ಮುಕ್ರಿ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮವು ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಮುರಳೀಧರ ಪ್ರಭು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಅವರು ಮಾತನಾಡಿ ಪ್ರತಿಭೆ ಯಾರ ಸ್ವತ್ತು ಅಲ್ಲ, ಎಲ್ಲರಲ್ಲು ಪ್ರತಿಭೇ ಇರುತ್ತದೆ ಅದನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲ. ಸರಕಾರ ನಿಮಗೆ ಎಲ್ಲಾ ರೀತಿಯ ಸೌಲಭ್ಯಗಳನ್ನ ನೀಡಿದೆ. ಅದನ್ನು ನೀವು ಸರಿಯಾಗಿ ಬಳಸಿಕೊಳ್ಳಬೇಕು ಎಂದರು..

RELATED ARTICLES  ಕುಮಟಾಕ್ಕೆ ಆಗಮಿಸಲಿದ್ದಾರೆ ರಾಹುಲ್ ಗಾಂಧಿ!

ಎ.ವಿ.ಬಾಳಿಗಾ ಕಾಲೇಜಿನ ಉಪನ್ಯಾಸಕರಾದ ಜಿ.ಎಲ್.ಹೆಗಡೆ ಮಾತನಾಡಿ ನಮ್ಮ ಸಮಾಜದ ಜನರನ್ನ ಮುಂದೆ ತರಬೇಕು, ಒಳಿತನ್ನು ಸಾಧಿಸಬೇಕು, ಸಮಾಜದಲ್ಲಿ ಒಂದು ಗೌರವನ್ನ ಪ್ರಾರಂಭವಾಗಬೇಕು ಎನ್ನುವ ಉದ್ದೇಶದಿಂದ ಯುವಶಕ್ತಿ ಪ್ರಾರಂಭವಾಗಿದೆ. ನಾವು ಸಂಸ್ಕಾರವನ್ನ ಬೆಳೆಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮುಕ್ರಿ ಸಮಾಜದ ವಿದ್ಯಾರ್ಥಿಗಳನ್ನ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯನ್ನ ಸನ್ಮಾನಿಸಲಾಯಿತು. ನಂತರ ಹವ್ಯಕ ಮಂಡಲದ ಅಧ್ಯಕ್ಷ ಮಂಜುನಾಥ ಭಟ್ಟಸುವರ್ಣಗದ್ದೆ ಮಾತನಾಡಿ 4 ಲಕ್ಷದ 70 ಸಾವಿರ ರೂ ಯನ್ನ ಇಮಾಮಿ ಫೌಂಡೇಶನ್ ಹಾಗೂ ರಾಮಚಂದ್ರಪುರ ಮಠದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡುತ್ತಿದೆ. ಯಾರು ಹಣದ ತೊಂದರೆಯಿಂದಾಗಿ ವಿದ್ಯೆಯನ್ನ ನಿಲ್ಲಿಸುವಂತಹ ಪರಿಸ್ಥಿತಿ ಎದುರಾಗುತ್ತದೆಯೋ ಅವರಿಗೆ ಮಾತ್ರ ಎಂದರು..

RELATED ARTICLES  ಕಾಂಗ್ರೇಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ನಾಳೆ ಹೊನ್ನಾವರಕ್ಕೆ

ಕಾರ್ಯಕ್ರಮದಲ್ಲಿ ರಾಮಚಂದ್ರಪುರ ಮಠದ ಸಹಕಾರ್ಯದರ್ಶಿ ಸತೀಶ್ ಭಟ್ಟ, ಹಿಂದು ಮುಕ್ರಿ ಸಮಾಜದ ಅಧ್ಯಕ್ಷ ಎನ್.ಆರ್.ಮುಕ್ರಿ, ಮಾರುತಿ ಮುಕ್ರಿ ಹಾಗೂ ಮುಕ್ರಿ ಸಮಾಜದವರು ಉಪಸ್ಥಿತರಿದ್ದರು.