ಎಣ್ಮಕಜೆ: ವಲಯದ ನಿಷ್ಠಾವಂತ ಗುರು ಭಕ್ತ ಅಬರಾಜೆ ಘಟಕದ ಗುರಿಕ್ಕಾರ ಹಾಗು ಎಣ್ಮಕಜೆ ವಲಯ ಸೇವಾ ವಿಭಾಗ ಪ್ರಧಾನ ಶಂಕರ ನಾರಾಯಣ ಪ್ರಕಾಶ ಅಬರಾಜೆ ಇವರ ನಿವಾಸದಲ್ಲಿ ತಾ 12/3/2018 ರಂದು ಮಧ್ಯಾಹ್ನ ಅನಿರೀಕ್ಷಿತ ಅಗ್ನಿ ದುರಂತ ಸಂಭವಿಸಿ ಅವರ ಹಟ್ಟಿ ಕೊಟ್ಟಿಗೆಗಳು ಸಂಪೂರ್ಣ ಸುಟ್ಟು ಬಸ್ಮವಾಗಿ ಅಪಾರ ಪ್ರಮಾಣದ ನಷ್ಟ ಉಂಟಾಯಿತು.

* ಈ ಸಂಧರ್ಭದಲ್ಲಿ ತಕ್ಷಣ ಸ್ಪಂದಿಸಿದ ಎಣ್ಮಕಜೆ ವಲಯದ ಗುರು ಭಕ್ತ ಕಾರ್ಯಕರ್ತರು ಅಲ್ಲಿ ತೆರಳಿ ಅಗ್ನಿ ಮನೆಗೆ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು ಅಗ್ನಿ ಶಾಮಕ ದಳದವರನ್ನೂ ಕರೆಸಿ ಬೆಂಕಿ ನಿಯಂತ್ರಣಕ್ಕೆ ಶಕ್ತಿ ಮೀರಿ ಶ್ರಮಿಸಿ ಸಹಕರಿಸಿದರು.

RELATED ARTICLES  ಬದಲಾವಣೆ ಇಲ್ಲದಿರುವುದೇ ಬದಲಾವಣೆ : ನಿವೃತ್ತ ಜಿಎಸ್'ಟಿ ಕಮಿಷನರ್ ಗೌರಿಬಣಗಿ

* ವಿಷಯ ತಿಳಿದ ಕುಲಗುರುಗಳಾದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ದು:ಖಿತರಾಗಿರುವ ಅಬರಾಜೆ ಕುಟುಂಬಕ್ಕೆ ಆಶೀರ್ವದಿಸಿ ಫಲ ಮಂತ್ರಾಕ್ಷತೆ ಹಾಗೂ ಸಂದೇಶ ವನ್ನು ಮಾಹಾಮಂಡಲ ಕಾರ್ಯದರ್ಶಿಗಳ ಮೂಲಕ ಮಂಡಲ ಅಧ್ಯಕ್ಷರಿಗೆ ತಲಪಿಸಿ, ಮುಳ್ಳೇರಿಯ ಮಂಡಲ ಅಧ್ಯಕ್ಷರಾದ ಶ್ರೀ ಶ್ರೀಕೃಷ್ಣ ಭಟ್, ಮಂಡಲ ಕಾರ್ಯದರ್ಶಿ ಶ್ರೀ ಬಾಲಸುಬ್ರಹ್ಮಣ್ಯ ಸರ್ಪಮಲೆ, ಮಂಡಲ ಸಂಘಟನಾ ಕಾರ್ಯದರ್ಶಿ ಶ್ರೀ ಶ್ರೀಕೃಷ್ಣ ಭಟ್ ಮೀನಗದ್ದೆ, ವಲಯ ಅಧ್ಯಕ್ಷರಾದ ಶ್ರೀ ಶಿವಪ್ರಸಾದ ವರ್ಮುಡಿ, ವಲಯ ಕಾರ್ಯದರ್ಶಿ ಶಂಕರ ಪ್ರಸಾದ ಕುಂಚಿನಡ್ಕ ಹಾಗೂ ಇತರರು ಅಬರಾಜೆ ಮನೆಗೆ 14/03/3018 ರಂದು ಸಂಜೆ ಭೇಟಿ ಇತ್ತು ಮನೆದೇವರ ಸಾನಿಧ್ಯದಲ್ಲಿ ಅಬರಾಜೆ ಕುಟುಂಬಕ್ಕೆ ನೀಡಿ ಮುಂದಿನ ಕಾರ್ಯಗಳ ಬಗ್ಗೆ ಸಮಾಲೋಚನೆ ಮಾಡಿದರು.
ತಾ 17/03/2018 ರಂದು ಅಬರಾಜೆ ನಿವಾಸದಲ್ಲಿ ಎಣ್ಮಕಜೆ ವಲಯದ ವತಿಯಿಂದ ಶ್ರಮದಾನ ಮೂಲಕ ಮುಂದಿನ ಕಾರ್ಯಕ್ಕೆ ಅನುಕೂಲವಾಗುವಂತೆ ಸಹಾಯ ಮಾಡಲು ತೀರ್ಮಾನಿಸಲಾಯಿತು.

RELATED ARTICLES  ವೀಕೆಂಡ್ ಕರ್ಫ್ಯೂ ದಾಖಲಾಯ್ತು 314 ಕೇಸ್..!