರುವ ಸುಳ್ಳು ಮುಕದ್ದಮೆಗಳನ್ನು ತಕ್ಷಣ ಕೈಬಿಡುವಂತೆ ಆಗ್ರಹಿಸಿತ್ತು. ಅಲ್ಲದೆ, ಪೋಲೀಸರ ಪಕ್ಷಪಾತ ದೋರಣೆಯ ವಿರುದ್ಧ ಪ್ರತಿಭಟನೆ ಕೈಗೊಳ್ಳುವ ಎಚ್ಚರಿಕೆ ನೀಡಿತ್ತು. ಆದರೂ ಸಹಿತ ಜಿಲ್ಲೆಯ ಬಿಜೆಪಿಯ ಪ್ರಭಾವಿ ಮುಖಂಡರಾದ ಸೂರಜ್ ಸೋನಿಯವರನ್ನೇ ಬಂಧನ ಮಾಡಿರುವದು, ಹಿಂದೂ ಸಂಘಟನೆಗಳ ಹಾಗೂ ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ.

RELATED ARTICLES  ರಾಜ್ಯ ಮಟ್ಟದ ಡಾಕ್ ಸೇವಾ ಪ್ರಶಸ್ತಿಗೆ ಮಂಗಲಾ ಭಾಗ್ವತ ಸಿರ್ಸಿ ಆಯ್ಕೆ

ಮನವಿ‌ನೀಡುವ ಸಂದರ್ಭದಲ್ಲಿ ಮಾಜಿ ಶಾಸಕ ದಿನಕರ ಶೆಟ್ಟಿ,ಬಿಜೆಪಿ ಪ್ರಮುಖರಾದ ನಾಗರಾಜ ನಾಯಕ‌ ತೊರ್ಕೆ, ಯಶೋಧರಾ ನಾಯ್ಕ,ಎನ್ ಎಸ್ ಹೆಗಡೆ ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES  ಅವೈಜ್ಞಾನಿಕ ಚತುಷ್ಪತ ಕಾಮಗಾರಿ : ಮನೆ,ಗದ್ದೆಗೆ ನುಗ್ಗಿದ ನೀರು..!

ಕಳೆದ ಡಿಸೆಂಬರ್ ನಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಅನೇಕ ಅಮಾಯಕ ಹಿಂದೂ ಯುವಕರು ಜೈಲಿನ ಕಹಿ ಅನುಭವ ಕಂಡು ಬಳಲಿದ್ದರೂ, ಇಂದಿಗೂ ಕೋರ್ಟ ಮೆಟ್ಟಲೇರುತ್ತಲೇ ಇದ್ದಾರೆ. ಈಗ ಈ ಪ್ರಕರಣದಲ್ಲೂ ನಿರಾಯಾಸವಾಗಿ ಅನೇಕರನ್ನು 307ರಲ್ಲಿ ಫಿಕ್ಸ್ ಮಾಡಲಾಗುತ್ತಿದ್ದು, ಸ್ಥಳೀಯ ಯುವಕರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ, ಎಂದು ಹೇಳಲಾಗಿದೆ. ಹಿಂದೂ ಮುಖಂಡರ ಸ್ಥಿತಿಯೇ ಹೀಗಿರುವಾಗ, ಇನ್ನೂ ಸಾಮಾನ್ಯ ಹಿಂದೂಗಳ ಗತಿಯೇನು, ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.