ಕುಮಟಾ: ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅನುದಾನದಡಿ ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾಮದ ಕಡ್ಲೆ ತೀರದಲ್ಲಿ ಮೀನುಗಾರಿಕಾ ರ್ಯಾಂಪ್ ನಿರ್ಮಾಣಕ್ಕೆ ಚಾಲನೆ ದೊರೆತಿದೆ.

ಅಂದಾಜು ಮೊತ್ತ 5.00 ಲಕ್ಷ ರೂ ನಲ್ಲಿ ನಿರ್ಮಾಣವಾಗಲಿರುವ ರ್ಯಾಂಪ್ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ನೆರವೇರಿಸಿದರು. ನಂತರ ಮಾತನಾಡಿದ ಅವರು ಇಲ್ಲಿಯ ಜನತೆ ಅನೇಕ ಬಾರಿ ನನ್ನಲ್ಲಿ ಮನವಿ ಮಾಡಿದ್ದರು ಈಗ ಆ ಕಾಮಗಾರಿ ಪೂರ್ಣಗೊಂಡಿದೆ. ಜನತೆಯ ಮನವಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ ಸಮಾಧಾನ ನನಗಿದೆ ಎಂದರು.

RELATED ARTICLES  ಬರುತ್ತಿದೆ "ಉದಯ ಉತ್ಸವ" : ಗ್ರಾಹಕರಿಗೆ ಬಂಪರ್ ಆಫರ್ ಗಳ ಸುರಿಮಳೆ.

ಈ ಸಂದರ್ಭದಲ್ಲಿ ಹೊಲನಗದ್ದೆ ಗ್ರಾ. ಪಂ. ಅಧ್ಯಕ್ಷರಾದ ಶ್ರೀ ರಾಘವೇಂದ್ರ ಪಟಗಾರ,ಮುಖಂಡರಾದ ಎಂ, ಎಂ, ಹೆಗಡೆ,ವಿ,ಎಲ್,ನಾಯ್ಕ,ತಾರಾ ಗೌಡ, ಸುರೇಖಾ ವಾರೇಕರ, ಯುವ ಮುಖಂಡರಾದ ರಾಜು ಅಂಬಿಗ ಹಾಗೂ ಮಹೇಂದ್ರ ಅಂಬಿಗ ಉಪಸ್ಥಿತರಿದ್ದರು.

RELATED ARTICLES  ಕಾರ್ಯಕ್ರಮದಲ್ಲಿ ತಲೆಸುತ್ತು ಬಂದು ಪ್ರಜ್ಞೆ ತಪ್ಪಿದ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು