ಹೊನ್ನಾವರ: ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರ ಜನ್ಮದಿನದ ನಿಮಿತ್ತ ಶುಕ್ರವಾರ ನಗರದ ಸಾರ್ವಜನಿಕ ಆಸ್ಪತ್ರೆ ಒಳ ರೋಗಿಗಳಿಗೆ ಹಳದೀಪುರ ಜಿ.ಪಂ ಸದಸ್ಯರು ಮತ್ತು ಕೃಷಿ ಮತ್ತು ಸ್ಥಾಯೀ ಸಮೀತಿ ಅಧ್ಯಕ್ಷರೂ ಆದ ಶಿವಾನಂದ ಹೆಗಡೆ ಕಡತೋಕಾ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

RELATED ARTICLES  ಕುಮಟಾ ಹೊನ್ನಾವರದ ಜನ ನನ್ನವರು : ಪಕ್ಷ ಬೇಧ ಇಲ್ಲದೆ ಎಲ್ಲರಿಗೂ ಸಹಾಯ ಮಾಡುವ ಉದ್ದೇಶ ನನ್ನದು : ಶಾಸಕ ದಿನಕರ ಶೆಟ್ಟಿ.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ರಾಜ್ಯ ಕಂಡ ದೀಮಂತ ರಾಜಕಾರಣಿ ಆರ್.ವಿ.ದೇಶಪಾಂಡೆಯವರು. ಸಚಿವ ದೇಶಪಾಂಡೆಯವರ ಕ್ರಿಯಾಶೀಲತೆ ಮತ್ತು ದೂರದೃಷ್ಟಿ ಶ್ಲಾಘನೀಯ. ನುಡಿದಂತೆ ನಡೆಯುವ ಮೇರು ವ್ಯಕ್ತಿತ್ವದ ರಾಜಕಾರಣಿಯಾಗಿರುವ ಸಚಿವ ದೇಶಪಾಂಡೆಯವರಿಗೆ ಜನ್ಮದಿನದ ಶುಭಾಶಯಗಳು. ಇನ್ನೂ ಈ ರಾಜ್ಯ, ರಾಷ್ಟ್ರದ ಸೇವೆಯನ್ನು ಸಲ್ಲಿಸಲು ಭಗವಂತ ಅವರಿಗೆ ಆಯುರಾರೋಗ್ಯ ನೀಡಿ ಶಕ್ತಿಯನ್ನು ನೀಡಲಿ ಎಂದು ಶುಭ ಹಾರೈಸಿದರು.

RELATED ARTICLES  ಹಸುಗೂಸಿನೊಂದಿಗೆ ಆತ್ಮಹತ್ಯೆಗೆ ಶರಣಾದ ತಾಯಿ.

ಈ ಸಂದರ್ಭದಲ್ಲಿ ಶಿವಾನಂದ ಹಗಡೆ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಆಸ್ಪತ್ರೆಯ ವೈದ್ಯರುಗಳು, ಸಿಬ್ಬಂದಿಗಳು ಹಾಜರಿದ್ದರು.