ಕುಮಟಾ : ತಾಲೂಕಿನ ಮಣಕಿ ಮೈದಾನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ನೇತ್ರತ್ವದಲ್ಲಿ ಕುಮಾರಪರ್ವ ಬ್ರಹತ್ ಸಾರ್ವಜನಿಕ‌ ಸಭೆ ಯಶಸ್ವಿಯಾಗಿ ಸಂಪನ್ನಗೊಂಡಿತು.

ರಾಜ್ಯದಲ್ಲಿ ನಮ್ಮ ಜೆಡಿಎಸ್ ಅಧಿಕಾರಕ್ಕೆ ಬಂದರೆ ಅಧಿಕಾರಿಗಳ ಸಲಹೆ-ಸೂಚನೆ-ಮಾರ್ಗದರ್ಶನ ಪಡೆದು ಅಧಿಕಾರ ನಡೆಸುವುದಿಲ್ಲ. ರಾಜ್ಯದ ಜನತೆಯ ಸಲಹೆ ಪಡೆದು ಅಧಿಕಾರ ನಡೆಸಲಾಗುವುದು ಹಾಗೂ ವಿಧಾನ ಸೌಧದಲ್ಲಿ ಕುಳಿತುಕೊಳ್ಳುವುದಿಲ್ಲ.ಹಳ್ಳಿಗೆ ಬಂದು ಜನರ ಸಮಸ್ಯೆ ಅರಿತು ಅದಕ್ಕೆ ಪರಿಹಾರ ನೀಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಜನತೆಗೆ ಭರವಸೆ ನೀಡಿದರು.ಪಟ್ಟಣದ ಮಣಕಿ ಮೈದಾನದಲ್ಲಿ ಜೆಡಿಎಸ್ ಪಕ್ಷದ ವಿಕಾಸ ಪರ್ವದ ಬೃಹತ್ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.ಬಿಸಿಲ ಝಳದಲ್ಲಿ ಜನತೆಯನ್ನು ಕುಳ್ಳಿರಿಸಿದ್ದಕ್ಕಾಗಿ ಕ್ಷಮೆಯಾಚಿಸಿ ಅವರು ಮಾತು ಮುಂದುವರಿಸಿದರು.

ಉತ್ತರಕನ್ನಡದಲ್ಲಿಯೇ ಒಂದು ವಾರ ಉಳಿದು ಅತಿಕ್ರಮಣದಾರರ ಸಮಸ್ಯೆಗೆ ಪರಿಹರಿಸುವ ಪ್ರಯತ್ನ ಮಾಡುತ್ತೇನೆ, ರೈತರ ಸಾಲ‌ಮನ್ನಾ ಮಾಡುವ ಬಗ್ಗೆ ಜೆಡಿಎಸ್ ಚಿಂತನೆ ನಡೆಸಿದೆ ಎಂದರು. ಮೇಲ್ನೋಟಕ್ಕೆ ಉತ್ತರಕನ್ನಡ ಸಂಪನ್ನ ಎನಿಸಿದರೂ ಬಡವರು ಹಾಗೂ ವಯೋವೃದ್ಧರಿಗಾಗಿ ಆರೋಗ್ಯ ಸಂಬಂಧಿ ಮೆಡಿಕಲ್ ಕಾಲೇಜ್ ಬಗ್ಗೆ ನಮ್ಮ ಸರಕಾರ ಚಿಂತನೆ ನಡೆಸಲಿದೆ ಎಂದರು.

RELATED ARTICLES  ಕಾರಿನಲ್ಲಿದ್ದ ಚಿನ್ನ ಕದ್ದ ಆರೋಪಿ ಪೊಲೀಸ್ ಬಲೆಗೆ..!

ರಾಜ್ಯದ ರೈತರ, ಬಡವರ, ಮಹಿಳೆಯರ ಸಮಸ್ಯೆಯನ್ನು ತಿಳಿದುಕೊಂಡಿದ್ದೇನೆ. ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದು ನೋಡಿ. ಮತ ನೀಡಿದವರಿಗೆ ಯಾವತ್ತೂ ಅನ್ಯಾಯ ಮಾಡುವುದಿಲ್ಲ.ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಜಾತಿ ಜಾತಿಗಳ ನಡುವೆ ಸಂಘರ್ಷ ಉಂಟುಮಾಡುತ್ತ ರಾಜಕೀಯ ಮಾಡುತ್ತಿದೆ.ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಪುಕ್ಕಟ್ಟೆ ಪಡಿತರ ನೀಡಲು ಹೋಗಿ ಬಡವರನ್ನು ದರೋಡೆಮಾಡುತ್ತಿದೆ ಎಂದರು.

FB IMG 1521206530850 2

ರಾಜ್ಯದಲ್ಲಿ ಕುಮಾರಪರ್ವ ಆರಂಭಗೊಂಡಿದ್ದು, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಕುಮಟಾ ಹೊನ್ನಾವರ ಕ್ಷೇತ್ರದ ಜೆಡಿಎಸ್‌ ಘೋಷಿತ ಅಭ್ಯರ್ಥಿ ಪ್ರದೀಪ ನಾಯಕ ದೇವರಬಾವಿ ಹೇಳಿದರು. ಅವರು ಕುಮಟಾದಲ್ಲಿ ನಡೆದ ಕುಮಾರಪರ್ವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿ ವೇದಿಕೆಯಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದರು.

RELATED ARTICLES  ಬಡಗಣಿಯಲ್ಲಿ ಯುಗಾದಿ, ಸಮ್ಮಾನ, ರೂಪಕ

ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಿಜೆಪಿ ಕಾಂಗ್ರೆಸ್‌ ವಿಫಲಗೊಂಡಿದ್ದು, ರಾಜ್ಯದ ಜನರಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್‌ ಕಡೆಗೆ ಮುಖ ಮಾಡಿದ್ದಾರೆ. ಬಯಲು ಸೀಮೆ ಅಲ್ಲದೇ ಉತ್ತರ ಕರ್ನಾಟಕ ಮಧ್ಯ ಕರ್ನಾಟಕದಲ್ಲೂ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ ಎಂದು ಕಾರವಾರ ಅಂಕೋಲಾ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಹರ್ಷ ವ್ಯಕ್ತಪಡಿಸಿದರು. ಮಧು ಬಂಗಾರಪ್ಪ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧವಾಗಿ ಕಿಡಿ ಕಾರಿದರು.

ಕಾರ್ಯಕ್ರಮದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜೆಡಿಎಸ್ ಬೆಂಬಲಿಗರು ಹಾಗೂ ಕಾರ್ಯಕರ್ತರು ಹಾಜರಿದ್ದರು. ಬಿಜೆಪಿಯಲ್ಲಿ ಗುರ್ತಿಸಿಕೊಂಡಿದ್ದ ಅಬ್ಧುಲ್ ಘನಿ ಹಾಗೂ ಲಲಿತಾ ಪಟಗಾರ ಜೆಡಿಎಸ್ ಸೇರ್ಪಡೆಗೊಂಡರು. ಮುಖರಾದ ಭಾಸ್ಕರ ಪಟಗಾರ, ಲಲಿತಾ ಪಟಗಾರ,ಈಶ್ವರ ನಾಯ್ಕ ಹಾಗೂ ಇನ್ನಿತರರು ಹಾಜರಿದ್ದರು.ದೇವರಬಾವಿಯಿಂದ ಕುಮಟಾದವರೆಗೆ ನಡೆದ ಬೈಕ್‌ ರ್ಯಾಲಿ ಎಲ್ಲರ ಗಮನ ಸೆಳೆಯಿತು.