ಯಲ್ಲಾಪುರ: ಮುಂಬರುವ ವಿಧಾನಸಭಾ ಚುನಾವಣೆಯ ಪಕ್ಷ ಸಂಘಟನೆ ದೃಷ್ಟಿಯಿಂದ ಹಮ್ಮಿಕೊಳ್ಳಲಾದ ಕುಮಾರಪರ್ವ ವಿಕಾಸಯಾತ್ರೆ ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಜನತೆಯಲ್ಲಿ ಸಂಚಲನ ಉಂಟುಮಾಡಿ, ಯಶಸ್ವಿಯಾಗಿದೆ ಎಂದು ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಘೋಷಿತ ಅಭ್ಯರ್ಥಿ ಎ. ರವೀಂದ್ರ ನಾಯ್ಕ ಹೇಳಿದರು.

ಅವರು ಈ ಕುರಿತು ಹೇಳಿಕೆ ನೀಡಿ, ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷದೊಂದಿಗೆ ತೀವ್ರ ಪೈಪೋಟಿ ನೀಡುವ ಮುನ್ಸೂಚನೆಯೊಂದಿಗೆ ಪಕ್ಷದ ಪ್ರಭಾವವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕ್ಷೇತ್ರದ ಪಾದಾರ್ಪಣೆಯಿಂದ ಹೆಚ್ಚಿಸಿಕೊಂಡಿದೆ. ಕಳೆದ 5 ವರ್ಷದಿಂದ ಪಕ್ಷದ ನಾಯಕತ್ವದ ಕೊರತೆಯಿಂದ ಪಕ್ಷದ ಕಾರ್ಯಕರ್ತರು ಚೆಲ್ಲಾಪಿಲ್ಲಿಯಾಗಿ ಪಕ್ಷದ ಸಂಘಟನೆಯಲ್ಲಿ ಸಾಮರಸ್ಯ ಸಂಘಟನಾ ಶಕ್ತಿ ಕೊರತೆಯಿಂದ ಬಡವಾಗಿದ್ದ ಜೆ.ಡಿ.ಎಸ್. ಪಕ್ಷ ಇಂದಿನ ಪಕ್ಷದ ವೈಭವಕ್ಕೆ ಪುನರಾವರ್ತನೆಯಾಗುವ ಸಂಕೇತವು ಕುಮಾರಪರ್ವ ವಿಕಾಸಯಾತ್ರೆಯಿಂದ ಪರಿಚಯವಾಗಿದೆ ಎಂದು ಅನೇಕ ಜನ ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES  ಇಂದು ಉತ್ತರ ಕನ್ನಡದಲ್ಲಿ ಮೂರು ಜನರಿಗೆ ಕೊರೋನಾ ಪಾಸಿಟೀವ್..! ಅಂಕೋಲಾಕ್ಕೂ ಕಾಲಿಟ್ಟ ಕೊರೋನಾ

ಸಂಪೂರ್ಣ ಧೃತಿಗೆಟ್ಟಿರುವ ಪಕ್ಷದ ಕಾರ್ಯಕರ್ತರಿಗೆ ಕುಮಾರಸ್ವಾಮಿ ಆಗಮನ ನೈತಿಕ ಸ್ಥೈರ್ಯದೊಂದಿಗೆ ರಾಷ್ಟ್ರೀಯ ಪಕ್ಷದೊಂದಿಗೆ ಪೈಪೋಟಿ ನೀಡುವ ಹುಮ್ಮಸ್ಸನ್ನು ಕಾರ್ಯಕರ್ತರು ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ, ವಿಧಾನ ಪರಿಷತ್ ಸ್ಥಳೀಯ ಸಂಸ್ಥೆ ಚುನಾವಣೆ ಕಣದಿಂದ ಪಕ್ಷದ ಅಭ್ಯರ್ಥಿ ಹಿಂದೆ ಸರಿದಿರುವುದು, ಲೋಕ ಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ನಾಮಪತ್ರ ಹಿಂದಕ್ಕೆ ಪಡೆದಿರುವುದು, ಸ್ಥಳೀಯ ಸಂಸ್ಥೆ ಗ್ರಾಮ ಪಂಚಾಯತ, ತಾಲೂಕು ಪಂಚಾಯತ ಹಾಗೂ ಜಿಲ್ಲಾ ಪಂಚಾಯತ ಚುನಾವಣೆಯಲ್ಲಿ ಪಕ್ಷದ ನಾಯಕತ್ವ ಹಾಗೂ ಸಂಪನ್ಮೂಲ ಕೊರತೆಯಿಂದ ಧೃತಿಗೆಟ್ಟಿರುವ ಪಕ್ಷಕ್ಕೆ ಉಸ್ತುವಾರಿಯನ್ನಾಗಿ ಹಿರಿಯ ವಕೀಲ ಹಾಗೂ ಅರಣ್ಯ ಅತಿಕ್ರಮಣದಾರರ ಹೋರಾಟಗಾರ ಎ.ರವೀಂದ್ರ ನಾಯ್ಕರನ್ನು ನೇಮಿಸಿದ ಹಿನ್ನೆಲೆಯಲ್ಲಿ ಸಂಘಟನೆಯಲ್ಲಿ ಸಕ್ರೀಯವಾಗಿ ತಮಗೆ ಜವಾಬ್ದಾರಿ ವಹಿಸಿರುವುದು ಸಂಘಟನೆಗೆ ಬಲ ಬಂದಿದೆ ಎಂಬುದನ್ನು ಕುಮಾರಪರ್ವ ಕಾರ್ಯಕ್ರಮದಲ್ಲಿ ವ್ಯಕ್ತವಾಗಿರುವುದು ವಿಶೇಷವಾಗಿದೆ.

RELATED ARTICLES  ಬಾವಳದಲ್ಲಿ ಮೊದಲ ಕಾಮಗಾರಿಗೆ ಶಾಸಕ ಸತೀಶ ಸೈಲ್ ಚಾಲನೆ

ಬೂದಿ ಮುಚ್ಚಿದ ಕೆಂಡದಂತೆ ಇದ್ದು ಪಕ್ಷದ ಸಂಘಟನೆ ಒಮ್ಮೆಲೆ ಜನಸ್ತೋಮದೊಂದಿಗೆ ಅಭೂತಪೂರ್ವ ರ‌್ಯಾಲಿಯೊಂದಿಗೆ ವಿಕಾಸಯಾತ್ರೆಯ ವಿಶೇಷ ಬಸ್ ನಗರ, ಗ್ರಾಮೀಣ ಪ್ರದೇಶಗಳಲ್ಲೆಲ್ಲಾ ಪಕ್ಷದ ಬ್ಯಾನರ್, ಪತಾಕೆ, ಕಟ್‍ ಔಟ್‍ಗಳೊಂದಿಗೆ ರಾರಾಜಿಸುತ್ತಿರುವುದು ಪಕ್ಷದ ಬೆಳವಣಿಗೆಯಲ್ಲಿಯೂ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ ಎಂದರೆ ತಪ್ಪಾಗಲಾರದು ಎಂದವರು ಪಕ್ಷದ ಬೆಳವಣಿಗೆ ‌ಕುರಿತು ಮಾಹಿತಿ ನೀಡಿದ್ದಾರೆ.