ನವದೆಹಲಿ: ಭಾರತ ಮತ್ತು ಶ್ರೀಲಂಕಾಗೆ ಸಂಪರ್ಕ ಕಲ್ಪಿಸಿರುವ ರಾಮಸೇತುವಿಗೆ ಹಾನಿ ಮಾಡದೆ ರಾಷ್ಟ್ರದ ಹಿತದೃಷ್ಟಿಯಿಂದ ಸೇತುಸಮುದ್ರಂ ಯೋಜನೆಗೆ ಪರ್ಯಾಯ ಮಾರ್ಗ ಹುಡುಕುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ರಾಷ್ಟ್ರದ ಹಿತದೃಷ್ಟಿಯಿಂದ ರಾಮಸೇತುವಿಗೆ ಯಾವ ರೀತಿಯಿಂದಲೂ ಹಾನಿಯಾಗದಂತೆ ಸೇತುಸಮುದ್ರಂ ಹಡಗು ಮಾರ್ಗ ಯೋಜನೆ ಅನುಷ್ಠಾನಕ್ಕೆ ಪರ್ಯಾಯ ಮಾರ್ಗವನ್ನು ಹುಡುಕಲಾಗುವುದು ಎಂದು ನೌಕಾ ಸಾರಿಗೆ ಇಲಾಖೆ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಿಳಿಸಿದೆ.

RELATED ARTICLES  ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಗಳಿಗೆ ಕೋಟ್ಯಾಂತರ ರೂಪಾಯಿ ವಂಚನೆ. ಚೆನ್ನೈ ಮೂಲದ ಕನಿಷ್ಕ್ ಗೋಲ್ಡ್ ಪ್ರೈ. ಲಿ.(ಕೆಜಿಪಿಎಲ್) ವಿರುದ್ಧ ಸಿಬಿಐ ಎಫ್ ಐಆರ್ ದಾಖಲು.

ಕಳೆದ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಸೇತುಸಮುದ್ರಂ ಯೋಜನೆಗಾಗಿ ರಾಮಸೇತುವಿಗೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವ ಕುರಿತು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸಮಯ ನೀಡಿತ್ತು.

ರಾಮಾಯಣ ಮಹಾಕಾವ್ಯದಲ್ಲಿ ವಿವರಿಸಿರುವಂತೆ ಶ್ರೀರಾಮನು ರಾವಣನಿಂದ ಪತ್ನಿ ಸೀತೆಯನ್ನು ರಕ್ಷಿಸಲು ಕೋತಿಗಳ ಸೇನೆಯ ಸಹಾಯದಿಂದ ರಾಮಸೇತುವನ್ನು ನಿರ್ಮಿಸಿದನೆಂದು ಲಕ್ಷಾಂತರ ಹಿಂದುಗಳ ನಂಬಿಕೆಯಾಗಿದೆ.

RELATED ARTICLES  ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ಇನ್ನಿಲ್ಲ : ಕಳಚಿದ ಸಾಹಿತ್ಯದ ಕೊಂಡಿ.

ಸೇತುಸಮುದ್ರಂ ಯೋಜನೆಯಲ್ಲಿ ಪೂರ್ವ ಮತ್ತು ಪಶ್ಚಿಮ ಕಡಲ ತೀರಗಳ ನಡುವೆ ಹಡಗುಗಳು ಶ್ರೀಲಂಕಾವನ್ನು ಸುತ್ತಿ ಬರುವುದರ ಬದಲಿಗೆ ಕಡಿಮೆ ಅಂತರದಲ್ಲಿ ಭಾರತ ಮತ್ತು ಶ್ರೀಲಂಕಾಗೆ ಮಾರ್ಗವನ್ನು ಸೂಚಿಸಲು ಯೋಜನೆಯನ್ನು ರೂಪಿಸಲಾಗಿದೆ